ಮೇ 30 ಅಮಾವಾಸ್ಯೆ, ಕೃತಿಕಾ ನಕ್ಷತ್ರ, ವಿಶೇಷವಾಗಿ ಶನಿ ಜಯಂತಿಯೂ ಇದೆ. ನಿಮ್ಮ ರಾಶಿಗೆ ಏಕಾದಶದಲ್ಲಿ ಶನಿಯಿದ್ದಾನೆ. ವಕ್ರತೆ ಪಡೆದು, ದ್ವಾದಶದಲ್ಲಿ ಗುರು ಇರುವುದರಿಂದ ಎಚ್ಚರಿಕೆಯಿಂದ ಸಾಗಬೇಕು. 11ರ ಶನಿ ಬೇಕಾದ್ದನ್ನು ಕೊಡುವುದಕ್ಕೆ ಹಿಂದೆ ಬಂದಿರುವುದು ತಾತ್ಕಾಲಿಕ. ಶನಿಯನ್ನು ಪೂಜಿಸಿ. ಪ್ರಾರ್ಥಿಸಿ.
ಏಕಾದಶದಲ್ಲಿ ಗುರುವಿರುವುದೇ ಮಹಾಭಾಗ್ಯ. ಹತ್ತರ ಶನಿಯು ವಕ್ರಿಯಾಗಿ 9ಕ್ಕೆ ಬರುತ್ತಾನೆ. ಈ ವೇಳೆ ಸಮಸ್ಯೆ ಪರಿಹರಿಸಿಕೊಳ್ಳುವ ಸಂಕಲ್ಪ ಮಾಡಿದಲ್ಲಿ ಗ್ರಹಗಳು ಸಹಕರಿಸಿ ನಿಮಗೆ ದಾರಿಯನ್ನು ತೋರುತ್ತವೆ. ಧನ, ಸ್ಥಾನಮಾನ ಕಾಪಾಡಿಕೊಂಡು ದುರ್ಗೆಯನ್ನು ಪ್ರಾರ್ಥಿಸಿ, ಪೂಜಿಸಿ. ಚಂಡಿಯನ್ನು ಪ್ರಾರ್ಥಿಸಿದ್ದು ಫಲ ನೀಡುತ್ತದೆ.
ಮಿಥುನ ರಾಶಿಗೆ 10 ರ ಗುರುವು, 9ರ ಶನಿಯು ಹಿಂದಕ್ಕೆ ಸರಿದು ಆಲಸ್ಯ ಮನಸ್ಥಿತಿಯನ್ನು ಕದಡುತ್ತಾನೆ. ಅದಕ್ಕೆ ಭಯ ಬೇಡ. ನಿರಾಂತಕವಾಗಿ ದೈವಕೃಪೆಯಿಂದ ಕೆಲಸಕಾರ್ಯಗಳು ನಿರ್ವಿಘ್ನವಾಗಿ ಸಾಗಬೇಕಾದರೆ ಶ್ರೀರಾಮಚಂದ್ರನನ್ನು ಪ್ರಾರ್ಥಿಸಿ. ಆನಂದದಿಂದ ಇರಿ.
ಹರಿಯುವ ನೀರನ್ನು ಕದಡಿದರೆ ಅದು ಕೆಂಪಾಗಿ, ಮಣ್ಣಿನ ಸಹಿತವಾಗಿ ಸ್ನಾನ-ಪಾನಕ್ಕೆ ಯೋಗ್ಯವಾಗಿ ಇರುವುದಿಲ್ಲ. ಅದೇ ರೀತಿ ಮನಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಯಾವ ಕೆಲಸಗಳನ್ನಾದರೂ ಸಾಧಿಸಬಹುದು. ಈಶ್ವರನ ಕೃಪೆ ಸಂಪಾದಿಸಿ. ಸೋಮವಾರ ಈಶ್ವರನ ವ್ರತಕಥೆಯನ್ನು ಓದಿರಿ. ಅಷ್ಟಮ ಶನಿ, 9ರ ಗುರುವಿಗೆ ಏಕೈಕ ಪರಿಹಾರ ದೇವರ ಪ್ರಾರ್ಥನೆ; ಹಿರಿಯರಿಂದ ಆಶೀರ್ವಾದ.
ಸಿಂಹ
ಜಗತ್ತನ್ನು ಬೆಳಗುವ ಸೂರ್ಯನಾರಾಯಣನೇ ನಿಮ್ಮ ಬಾಳನ್ನು ಬಂಗಾರ ಮಾಡುತ್ತಾನೆ. ಅಂತಹ ಛಾಯಾಸಹಿತ ಸೂರ್ಯನಾರಾಯಣನ ಪ್ರಾರ್ಥನೆ ಇರಲಿ. ಅಷ್ಟಮ ಗುರು, ಸಪ್ತಮ ಶನಿ ಗ್ರಹಸಂಪರ್ಕ ದಾಟಿ ಯಶಸ್ಸನ್ನು, ಕೀರ್ತಿ, ಧನವನ್ನು ಸಂಪಾದಿಸಬಹುದು. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಲು ಮರೆಯದಿರಿ. ಜಯದ ಹಾದಿ ಸಿಗುತ್ತದೆ.
ಕನ್ಯಾ
‘ಲಕ್ಷ್ಮೀಂ ಕನಕಸಂಪನ್ನಂ ವಂದೇ ಜಗನ್ಮಾತರಂ’ ಎಂಬ ಶ್ಲೋಕವನ್ನು ಅರ್ಥೈಸುವಾಗ ಮಹಾಲಕ್ಷ್ಮೀಯ ಕೃಪೆಯು ಸದಾ ಅವಶ್ಯಕವಾಗಿದ್ದು, ಜಗತ್ತಿನ ಸಂಪತ್ತಿಗೆ ಒಡತಿಯವಳು. ಸಮಯ ಚೆನ್ನಾಗಿದೆ. ಭಗವಂತನ ಕೃಪೆಯಿಂದ ನಿಮಗೆ ಎಲ್ಲದರಲ್ಲೂ ಜಯ-ಕೀರ್ತಿ ಸಿಗುವ ಕಾಲ. ನರಸಿಂಹನನ್ನು ಪ್ರಾರ್ಥಿಸಿ.
ತುಲಾ
ತುಲಾ ರಾಶಿಯವರಿಗೆ ದುಃಖವೂ ಬೇಡ, ದುಮ್ಮಾನವೂ ಬೇಡ. ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ನೆಲೆಸುವಂತೆ, ಗುರಿಯನ್ನು ತಲುಪುವಂತೆ ಮಾಡು, ಆರೋಗ್ಯ, ಆಯಸ್ಸು ನೀಡು ಎಂದು ಪ್ರಾರ್ಥನೆ ಮಾಡಿದಲ್ಲಿ ದೇವರು ಎಲ್ಲವನ್ನೂ ಕೊಡುತ್ತಾನೆ. ದೈವ ಪ್ರಾರ್ಥನೆ ಇದ್ದಲ್ಲಿ ಮನೋಇಚ್ಛೆ ಪೂರ್ಣಗೊಳ್ಳುತ್ತದೆ. ಕೀರ್ತಿಯನ್ನು ಪಡೆಯುವ ಮಾರ್ಗವನ್ನು ಹುಡುಕಿರಿ.
ವೃಶ್ಚಿಕ
ನೀವು ಸಾಗುವ ದಾರಿ ಸರಿಯಾಗಿದ್ದರೆ ನಿಮ್ಮನ್ನು ತಡೆಯುವವರು ಯಾರು? ಸತ್ಸಂಕಲ್ಪವನ್ನು ದೇವರು ಸದಾಕಾಲ ನಡೆಸುತ್ತಾನೆ. ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ. ನಿಮ್ಮ ಗುರುವಿನ ಮಾತಿನ ಮೇಲೆ ವಿಶ್ವಾಸವಿರಲಿ. ಪಂಚಮದಲ್ಲಿ ಗುರುವಿದ್ದು, ಬೇಕಾದ ವರ ಪಡೆಯುವ ಸಮಯವಿದು. ಗಣಪತಿಯನ್ನು ಪೂಜಿಸಿ. ನವಗ್ರಹ ಪ್ರಾರ್ಥನೆಯಿಂದ ಕೆಲಸಗಳು ಚುರುಕಾಗಿ ನಡೆಯುತ್ತವೆ.
ಜಗದೊಡೆಯನ ಅನುಗ್ರಹವಿದ್ದರೆ ಯಾರಿಗಾಗಿ ಹೆದರಬೇಕು? ಮಾಡುವ ಕರ್ತವ್ಯದಲ್ಲಿ ಲೋಪ ಇರಬಾರದು. ಮಾಡುವ ಕೆಲಸದಲ್ಲಿ ಇನ್ನೊಬ್ಬರಿಗೆ ಉಪಕಾರಿಯಾಗಿ, ಗುರುಚರಿತ್ರೆಯಲ್ಲಿ ಸಾಯಂದೇವ ತ್ರಿವಿರ್ಕಮಭಾರತಿ ಯಾವ ರೀತಿ ಗುರುಪೂಜೆ ಮಾಡಿದನೆಂಬ ಅಧ್ಯಾಯವಿದೆ. ಗುರುಪೂಜೆಯನ್ನು ವಿಜೃಂಭಣೆಯಿಂದ ಮಾಡಿ, ಜಯ ಸಾಧಿಸಿ. ದೇವರು ಪೂರ್ಣಾಯುಷ್ಯ, ಆರೋಗ್ಯವಂತವಾಗಿರಲು ಆಶೀರ್ವದಿಸುತ್ತಾನೆ.
ಮನುಷ್ಯನ ನಗುಮುಖವೇ ಶುಭಸೂಚಕ. ಮನುಷ್ಯನನ್ನು ಸರಿದಾರಿಯಲ್ಲಿ ನಡೆಸಿ, ನಮ್ಮ ಪುಣ್ಯದಿಂದ ಫಲ ನೀಡಲು ಗುರುವೊಬ್ಬನೇ ಸಾಕು. ತೃತೀಯದಲ್ಲಿ ಗುರುವಿದ್ದಾನೆ. ಕುಲಗುರುಗಳನ್ನು ಕಂಡು ಶಾರದೆಯನ್ನು ಪೂಜಿಸಿ. ಕಷ್ಟಗಳನ್ನು ಕಳೆದುಕೊಂಡು ನಿಮ್ಮ ಜೀವನದ ಶೈಲಿಯನ್ನು ಬದಲಾಯಿಸಿದರೆ ನಿಮಗೆ ದೇವರು ಒಳ್ಳೆಯದನ್ನೇ ನೀಡುತ್ತಾನೆ.
ಸೌಂದರ್ಯ ಲಹರಿಯಲ್ಲಿ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ರೂಪದೇವಿಯ ಸೌಂದರ್ಯವನ್ನು ಹಾಡಿಹೊಗಳಿದ್ದಾರೆ. ಶನಿಯ ಸಂಚಾರಕ್ಕೆ ಪರಿಹಾರವೆಂದರೆ ಶನಿಯು ಮೆಚ್ಚುವ, ಲೋಕಮಾತೆಯಾದ ಶಾರದೆಯನ್ನು ನಾನಾವಿಧಗಳಲ್ಲಿ ಪೂಜಿಸಿ. ನಿಮ್ಮ ಜೀವನವನ್ನು ನಗುನಗುತ್ತಲೇ ಸಾಗಿಸಬಹುದು. ಸೌಂದರ್ಯಲಹರಿ ಪಠಿಸಿ, ಪ್ರಾರ್ಥಿಸಿ.
ಮತ್ಸ್ಯಾವತಾರವನ್ನು ನೆನಪಿಸಿಕೊಂಡು ಶುದ್ಧವಾದ ಜೀವನವನ್ನು ಮಾಡಿ. ಕೊಟ್ಟ ಜೀವನವನ್ನು ನಿರ್ಮಲವಾಗಿ ನಡೆಸಿದರೆ ದೇವರು ಮೆಚ್ಚುತ್ತಾನೆ. ಉನ್ಮತ್ತ, ಕಳೆದುಹೋದ ಘಟನೆಗಳನ್ನು ಮರೆತು ಮುಂದೆ ಸಾಗಿ. ಶನಿಯನ್ನು ಅರ್ಚಿಸಿ. ಮನಮೋಹಕ ಜೀವನವನ್ನು ಈಶ್ವರನೇ ಕರುಣಿಸುತ್ತಾನೆ. ಅನುಷ್ಠಾನವುಳ್ಳ ಗುರುಗಳನ್ನು ಪೂಜಿಸಿ.