ನ್ಯೂಸ್

ಈ ರಾಶಿಯವರ ತಾಪತ್ರಯಕ್ಕೆ ಪರಿಹಾರ ಮೌನ-ತಾಳ್ಮೆ: ವಾರಭವಿಷ್ಯ

ಮೇಷ

ಉತ್ತರಾಯಣದ ಜ್ಯೇಷ್ಠ ಮಾಸದ ಅಂತ್ಯಕ್ಕೆ ಬಂದು ತಲುಪಿ ಸೂರ್ಯನು ಕಟಕ ರಾಶಿಯಲ್ಲಿ ಸಾಗುವ ಸಮಯ ಬಂದಿದೆ. ಅಂದರೆ ಆಷಾಢ ಮಾಸದ ಜುಲೈ 16ರಂದು ದೇವತೆಗಳು ಶಯನಿ ಏಕಾದಶಿ ದಿನದಿಂದ ಅವರು ಷೋಡಷಕರ್ಮ ಮಾಡುವ ಕಾಲ ಮುಗಿದು ವ್ರತಗಳು ಆರಂಭವಾಗುವ ದಿನ ಬೇಕಿದೆ. ಮೇಷ ರಾಶಿಯ ಸೂರ್ಯನು 5ನೇ ಮನೆಗೆ ಬಂದು ನಿಮ್ಮ ಉದ್ವೇಗ ದುಃಖ ದುಮ್ಮಾನ ಸರಿಪಡಿಸುವ ಸಮಯ. ವಿಷ್ಣುವನ್ನು ಆರಾಧಿಸಿ.

ವೃಷಭ

4,6, ಜುಲೈ ಮಾತ್ರ ಶುಭದಿನವಾಗಿದ್ದು 11 ಜುಲೈವರೆಗೂ ನೀವು ಮಾಡುವ ಕೆಲಸ ಆರಂಭ ಮಾಡಿ. ವ್ಯವಹಾರಗಳನ್ನು ಸರಿಪಡಿಸಿಕೊಳ್ಳುವ ಸಮಯವಿದು. 4,6ರಂದು ಜಾಗರೂಕರಾಗಿ ಸಾಗಿದಲ್ಲಿ ಈ ವಾರದ ಅಶುಭದಾಟಿ ಅಭಿವೃದ್ಧಿಯೆಡೆಗೆ ಸಾಗುತ್ತೀರ. ದುರ್ಗಾರಾಧನೆ ಇರಲಿ. ಪಂಢರೀನಾಥನನ್ನು ಪೂಜಿಸಿ.

ಮಿಥುನ

ರಾಶ್ಯಾಧಿಪತಿ ಬುಧನು ದ್ವಾದಶದಲ್ಲಿದ್ದು ಬುಧನ ಮನೆಯಲ್ಲಿ ಸೂರ್ಯನಿರುವುದು ಮಿತ್ರಕ್ಷೇತ್ರ. 9ರ ಗುರುವಿನ ಸಂಚಾರವು ಅಲ್ಪ ನೆಮ್ಮದಿ ನೀಡುತ್ತದೆ. ಅಷ್ಟಮ ಶನಿಯ ತಾಪವಿದ್ದು ಎಲ್ಲ ವಿಚಾರ ವಿಷಯಗಳು ಸುಸೂತ್ರವಾಗಿ ನಡೆಯುವುದಿಲ್ಲ. ನಾನು ನನ್ನದು ಎಂಬ ಅಹಂಕಾರ ಬಿಟ್ಟರೆ ದತ್ತನು ಕೈ ಹಿಡಿಯುತ್ತಾನೆ. ದತ್ತಾರಾಧನೆ ಇರಲಿ- ಶನಿಗೆ ಶಿವಾರಾಧನೆ ಮಾಡಿ.

ಕಟಕ

14.7.2021 ಕರ್ಕಾಟಕ ಸಂಕ್ರಮಣ ಆಗಲಿದ್ದು ರಾಶಿಗೆ ಸೂರ್ಯನು ಬರುತ್ತಾನೆ. ಉಷ್ಣಾಂಶದ ಶರೀರಬಾಧೆ ವಿಶೇಷವಾಗಿ ಪಿತ್ತ ಕಫ ನೇತ್ರ ರೋಗಗಳು ಬರಲಿವೆ. ಎಚ್ಚರವಾಗಿರಿ. ಕೂಡಲೇ ವೈದ್ಯರನ್ನು ಕಂಡು ಔಷಧೋಪಚಾರ ಮಾಡಿಕೊಳ್ಳಿ. ಸೂರ್ಯಾಷ್ಟಕ ಓದಿದರೆ ರೋಗಗಳು ಮಾಯವಾಗುತ್ತವೆ.

ಸಿಂಹ

ಏಕಾದಶ ಸೂರ್ಯನು ದ್ವಾದಶಕ್ಕೆ ಬರಲಿದ್ದಾನೆ. ಸೂರ್ಯ ಚಂದ್ರರು ಹಿಂದೆ ಮುಂದೆ ಇದ್ದು ನಿಮ್ಮ ಏನೇ ಪ್ರಾರ್ಥನೆ ಇದ್ದರೂ ಆಲಿಸುತ್ತಾರೆ. ಆರರ ಶನಿ ಏಳರ ಗುರು ಶುಭ ತರುವುದರಲ್ಲಿ ಸಂದೇಹವಿಲ್ಲ. ಶರೀರವನ್ನು ಆಯಾಸಕ್ಕೆ ಈಡು ಮಾಡಬೇಡಿ. ಈಶ್ವರನನ್ನು ಪೂಜಿಸಿ. ಸಂತೋಷ ಶರೀರ ಸ್ವಾಸ್ಥ್ಯನ್ನು ಅನುಭವಿಸಿ.

ಕನ್ಯಾ

ಕನ್ಯಾ ರಾಶಿಗೆ ಏಕಾದಶ ಸೂರ್ಯನು ಶುಭವನ್ನು ಉಂಟುಮಾಡಿದರೂ ಕುಜ ಶುಕ್ರರು ಅಲ್ಲೇ ಇದ್ದು ಪೂರ್ಣ ಸ್ವಾತಂತ್ರ್ಯ ಕೊಡುವುದಿಲ್ಲ. 5ರಲ್ಲಿ ಶನಿಯು, ಆರರಲ್ಲಿ ಗುರುವಿರುವುದು ರಾಶಿಗೆ ಸಮರ್ಪಕ ಸ್ಥಾನವಿಲ್ಲ. ದಕ್ಷಿಣಾಮೂರ್ತಿ ಆರಾಧಿಸಿ. ಇನ್ನು ಒಂದು ಮಾಸ ಪರ್ಯಂತ ಶುಕ್ರವಾರ-ಮಂಗಳವಾರ 8ವರ್ಷದ ಹೆಣ್ಣು ಮಗುವಿಗೆ ಮಂಗಳ ದ್ರವ್ಯ ಕೊಟ್ಟು ಆಶೀರ್ವಾದ ಪಡೆಯಿರಿ.

ತುಲಾ

ರಾಶ್ಯಾಧಿಪತಿಯು ದಶಮದಲ್ಲಿದ್ದು, ಪಂಚಮದಲ್ಲಿ ಗುರುವು ವಕ್ರನಾಗಿದ್ದರೂ ಅಶುಭಗಳನ್ನು ತಂದೊಡ್ಡುವುದಿಲ್ಲ. ಸಮುದ್ರದಲ್ಲಿ ಈಜಲು ಪರಿಣತಿ ಬೇಕು. ಹಾಗೆ ನಿಮ್ಮ ರಾಶಿಗೆ ಜ್ಞಾನದ ಪರಿಣತಿ ಇದ್ದರೆ ಜ್ಞಾನ ತರುವುದು. ದ್ವಿತೀಯ ಕೇತು ಅನವಶ್ಯಕ ವಿಚಾರಗಳಲ್ಲಿ ಎಚ್ಚರವಿರಲಿ ಎಂಬ ಸೂಚನೆ ನೀಡುತ್ತಾನೆ. ಚಂದ್ರಮೌಳೇಶ್ವರ ಸ್ತೋತ್ರ ಪಾರಾಯಣ ಮಾಡಿ.

ವೃಶ್ಚಿಕ

ಲಗ್ನಸ್ಥಿತೇ ಕೇತು-ಸಪ್ತಮಸ್ಥಿತೇ ರಾಹು ಅಂದರೆ ಶುಭಗ್ರಹ ಗುರು ರಾಹುಕೇತುಗಳ ಮಧ್ಯೆ ಇದ್ದಾನೆ. ಶಂಕುಲ ನಾಗದೇವರು ಹಾಗೂ ವಿನಾಯಕನನ್ನು ಅರ್ಚಿಸಲೇ ಬೇಕು. ವಿಘ್ನವನ್ನು ದೂರಮಾಡಲೆಂದೇ ನಿಮ್ಮ ಪ್ರಾರ್ಥನೆ ಅವಶ್ಯ. ಅಕ್ಕಿ ಇಟ್ಟರೆ ಅನ್ನವಾಗುವುದಿಲ್ಲ. ಅಗ್ನಿಯ ಅವಶ್ಯಕತೆ ಇರುತ್ತದೆ. ಹಾಗೆಯೇ ನಿಮಗೆ ಪಂಚಾಗ್ನಿಗಳು ಬಂದು ಬೆಳಕನ್ನು ನೀಡುತ್ತಾರೆ. ದುರ್ಗೆಯನ್ನು ಪೂಜಿಸಿ.

ಧನು

ವಿನಾಕಾರಣ ಕೋಪವಾಗಲಿ, ಕಾರಣವಿಲ್ಲದೆ ನಗುವಾಗಲಿ ಮನುಷ್ಯನ ಲಕ್ಷಣವಲ್ಲ. ಆದ್ದರಿಂದ ಕೋಪ-ತಾಪ ಹತೋಟಿಯಲ್ಲಿರಲಿ. ಪೂರ್ವಪುಣ್ಯದ ದೈವಬಲವಿರುವುದರಿಂದ ನೀವು ಮುಂದೆ ಸಾಗಬಹುದು. 5,7,9,10,11ರಂದು ಯಾವುದೇ ಕಾರ್ಯಗಳಿಗೆ ಕೈಹಾಕುವಾಗ ಯೋಚಿಸಿ ಮುಂದೆ ಸಾಗಿರಿ. ಶ್ರೀರಾಮನ ಕೃಪೆಗಾಗಿ ಪ್ರಾರ್ಥನೆ ಇರಲಿ.

ಮಕರ

ಶನಿಯ ರಾಶಿಯ ಒಡೆಯನ ನಕ್ಷತ್ರದಲ್ಲಿ ಹುಟ್ಟಿದವರು ಶನಿಯ ಏಳೂವರೆ ಸಂಚಾರದಲ್ಲಿ ಹೇಗಿರಬೇಕೆಂದು ತಿಳಿದಿರಲೇಬೇಕು. ಮಕರ ರಾಶಿಯಲ್ಲಿ ಸೂರ್ಯನು ಪ್ರವೇಶಿಸುವುದೇ ಉತ್ತರಾಯಣ ಪುಣ್ಯಕಾಲ. ಅಂದರೆ ಮಕರದಿಂದ ಕಟಕದವರೆಗೂ ದೈವಭಕ್ತಿ ಮರೆಯಬಾರದು. ಅಲ್ಪಕ್ಕೆ ತೃಪ್ತಿ ಪಡಬೇಕು. ಇದ್ದದ್ದನ್ನು ಹಂಚಿ ತಿನ್ನಬೇಕು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಕುಂಭ

ಕುಂಭ ರಾಶಿಯ ಶನಿಯು, ಶನಿಮನೆಯಲ್ಲಿ ಗುರು ಇದ್ದು, ಗುರು ವಕ್ರಗತಿಯಲ್ಲಿ ಸಾಗುತ್ತಿದ್ದಾನೆ. ಮನುಷ್ಯನಿಗೆ ತಾಪತ್ರಯಗಳು ಬರುವುದು ಸಹಜ. ಅದಕ್ಕೆ ಪರಿಹಾರ ಒಂದು ಮೌನ, ತಾಳ್ಮೆ. ಮತ್ತೊಂದು ಅತ್ಯಂತ ಭಕ್ತಿ. ಚಂಡಿಕಾ ಅಷ್ಟೋತ್ತರ ಪಾರಾಯಣ ಮಾಡಿ. ಶನಿಗ್ರಹಕ್ಕೆ ಅತ್ಯಂತ ಪ್ರಿಯವಾದವರು ಛಾಯಾದೇವಿ. ನಿಮ್ಮ ಮಾತೃವನ್ನು ಪೂಜಿಸಿ. ಪಿತೃವನ್ನು ಗೌರವಿಸಿ.

ಮೀನ

ಮನುಷ್ಯನು ಎಲ್ಲವನ್ನು ಗೆಲ್ಲಲು ಭಕ್ತಿಯೇ ದೇವರು ಕೊಟ್ಟ ದೊಡ್ಡ ವರ. ಶನಿಯು ಕೊಟ್ಟು ನೋಡುತ್ತಾನೆ. ಸಮಯ ಸದುಪಯೋಗ ಮಾಡಿಕೊಂಡು, ಲಾಭವನ್ನು ವೃದ್ಧಿಗೊಳಿಸಿ ಶಾಂತಿಯುತ ಮನಸ್ಸಿನಿಂದ ಮನಸಂಕಲ್ಪ ಈಡೇರಿಸಿಕೊಳ್ಳಿ. ಏನಾದರೂ ಮಾಡಿ ಅದಕ್ಕೆ ಜಯ ಸಿಗುತ್ತದೆ. ಶಿವಗೀತಾ ಪಾರಾಯಣದಲ್ಲಿ ಒಂದು ಅಧ್ಯಾಯ ಓದಿರಿ.