ನ್ಯೂಸ್

ಲಾಕ್​ಡೌನ್​ ಇದ್ದರೂ ಈ ರಾಶಿಯವರಿಗೆ ಆರ್ಥಿಕ ಲಾಭ ಆಗಲಿದೆ...

lakshmihegde

29-03-2020 ರಿಂದ 04-04-2020ರವರೆಗೆ

ಮೇಷ: ದಶಮಸ್ಥಾನದಲ್ಲಿ ಗುರು ಮತ್ತು ಶನಿಗ್ರಹಗಳಿದ್ದು, ತೊಂದರೆಗಳಿದ್ದರೂ ಶ್ರಮವಹಿಸಿ ಮುಂದೆ ಸಾಗಬಹುದು. ವಿದ್ಯಾರ್ಥಿಗಳಿಗೆ ಸಾಧಾರಣವಾಗಿರುತ್ತದೆ. ತಾಳ್ಮೆಯಿಂದ ಪ್ರಯತ್ನ ಪಡುವುದರಿಂದ ಉದ್ಯಮಿಗಳಿಗೆ ಅನುಕೂಲ. ಅರೋಗ್ಯವು ಉತ್ತಮವಾಗಿರುತ್ತದೆ. ಅನಂತಪದ್ಮನಾಭನನ್ನು ಧ್ಯಾನಿಸಿ.

ವೃಷಭ: ನವಮದಲ್ಲಿರುವ ಗುರುವು ಭಾಗ್ಯವನ್ನು ತರುತ್ತಾನೆ. ಉತ್ತಮ ಪ್ರಯತ್ನದಿಂದ ನೌಕರಿಯಲ್ಲಿ ಮೇಲ್ದರ್ಜೆಗೆ ಏರುವ ಸಾಧ್ಯತೆಗಳಿವೆ. ರಾಜಕೀಯದಲ್ಲಿರುವವರಿಗೆ ಗೌರವ ಹಾಗೂ ಕೀರ್ತಿಯನ್ನು ಪಡೆಯುವ ಸಮಯ. ಹಣಕಾಸಿನ ವ್ಯವಹಾರಗಳಲ್ಲಿ ಲಾಭವನ್ನು ಕಾಣುವಿರಿ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ. ತಪು್ಪಗಳನ್ನು ಸರಿಮಾಡಿಕೊಳ್ಳುವ ಸಮಯ. ದುರ್ಗೆಯನ್ನು ಆರಾಧಿಸಿ.

ಮಿಥುನ: ಅಷ್ಟಮ ಶನಿ ಹಾಗೂ ಗುರುವಿನಿಂದ ಸಾಮಾನ್ಯವಾದ ಫಲವನ್ನು ಅನುಭವಿಸುತ್ತೀರ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಆದಾಯವನ್ನು ಕಾಣುವಿರಿ. ಆದರೆ ಹಿತಶತ್ರುಗಳಿಂದ ದೂರವಿರಿ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಸೂಕ್ತ ಚಿಂತನೆ ಅತ್ಯಗತ್ಯ. ಗೋವಿಂದನನ್ನು ಪ್ರಾರ್ಥಿಸಿ.

ಕಟಕ: ಸಪ್ತಮದಲ್ಲಿರುವ ಗುರುವಿನಿಂದ ಮನೋಬಲವು ವೃದ್ಧಿಯಾಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಮನೆಯಲ್ಲಿ ಶಾಂತಿಯುತ ವಾತಾವರಣವಿರುತ್ತದೆ. ವೃತ್ತಿಯಲ್ಲಿ ಬದ್ಧತೆ ಇದ್ದಲ್ಲಿ ಸಕಾರಾತ್ಮಕ ಫಲಿತಾಂಶವು ದೊರೆಯುತ್ತದೆ. ಧರ್ಮ-ದೇವರಲ್ಲಿ ಪ್ರಾರ್ಥನೆಯಿರಲಿ. ದಶರಥ ರಚಿಸಿರುವ ಶನಿಸ್ತೋತ್ರವನ್ನು ಪಠಿಸಿ.

ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚು ಗಮನ ಹರಿಸಿ. ಸಾಕಷ್ಟು ಲಾಭ ಮಾಡಬಹುದಾದಂತಹ ವಾರವಿದಾಗಿದೆ. ಸೂಕ್ತವಾದ ರೀತಿಯಲ್ಲಿ ಅದನ್ನು ನಿರ್ವಹಣೆ ಮಾಡಬೇಕು. ಶುಭಕಾರ್ಯಗಳನ್ನು ಮಾಡುವ ಯೋಗವು ಕಂಡುಬರುವುದು. ಶತ್ರುಗಳಿಂದ ಆದಷ್ಟು ದೂರ ಉಳಿಯಿರಿ. ಗುರುವು ಷಷ್ಠಭಾವಕ್ಕೆ ಬಂದಿದ್ದಾನೆ. ಮೃತ್ಯುಂಜಯ ಹಾಗೂ ಗುರುದತ್ತಾತ್ರೇಯ ಸ್ತೋತ್ರವನ್ನು ಪಠಿಸಿ.

ಕನ್ಯಾ: ಸ್ವಂತ ಉದ್ಯೋಗದವರಿಗೆ ಆರಂಭದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದರೂ ಲಾಭದ ಗಳಿಕೆ ಕಡಿಮೆಯಾಗಿರುತ್ತದೆ. ದೂರ ಪ್ರಯಾಣ ಮಾಡುವುದು ಬೇಡ. ಕಣ್ಣಿನ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಗಮನ ಹಾಗೂ ಶ್ರಮವಹಿಸಿ ಅಭ್ಯಾಸ ನಡೆಸಬೇಕು. ನಿಮ್ಮ ನಡೆ-ನುಡಿ ಸರಿಯಾಗಿದ್ದಲ್ಲಿ ದೇವರು ಕೈಹಿಡಿಯುತ್ತಾನೆ.

ತುಲಾ: ಮನೆಯಲ್ಲಿ ಶಾಂತಿಯುತ ವಾತಾವರಣವಿರುತ್ತದೆ. ನಿಮ್ಮ ಮನಸ್ಸಿಗೆ ಸಂತೋಷ ಹಾಗೂ ಸಮಾಧಾನ ತರುವ ವಾರವಿದು. ನೌಕರಿಯಲ್ಲಿ ಮೇಲ್ದರ್ಜೆಗೆ ಏರುವ ಸಾಧ್ಯತೆಗಳಿವೆ. ಸ್ವಪ್ರಯತ್ನದಿಂದ ಮಾಡುವ ಕೆಲಸಗಳಲ್ಲಿ ಜಯ ಕಾಣುವಿರಿ. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ಶನಿಯು ಚತುರ್ಥದಲ್ಲಿದ್ದಾನೆ. ನಾಲಿಗೆಯು ಹತೋಟಿಯಲ್ಲಿರಲಿ.

ವೃಶ್ಚಿಕ: ತೃತೀಯದಲ್ಲಿರುವ ಗುರು ಮತ್ತು ಶನಿಯಿಂದ ಆರ್ಥಿಕವಾಗಿ ಲಾಭವಾಗಲಿದೆ. ಕೆಲಸಗಳನ್ನು ಪ್ರಾರಂಭಿಸಲು ಸೂಕ್ತ ಸಮಯ. ಆದರೆ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಚಿಂತೆಗಳಿಂದ ಮುಕ್ತಿ. ಕಾಲಜ್ಞಾನಕ್ಕೆ ನಿಲುಕದ ವಿಷಯದಲ್ಲಿ ತೊಳಲಾಡಬೇಡಿ. ಭಾಗ್ಯವನ್ನು ಕೊಡುವವನು ಬಾಗಿಲಲ್ಲಿ ನಿಂತಿದ್ದಾನೆ. ಇಡಗುಂಜಿ ಮಹಾಗಣಪತಿಯನ್ನು ಆರಾಧಿಸಿ. ಲಕ್ಷ್ಮೀನರಸಿಂಹನ ಧ್ಯಾನಿಸಿ.

ಧನು: ಆರೋಗ್ಯವು ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿ ಸಾಧಾರಣ. ಖರ್ಚು ಹೆಚ್ಚಾಗುವ ಸಾಧ್ಯತೆ. ಪಾಲುದಾರಿಕೆಯ ವ್ಯವಹಾರಗಳಿಂದ ದೂರವಿರಿ. ಪ್ರಯತ್ನದಿಂದ ಉತ್ತಮ ಫಲಿತಾಂಶ ಲಭ್ಯ. ನಿಧಾನವಾಗಿ ನಿಮ್ಮ ಕೆಲಸಗಳಲ್ಲಿ ಮುನ್ನಡೆಯಿರಿ. ಕಷ್ಟ ಕಳೆದು ವರ್ಷಾಂತ್ಯದಲ್ಲಿ ಸುಖ ಅನುಭವಿಸುವಿರಿ. ರುದ್ರಪಾರಾಯಣ, ದತ್ತಾತ್ರೇಯನ ಸ್ಮರಣೆ ನಿರಂತರವಾಗಿರಲಿ.

ಮಕರ: ಸಾಮಾನ್ಯವಾದ ವಾರವಿದಾಗಿದೆ. ಧೈರ್ಯದಿಂದ ಕೆಲಸವನ್ನು ಮಾಡಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಸ್ಥಿರತೆ ಕಂಡುಬರುವುದು. ನಕಾರಾತ್ಮಕ ಚಿಂತೆಗಳಿಂದ ದೂರವಿರಿ. ಧಾರ್ವಿುಕವಾಗಿ ಮುನ್ನಡೆಯಿರಿ. ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ. ಮಾಡಿದ ಸಹಾಯ ನೆನೆಸಿ ಖಿನ್ನರಾಗಬೇಡಿ. ಶನಿಯು ಮೇಧಾವಿ, ತ್ಯಾಗಶಾಲಿ.

ಕುಂಭ: ಸಕಾರಾತ್ಮಕವಾಗಿದ್ದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ಹಿಂದಿನ ಪ್ರಯತ್ನ ಈಗ ಫಲಕೊಡುವುದು. ಆರ್ಥಿಕ ಸುಧಾರಣೆ ಕಂಡುಬರುವುದು. ಎಷ್ಟೇ ತಾಪತ್ರಯಗಳಿದ್ದರೂ ಜಾಣ್ಮೆಯಿಂದ ಹೊರಬರುವಿರಿ. ದ್ವಾದಶ ಶನಿ ಹಾಗೂ ಗುರುವಿರುವುದರಿಂದ ಚಿಂತೆಯಿಂದ ದೂರವಿರಿ. ಪರರನ್ನು ಏನನ್ನೂ ಕೇಳುವುದು-ಕೊಡುವುದು ಬೇಡ. ದುರ್ಗಾಕವಚ ಪಠಿಸಿ.

ಮೀನ: ಏಕಾದಶದಲ್ಲಿರುವ ಶನಿಯು ಹಾಗೂ ಗುರುವು ಭೋಗ ಭಾಗ್ಯಗಳನ್ನು ತರುತ್ತಾನೆ. ಹಿಂದಿನ ಕಲ್ಲು-ಮುಳ್ಳಿನ ಹಾದಿಯನ್ನು ನೆನೆಸಿಕೊಳ್ಳದೆ ಧೈರ್ಯದಿಂದ ಮುನ್ನಡೆಯಿರಿ. ಉಲ್ಲಾಸದಿಂದಿರಿ. ದೊಡ್ಡ ನಿರ್ಣಯಗಳನ್ನು ಕೈಗೊಳ್ಳಲು ಸೂಕ್ತವಾದ ಸಮಯ. ಶ್ರೀಲಲಿತಾ ಸಹಸ್ರನಾಮ ಪಾರಾಯಣ ಮಾಡಿರಿ.