ಮೇಷ ರಾಶಿಯಲ್ಲಿ ಜನಿಸಿದವರಿಗೆ ಇನ್ನೊಂದು ಗ್ರಹಣದ ದೋಷಕ್ಕೆ ಕಾರಣರಾಗುವ ಗ್ರಹಗಳು ಹಾಗೂ ದ್ವಾದಶ ಗುರು, ದಶಮ ಶನಿಯ ಸ್ಥಾನ ಚೆನ್ನಾಗಿ ಇರುವುದಿಲ್ಲ. ಹಾಕುವ ಹೆಜ್ಜೆ ಸರಿಯಾಗಿರಬೇಕು. ಹೆಜ್ಜೆ ತಪ್ಪಿದರೆ ಕಂದಕ ಉಂಟಾಗುತ್ತದೆ. ಇದು ಹಿರಿಯರ ಮಾತು. ಇದನ್ನು ಅನಸರಿಸಿದರೆ ನಿಮ್ಮ ಕಾರ್ಯ ವೈಖರಿಯಲ್ಲಿ ಅಪವಾದ ಬಂದು ನಿಮ್ಮ ಸ್ಥಾನಮಾನಗಳು ಲೋಪಕ್ಕೆ ಗುರಿಯಾಗುವುದು ಬೇಡ. ಅಡುಗೆ ಕೆಟ್ಟರೆ ಮತ್ತೆ ಮಾಡಬಹುದು. ಮನುಷ್ಯನ ಹೆಸರು ಹಾಳಾದರೆ ಏನೂ ಮಾಡಲಾಗುವುದಿಲ್ಲ. ಆದ್ದರಿಂದ ದೈವವನ್ನು ಪೂಜಿಸಿ ಸುಬ್ರಹ್ಮಣ್ಯನನ್ನು ಆರಾಧಿಸಿ.
ತಲೆಯ ಮೇಲೆ ಸಾವಿರಾರು ಕೆಜಿ ಭಾರ ಹೊರಲು ಆಗುವುದಿಲ್ಲ. ಅಗತ್ಯಕ್ಕಿಂತ ಹೆಚ್ಚಾಗಿ ಖರ್ಚು ಇದೆ. ಮನಸ್ಸು ಸದಾಕಾಲ ಚಿಂತಿತವಾಗಿರುತ್ತದೆ. ಏಕಾದಶ ಗುರು ಇರುವುದರಿಂದ ಕೈಗೆಟಕುವುದನ್ನು ಮಾಡಬೇಕೆ ಹೊರತು ಆಕಾಶವನ್ನು ಮುಟ್ಟಲು ಆಗುವುದಿಲ್ಲ ಎಂಬುದು ನೀವು ನಿಮಗೆ ಮನದಟ್ಟು ಮಾಡಿಕೊಂಡು ಅಪಾಯವನ್ನು ಉಪಾಯದಿಂದ ದಾಟಬೇಕು. ದತ್ತಾತ್ರೇಯನ ಪ್ರಾರ್ಥನೆ ಇರಲಿ.
ಬುಧನ ಶುಕ್ರನ ಮನೆಯಾದ ತುಲಾರಾಶಿಯಲ್ಲಿ ಇದ್ದು, ಮಿಥುನಕ್ಕೆ ಹತ್ತರ ಗುರುವು, ಅಷ್ಟಮದಲ್ಲಿ ಶನಿ ಇರುವುದು ಒಳ್ಳೆಯ ಕಾಲವನ್ನು ನಿರೀಕ್ಷಿಸಿ ಎಂಬ ದೈವವಾಣಿಯಿದೆ. ಮೇಷಕ್ಕೆ ಗುರು ಸಂಚಾರ ಬಂದಾಗ ಏಕಾದಶಕ್ಕೆ ಗುರು ಸಂಚಾರ ಬಂದು ಒಳ್ಳೆಯ ಫಲ ನೀಡುತ್ತಾನೆ. ಅಷ್ಟಮ ಶನಿಗೆ ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಕುಲಗುರುಗಳನ್ನು ಸಂರ್ಪಸಿ.
9ರ ಗುರುವು ನೀವು ನೀವಾಗಿಯೇ ಮನಸ್ಸಿಗೆ ಒತ್ತಡ ತಂದುಕೊಂಡು ಕೆಲಸ ಕಾರ್ಯ ಮಾಡಿದರೂ ಅವನೇ ನಿಮ್ಮ ಭಾರ ಹೊತ್ತು ಯಾವ ಕೆಡಕಾಗದಂತೆ ನೋಡಿಕೊಂಡಿದ್ದಾನೆ. ತಲೆಗೆ ಕೆಲಸವು ಜಾಸ್ತಿಯಾಗಿ ಒತ್ತಡಕ್ಕೆ ಒಳಗಾಗುತ್ತೀರಿ. ನಿಮ್ಮ ಕೆಲಸ-ಕಾರ್ಯಗಳಿಗೆ ಮಿತಿಯಿರಲಿ. ಈಶ್ವರನ ಅರ್ಚನೆ ನಿತ್ಯವೂ ಇರಲಿ.
ಸಿಂಹ ರಾಶಿಯವರಿಗೆ ಗ್ರಹಗಳ ದೋಷವು ಇಲ್ಲದಿರುವುದು ಸಂತೋಷದ ವಿಷಯ. ಆರರ ಶನಿ ನಿಮಗೆ ವಿಶೇಷ ಫಲದಾಯಕನಾಗಿದ್ದು, ಸ್ವಕ್ಷೇತ್ರದಲ್ಲಿ ಗುರುವಿರುವುದರಿಂದ ನೀವು ಮಾಡುವ ಕೆಲಸ-ಕಾರ್ಯಗಳಿಗೆ ದೇವರೇ ಸಹಾಯವನ್ನು ಮಾಡಿ ಶುಭವನ್ನು ಹೊಂದುತ್ತೀರಿ. ಸೂರ್ಯಾಷ್ಟೋತ್ತರ ಪಠಿಸಿ. ಸಿಂಹ ರಾಶಿಯವರು ಸಿಂಹ ವಾಹಿನಿಯ ದುರ್ಗಾಷ್ಟೋತ್ತರ ಪಾರಾಯಣ ಮಾಡುವುದು ಶುಭಕರ, ಹಿತಕರ, ಶ್ರೇಯಸ್ಕರವಾಗಿರುತ್ತದೆ.
ಪಂಚಮದಲ್ಲಿ ಶನಿ, ದ್ವಿತೀಯದಲ್ಲಿ ರವಿ-ಬುಧ-ಶುಕ್ರರು ಇದ್ದು, ಕೆಲಸ-ಕಾರ್ಯಗಳು ಸಮಾಧಾನಕರವಾಗಿ ಫಲ ನೀಡುತ್ತದೆ. ಶನಿಯ ಸಂಚಾರದಿಂದ ಆತುರದಲ್ಲಿ ಹೆಜ್ಜೆ ಇಟ್ಟರೆ ಕೆಲಸ ಹಾಳು ಮಾಡಿಕೊಳ್ಳುತ್ತೀರ. ಕೊಟ್ಟ ವಸ್ತುವನ್ನು ಹಿಂದಿರುಗಿಸಿ ಶಾಪಮುಕ್ತರಾಗಿರಿ. ಮುಂದೆ ಗುರುವು ಅಷ್ಟಮಕ್ಕೆ ಬರುತ್ತಾನಾದ್ದರಿಂದ ಎಚ್ಚರವಿರಲಿ.
ಗ್ರಹಗಳ ಸ್ಥಿತಿ ಚೆನ್ನಾಗಿದ್ದು, ತುಲಾ ರಾಶಿಯವರು ಭಯಪಡುವ ಪ್ರಮೇಯವೇ ಬರುವುದಿಲ್ಲ. 6ರ ಗುರು ಸ್ವ ಕ್ಷೇತ್ರದಲ್ಲಿದ್ದು ಎಲ್ಲಾ ಕಾರ್ಯಗಳಲ್ಲೂ ಸಂತೋಷ ಕೊಡುವುದು ಹಾಗೂ ನಿಮ್ಮ ಪೂರ್ವ-ಪುಣ್ಯವು ನಿಮ್ಮನ್ನು ಕಾಪಾಡುತ್ತದೆ. ಸ್ವಾತಿ-ವಿಶಾಖ ನಕ್ಷತ್ರದವರಿಗೆ ಶುಭ ಫಲ ನೀಡುತ್ತದೆ. ಕೃಷ್ಣ ಅಷ್ಟೋತ್ತರ ಜೊತೆಜೊತೆಯಾಗಿ ಸರಸ್ವತಿ ಅಷ್ಟೋತ್ತರ ಧ್ಯಾನ ಮಾಡಿ.
ಕಾಲವು ಯಾರಿಗೂ ಕಾದಿರುವುದಿಲ್ಲ. ಶ್ರೀರಾಮನನ್ನು ಪ್ರಾರ್ಥಿಸಿ. ನಿಮಗೆ ಬೇಕಾದ ವರ ಬೇಡಿರಿ. ಧನವೂ ಬಂದು ಋಣವೂ ತೀರುತ್ತದೆ. ಆನಂದದಿಂದ ನೀವು ಕಾಲಕಳೆಯಬಹುದು.
ಸ್ವಕ್ಷೇತ್ರದಲ್ಲಿ ಚತುರ್ಥ ಗುರು ಶುಭನೇ. ದ್ವಿತೀಯದಲ್ಲಿ ಶನಿಯಿದ್ದಾನೆ. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುವ ಪರಿಸ್ಥಿತಿಯಿದೆ. ಮನುಷ್ಯನು ನಿರಾಸೆಯನ್ನು ಮೆಟ್ಟಿ ನಿಂತು ತನ್ನ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಂಡರೆ ಅವನ ಬಾಳು ಸಾರ್ಥಕ. ದುರಾಸೆಯೂ ದುಃಖಕ್ಕೆ ಕಾರಣ. ದೂರಾಲೋಚನೆ ಚಿಂತನಶಕ್ತಿ ಬುದ್ಧಿಶಕ್ತಿಯನ್ನು ತೋರುತ್ತದೆ. ನಿಮ್ಮ ದಾರಿಯಲ್ಲಿ ಬರುವ ಕಲ್ಲುಮುಳ್ಳುಗಳನ್ನು ಸರಿಸಿ ಹೋಗುವಂತೆ ಮಾಡಲು ತೃತೀಯಕ್ಕೆ ಶನಿ ಬರುತ್ತಾನೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ದೈವವನ್ನು ನಂಬಿ ಬಾಳಿರಿ.
ಈಗಾಗಲೇ ನಿಮಗೆ ಜೀವನ ಸಾಕು ಸಾಕೆಂಬ ವೈರಾಗ್ಯ ಬಂದಿದೆ. ಇದಕ್ಕೆ ಕಾರಣ ಕೆಲಸಗಳು ನಡೆಯದೇ ಇರುವುದು. ಶನಿಯ ಸಂಚಾರದಲ್ಲಿ ಕೊಟ್ಟದ್ದಕ್ಕೆ ತೃಪ್ತಿ ಪಟ್ಟು ಅವನ ಪ್ರಾರ್ಥನೆಯಲ್ಲಿರಬೇಕು. ಒಳ್ಳೆಯ ಕಾಲವೂ ಬರಲಿದೆ. ನಿರೀಕ್ಷೆಯಲ್ಲಿರಿ. ಭಗವದ್ಗೀತೆಯ 11ನೇ ಅಧ್ಯಾಯವನ್ನು ಪಾರಾಯಣ ಮಾಡಿರಿ.
ದ್ವಿತೀಯದಲ್ಲಿ ಗುರುವಿರುವುದು ಶುಭವಿದ್ದಂತೆ. ಆದರೂ ದ್ವಾದಶ ಶನಿಯು ನಿಮ್ಮನ್ನು ಬಿಡನು. ಕಡೆಯ ಹೊತ್ತಿನಲ್ಲಿ ಆತುರ ಅಡಚಣೆ ಉಂಟು ಮಾಡುತ್ತಾನೆ. ಅದಕ್ಕಾಗಿ ಸದಾಕಾಲ ಚಕ್ರಸ್ವರೂಪಿ ಸುದರ್ಶನನನ್ನು ಪ್ರಾರ್ಥನೆ ಮಾಡಿ. ಸುದರ್ಶನ ಅಷ್ಟೋತ್ತರ ಪಾರಾಯಣ ಮಾಡಿರಿ. ಶುಭವನ್ನು ಕಂಡುಕೊಳ್ಳಿ.
ಜನ್ಮ ಗುರುವು ವ್ಯಸನ ತಂದರೂ ಏಕಾದಶ ಶನಿಯು ಆನಂದ ಉಂಟು ಮಾಡುತ್ತಾನೆ. ಮನುಷ್ಯನು ಭೂಲೋಕಕ್ಕೆ ಬಂದಿರುವುದು ತನ್ನಂತೆ ತಾನು ನಡೆಯಲು ಅಲ್ಲ. ಪಾಪಕರ್ಮಗಳಿಗೆ ಅನುಗುಣವಾಗಿ ಶುಭಾಶುಭಫಲಗಳು ನಡೆದು ಕೆಲವೊಂದು ನಿರಾಸೆಗಳು ಮೂಡಿದರೂ, ದೈವಸಹಾಯದಿಂದ ಸರಿಪಡಿಸಿಕೊಳ್ಳಬಹುದು. ಕಾರ್ತೀಕ ಮಾಸದಲ್ಲಿ ಕೇದಾರೇಶ್ವರನನ್ನು ಪ್ರಾರ್ಥಿಸಿ.