ಶೋಭಾ ಕೃತ ನಾಮ ಸಂವತ್ಸರವು ಮೇಷ ರಾಶಿಗೆ ವಿಶೇಷ ಫಲ ತರುತ್ತದೆ. ಏಕಾದಶದಲ್ಲಿ ಶನಿ ಇದ್ದು, ಏಪ್ರಿಲ್ 21ರ ನಂತರ ಗುರು ಮೆಷ ರಾಶಿಗೆ ಬಂದು ಮೇಷದಲ್ಲಿ ಸ್ಥಿತನಾಗಿರುತ್ತಾನೆ. ಅಲ್ಪಗುರು ಕಟಾಕ್ಷವಿದ್ದು ಸನ್ಮಾರ್ಗದಲ್ಲಿ ನಡೆದು ಬಾಳಿರಿ. ಮುಂಬರುವ ದಿನಗಳಲ್ಲಿ ನಿಮ್ಮ ಬಾಳು ಬಂಗಾರವಾಗಲಿದೆ. ಗುರು ರಾಹು ಸಂಯುಕ್ತ ಆಗಿರುವುದರಿಂದ ಎಚ್ಚರಿಕೆಯಿಂದ ಮಾತನಾಡಿ. ಸಂವತ್ಸರವು ಶುಭವಾಗಿರುತ್ತದೆ.
ಏಕಾದಶದಲ್ಲಿ ಗುರುವು ಕೆಲವೇ ದಿನಗಳಿದ್ದು ದ್ವಾದಶಕ್ಕೆ ಬಂದು, ಶನಿಯು ದಶಮದಲ್ಲಿ ಇರುತ್ತಾನೆ. ಏಕಾದಶದಲ್ಲಿ ಸೂರ್ಯನು ಇದ್ದು ಏಕಾದಶ ಸ್ಥಾನ ಫಲ ಕೊಡುತ್ತಾನೆ. ಕೆಲವೊಂದು ವಿಚಿತ್ರ ಘಟನೆಗಳು ಜೀವನದಲ್ಲಿ ನಡೆದು ನಿಮಗೆ ದಾರಿಯನ್ನು ತೋರುತ್ತದೆ. ದುರ್ಗೆಯನ್ನು ಪೂಜಿಸಿ, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಶುಭವಾಗುತ್ತದೆ.
ಬುಧನ ಮನೆಯಲ್ಲಿ ಅಂಗಾರಕನು ಕೂತಿರುವುದು ಕೆಲವೊಂದು ವಿಚಾರಗಳಲ್ಲಿ ವಿಚಿತ್ರ ನಡೆಯು ನಿಮ್ಮನ್ನು ಕಟ್ಟಿಹಾಕಿ ಗೊಂದಲ ಮೂಡಿಸುತ್ತಾನೆ. ಏಪ್ರಿಲ್ 21ರಿಂದ ಗುರು ಏಕಾದಶಕ್ಕೆ ಬಂದರೂ ಗುರು ರಾಹು ಸಂಯೋಗ ಇರುತ್ತದೆ. ಪರಿಪೂರ್ಣ ಫಲ ಪಡೆಯಬೇಕಾದರೆ ಕಾಳಿಂಗ ನಾಗನನ್ನು, ದತ್ತ ದೇವರನ್ನು ಪೂಜಿಸಿ. ಇಚ್ಛಿತ ಕಾಮನೆಗಳನ್ನು ಪೂರೈಸಿಕೊಳ್ಳಿ. 9ರ ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ಹೆಚ್ಚಿನ ಕೀರ್ತಿ ಲಾಭ ತರುತ್ತಾನೆ.
ಕಟಕ ರಾಶಿಯವರ ಮನಸ್ಸು ಶುದ್ಧವಾಗಿರಬೇಕು. ಆ ಮನಸ್ಸಿನಲ್ಲಿ ಶಿವ ಪಾರ್ವತಿಯನ್ನು ಧ್ಯಾನಿಸಿ ಆತ್ಮಸಿಂಹಾಸನದಲ್ಲಿ ಕೂರಿಸಿ ಮಾನಸ ಪೂಜೆಯನ್ನು ಮಾಡಿದರೆ ಸಾಕು. ಗ್ರಹ ಸ್ಥಿತಿಯಲ್ಲಿ ಎಂಟರ ಶನಿ ಇರಲಿ, ಮುಂಬರುವ ಹತ್ತರ ಗುರುವಾಗಲಿ ಏನು ಮಾಡಲಾರದು. ಕಟಕ ರಾಶಿಯವರು ರಾಮನನ್ನು ಪೂಜಿಸಿ, ಮಾಯ ಸ್ವರೂಪಿ ಶ್ರೀರಾಮನು ನಿಮ್ಮನ್ನು ಕಾಪಾಡಿ ನಿಮ್ಮ ಮನ ಸಂಕಲ್ಪಗಳನ್ನು ಈಡೇರಿಸುತ್ತಾನೆ.
ಸಿಂಹ ರಾಶಿಗೆ ಸಪ್ತಮದಲ್ಲಿ ಶನಿ, ಅಷ್ಟಮದಲ್ಲಿ ಗುರು ಇರುವುದು ಕೆಲವು ಕಾರ್ಯಗಳಲ್ಲಿ ತೊಡಕಾಗುತ್ತದೆ. ಆದರೆ, ಸಿಂಹವು ಹುಲ್ಲನ್ನು ತಿನ್ನುವುದಿಲ್ಲ. ಅದು ಮಾಂಸಹಾರಿ ಬೇಟೆ ಆಡುತ್ತಲೇ ಇರುತ್ತದೆ. ಹಾಗೆ ನೀವು ಶುದ್ಧ ಮನಸ್ಸಿನಿಂದ ದೈವಬಲವನ್ನು ಸಂಪಾದಿಸಿದರೆ ಗೆಲುವು ನಿಮ್ಮದಾಗಿ ಶುಭ ವಾಗುತ್ತದೆ. ಏಪ್ರಿಲ್ 21ರ ನಂತರ 9ರ ಗುರು ನಿಮ್ಮನ್ನು ಮುಂದೆ ಕೊಂಡೊಯ್ದು ಸಂತಸ ನೀಡುತ್ತಾನೆ. ಸೋಮವಾರ ಹಾಗೂ ಶನಿವಾರದಂದು ಶನಿ ಅಷ್ಟೋತ್ತರ ಪಾರಾಯಣ ಮಾಡಿ.
ಕನ್ಯಾ ರಾಶಿಯವರಿಗೆ ತಾತ್ಕಾಲಿಕವಾಗಿ ಸಪ್ತಮದಲ್ಲಿ ಗುರುವಿದ್ದು 6ರಲ್ಲಿ ಶನಿಯ ಬಲವಿದೆ. ಏಪ್ರಿಲ್ 21ರ ನಂತರ ಗುರುವು ಅಷ್ಟಮಕ್ಕೆ ಬರುತ್ತಾನೆ, ಯಾರಾದರೂ ಆಗಲಿ ಎಲ್ಲಿಯಾದರೂ ಇರಲಿ ಕೊಟ್ಟ ಮಾತನ್ನು ಉಳಿಸಿಕೊಂಡರೆ ಮುಂದಿನ ಪ್ರಗತಿ ಕಾಣುತ್ತೀರಾ. ಗುರುವಿನ ಪ್ರಾರ್ಥನೆ ಇರಲಿ. ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಮಾಡಿ ಬನ್ನಿ. ಆರರ ಶನಿಯು ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಾನೆ.
ಆರನೇ ಏಪ್ರಿಲ್ನಿಂದ ಶುಕ್ರನು ತನ್ನ ಸ್ವಂತ ಮನೆಯಲ್ಲಿ ಸ್ಥಿತನಾಗುತ್ತಾನೆ. ನೀವು ಇಚ್ಛಿಸಿದ್ದನ್ನು ಪಡೆಯಲು ಗುರುವು ಸಪ್ತಮಕ್ಕೆ ಇನ್ನು ಎರಡೇ ವಾರದಲ್ಲಿ ಬರುತ್ತಾನೆ. ಅಲ್ಲಿಯವರೆಗೂ ನಿಮ್ಮ ಜೀವನದಲ್ಲಿ ಕೆಲವು ಅಡೆತಡೆಗಳು ಬಂದರೂ ಅದನ್ನು ಸುಧಾರಿಸಿಕೊಂಡು ನಿಮ್ಮ ಉದ್ಯೋಗ ವ್ಯಾಪಾರದಲ್ಲಿ ಮುನ್ನಡೆಯಿರಿ. ನಿಮ್ಮ ಮನಸ್ಸಿನಂತೆ ನಡೆದರೆ ಪರಮಾತ್ಮನೇ ನಿಮ್ಮನ್ನು ರಕ್ಷಿಸುತ್ತಾನೆ.
ವೃಶ್ಚಿಕ ರಾಶಿಯವರಿಗೆ ಐದರ ಗುರು 21-4-2023 ರವರೆಗೆ ಮಾತ್ರವೇ ಇದ್ದು, ಶನಿಯು ಚತುರ್ಥದಲ್ಲಿ ತನ್ನ ಸ್ವಂತ ಮನೆಯಲ್ಲಿ ಇದ್ದಾನೆ. ನಿಮ್ಮ ಕೆಲಸಗಳು ಪರಿಪೂರ್ಣ ಆಗಿಲ್ಲವಾದರೆ ನಿಮಗೆ ದೈವಬಲ ಕಡಿಮೆಯಾಗಿದೆ ಎಂದರ್ಥ. ಆದರೂ ಗುರು ಸ್ವಂತ ಮನೆಯಲ್ಲಿ ಇರುವುದರಿಂದ ಸುಬ್ರಹ್ಮಣ್ಯನು ನಿಮ್ಮನ್ನು ಕಾಪಾಡುತ್ತಾನೆ. ನಿಮಗೆ ತೊಂದರೆ ನೀಡಿದವರಿಗೆ ದಂಡಂ ದಶಗುಣಂ ಎಂಬ ವಾಕ್ಯದಂತೆ ಪಾಠವನ್ನು ಕಲಿಸುತ್ತಾನೆ. ನಿತ್ಯವೂ ಸುಬ್ರಮಣ್ಯ ಸ್ವಾಮಿಯನ್ನು ಪೂಜಿಸಿ.
ಧನುರ್ ರಾಶಿಯವರಿಗೆ ನಿಮ್ಮ ಕಾರ್ಯಗಳು ನಿಧಾನವಾಗಿ ಆದರೂ ಸರಿ ಆಗದಿದ್ದರೂ ಸರಿ ನಿಮಗೆ ರಾಶ್ಯಾಧಿಪತಿ ಗುರುವು ಬೇಕಾದನ್ನು ಕೊಟ್ಟು ನಿಮ್ಮನ್ನು ಸಂರಕ್ಷಿಸುತ್ತಾನೆ, ಉತ್ತಮ ಜೀವನ ಉತ್ಕೃಷ್ಟ ಸ್ಥಾನವನ್ನು ಧನ, ಕನಕ, ವಸ್ತು, ವಾಹನಗಳನ್ನು ಕೊಡುವುದರಲ್ಲಿ ಸಂಶಯ ಬೇಡ. ಏಪ್ರಿಲ್ 21ರ ನಂತರ ಗುರುವು ಪಂಚಮಕ್ಕೆ ಬಂದು ಒಳ್ಳೆಯ ಫಲಗಳನ್ನು ನೀಡುತ್ತಾನೆ. ಸದಾಕಾಲ ಶ್ರೀರಾಮನನ್ನು ಪೂಜಿಸಿ.
ಶನಿಯು ದ್ವಿತೀಯದಲ್ಲಿದ್ದು ಮಿಶ್ರಫಲ ನೀಡಿದ್ದಾನೆ. ಬೇವು ಬೆಲ್ಲ ತಿನ್ನುವಾಗ ಬೇವಿನ ಕಹಿ ಬೆಲ್ಲದ ಸಿಹಿ ನಮಗೆ ಮಾತ್ರವೇ ತಿಳಿಯುತ್ತದೆ. ಕಹಿಯಾದದ್ದು ಬೆಲ್ಲದಂತೆ ಇರಬೇಕಾದರೆ ದೇವರ ನಾಮದಿಂದ ಕೂಡಿದ ಪರಿಪೂರ್ಣ ಭಕ್ತಿಯೇ ನಿಮ್ಮನ್ನು ಕಾಪಾಡುತ್ತದೆ. ಶನಿಗಾಗಿ ಪ್ರಾರ್ಥನೆ ಇರಲಿ. ಶನಿಯು ಯೋಗಾನುಯೋಗಗಳನ್ನು ಪರಿವರ್ತನೆ ಮಾಡಿ ನಿಮ್ಮ ಕಾರ್ಯಗಳು ಈಡೇರುವ ಸಮಯ ಬರುತ್ತದೆ.
ಕುಂಭ ರಾಶಿಯವರಿಗೆ ಶನಿಯು ಲಗ್ನದಲ್ಲೇ ಇದ್ದು ದ್ವಿತೀಯದಲ್ಲಿ ಗುರುವಿದ್ದಾನೆ. 21-4-2023ರ ನಂತರ ಗುರು ಮೇಷ ರಾಶಿಗೆ ಬಂದು ರಾಹು ಬೃಹಸ್ಪತಿ ಸಂಧಿಯಾಗುತ್ತದೆ. ನಿಮ್ಮ ನಡೆ ನುಡಿಯಲ್ಲಿ ಎಚ್ಚರವಿರಲಿ. ಕುಂಭ ರಾಶಿಯವರು ಶನಿಗಾಗಿ ದೇವರ ದೇವರಾದ ಸೃಷ್ಟಿ- ಲಯಕ್ಕೆ ಕಾರಣರಾದ ಮಹಾವಿಷ್ಣು ಸಹಿತ ಶಂಕರನನ್ನು ಪೂಜಿಸಿ. ಜ್ಞಾನಪೀಠ ಶೃಂಗೇರಿಗೆ ತೆರಳಿ ಗುರುದ್ವಯರನ್ನು ದರ್ಶಿಸಿ. ಮಲ್ಹನಿಕೇಶ್ವರನನ್ನು ದರ್ಶಿಸಿ. ಒಳ್ಳೆಯ ಫಲವು ದೊರೆಯುತ್ತದೆ.
ಮೀನ ರಾಶಿಗೆ ಶನಿಯ ಸಂಚಾರವಿದ್ದು ಗುರು ದ್ವಿತೀಯಕ್ಕೆ ಏಪ್ರಿಲ್ 21ರ ನಂತರ ಬಂದು ಸಮಸ್ಯೆಗಳನ್ನು ಕಡಿಮೆ ಮಾಡುತ್ತಾನೆ. ದುಃಖ ದುಮ್ಮಾನಗಳನ್ನು ದೂರ ಇರಿಸಿ ನಿಮ್ಮ ಜೀವನ ಶೈಲಿಯನ್ನೇ ಬದಲಾಯಿಸುವುದರಲ್ಲಿ ಸಂದೇಹ ಬೇಡ. ಯಾವ ವಿಚಾರದ ಬಗ್ಗೆ ಚರ್ಚೆ ಬೇಡ ಅಹಂಕಾರವೂ ಬೇಡ. ಸದಾ ನಿಮ್ಮ ಮನಸ್ಸು ದೇವರ ಧ್ಯಾನನದಲ್ಲಿ ಇರಲಿ. ಲಲಿತಾ ಸಹಸ್ರನಾಮ ಪಾರಾಯಣ ಮಾಡಿ ಶುಭವಾಗುತ್ತದೆ. ಶೃಂಗೇರಿಯಲ್ಲಿ ನೆಲೆಸಿರುವ ದುರ್ಗಾದೇವಿಯನ್ನು ದರ್ಶಿಸಿ ಪೂಜಿಸಿ.