ಶಿಶಿರ ಋತು ಮಾಘ ಮಾಸದ ಎರಡನೇ ಭಾನುವಾರ ದಿನಾಂಕ 21,22,23,24,26 ಎಲ್ಲವೂ ಅತ್ಯುತ್ತಮವಾದ ದಿನಗಳು. ಬೇಕಾದ ಸಾಧನೆ ಮಾಡಿ ಗೆಲುವನ್ನು ಸಾಧಿಸಿ. ಸೂರ್ಯನು ಮಕರದಿಂದ ಮಿಥುನದವರೆಗೂ ಆರೋಹಣದಲ್ಲಿದ್ದಾನೆ. ಭಾನುವಾರ ತಪ್ಪದೇ ಸೂರ್ಯಾಷ್ಟೋತ್ತರ, ಆದಿತ್ಯ ಹೃದಯ ಪಾರಾಯಣ ಮಾಡಿ.
ವೃಷಭ ರಾಶಿಯಲ್ಲಿ ರಾಹುವು ಶುಕ್ರನಷ್ಟೇ ಬಲಿಷ್ಠನು. ಸಂತಸ, ಸಂಪತ್ತನ್ನು ಕೊಡುವವರು ಶುಕ್ರ ಮತ್ತು ರಾಹುವೇ. ಸಕಲಾಭೀಷ್ಟವನ್ನು ಕೊಡುವ ನವನಾಗನನ್ನು ಪ್ರಾರ್ಥಿಸಿ. ಬೇಕಾದ್ದನ್ನು ಪಡೆದುಕೊಳ್ಳಬಹುದು. ಅಂಗಾರಕನು ವೃಷಭದಲ್ಲೇ ಇರುವುದರಿಂದ ಸುಬ್ರಹ್ಮಣ್ಯನ ಪೂಜೆಯೊಂದಿಗೆ ಸಪ್ತಮ ಕೇತುವಿಗೆ ಗಣಪತಿಯನ್ನು ಪೂಜಿಸಿ.
ಮರ-ಗಿಡ ಕಡಿಯಬಹುದು, ವಿಷಬಳ್ಳಿಯನ್ನು ಕೀಳಬಹುದು. ಆದರೆ ಮನುಷ್ಯನಿಗೆ ಬದುಕಲು ಪರಮಾತ್ಮನು ಅವಕಾಶ ಸೃಷ್ಟಿಸಿಕೊಡುತ್ತಾನೆ. ಅಷ್ಟಮ ಶನಿಯಲ್ಲಿ ದೈವಮಾರ್ಗವೇ ನಿಮ್ಮ ಮಾರ್ಗವಾಗಿರಬೇಕು. ಅಷ್ಟಮ ಗುರುವಿಗೆ ಈಶ್ವರನನ್ನು ಅರ್ಚಿಸಿ. ತಮಿಳುನಾಡಿನ ನಾಗರಕೋಯಿಲ್ನ ದೇವರ ದರ್ಶನ ಪಡೆಯಿರಿ.
ಸಪ್ತಮ ಗುರುವು ನಿಮ್ಮನ್ನು ಕೈಹಿಡಿದು ನಡೆಸಿದ್ದಾನೆ. ಮರೆಯಬೇಡಿ. ಯಾರೊಂದಿಗೂ ತಿಕ್ಕಾಟ ಬೇಡ. ಸಂಯಮದಿಂದ ವರ್ತಿಸಿ. ಅನಾಥರಕ್ಷಕ ದೈವವೇ ನಿಮ್ಮನ್ನು ಕಾಪಾಡುತ್ತದೆ. ಬೃಹಸ್ಪತಿ ಅಷ್ಟೋತ್ತರ ಪಠಿಸಿ. ಉಡುಪಿಯಲ್ಲಿ ನೆಲೆಸಿರುವ ಅನಂತೇಶ್ವರನನ್ನು ದರ್ಶಿಸಿ.
ರವಿಯು ಏಳನೇ ಮನೆಯಲ್ಲಿದ್ದು, ಗುರುವು ಆರನೇ ಮನೆಯ ವಿಶೇಷ ಲಾಭ ತರದಿದ್ದರೂ, ಯಾವ ಅಚಾತುರ್ಯವೂ ವ್ಯಸನವೂ ಬರುವ ಸಮಯವಲ್ಲ. ಆರರ ಶನಿ ನಿಮ್ಮ ಮನೋಬಲಕ್ಕೆ ತಕ್ಕ ಫಲ ನೀಡುತ್ತಾನೆ; ನಿಮ್ಮ ಜನ್ಮಾಂತರದ ಪುಣ್ಯದಿಂದ ಪಡೆದಿದ್ದ ಪುಣ್ಯವನ್ನು ತಂದು ಕೊಡುತ್ತಾನೆ. ಅನಂತವಾಗಿ ಸೂರ್ಯ, ದುರ್ಗೆಯರನ್ನು ಪೂಜಿಸಿ.
ಪಂಚಮ ಶನಿಯಲ್ಲಿ ಆವೃತ್ತದಲ್ಲಿ ಅರ್ಧಭಾಗ ಮುಗಿದಿದ್ದು ಮತ್ತರ್ಧಭಾಗ ಉಳಿದಿದೆ. ಪೂರ್ವಾರ್ಧದಲ್ಲಿ ಲೋಕವನ್ನೇ ಅಲ್ಲಾಡಿಸಿದ ವ್ಯಾಧಿಯು ನಿಮ್ಮನ್ನು ಮುಟ್ಟಲಿಲ್ಲ ಎಂದರೆ ಭಾಗ್ಯ. ಉತ್ತರಾರ್ಧದಲ್ಲಿ ಬೆಳಕನ್ನು ಕೊಟ್ಟು ನಡೆಸಿ ಪಂಚಮ ಗುರುವು ಕಷ್ಟ ನಷ್ಟಗಳನ್ನು ದೂರ ಕಳಿಸುತ್ತಾನೆ. ಗುರುವನ್ನು ನೆನೆಸಿ. ತಂದೆ-ತಾಯಿಯನ್ನು ಅರ್ಚಿಸಿ-ಪೂಜಿಸಿ.
ಸಕಾರಾತ್ಮಕ ಚಿಂತನೆಯಿರಲಿ. ಇಡಗುಂಜಿಯ ರಾಜಗಣಪತಿಯನ್ನು ಪೂಜಿಸಲು ಮರೆಯದಿರಿ. ಕೋರ್ಟ್, ಕಚೇರಿ, ವಾದವಿವಾದಗಳಲ್ಲಿ ಮತ್ತು ಜೀವನದ ಹಲವು ಘಟ್ಟಗಳಲ್ಲಿ ಜಯ, ಶುಭವನ್ನು ಕೊಡುವವನು ಇಡಗುಂಜಿ ಗಣಪತಿ. ದುಡ್ಡಿಗೆ ದರಿದ್ರವಿಲ್ಲ. ದುಃಖಕ್ಕೆ ಬರಲು ಕಾರಣಗಳೂ ಇಲ್ಲ. ಆನಂದವಾಗಿರಿ. ನಿಮ್ಮ ಸಮಯ ಅತ್ಯುತ್ತಮವಾಗಿದ್ದು ಶಾರದೆಯನ್ನು ಪೂಜಿಸಿ.
ಮಾತಿನಷ್ಟೇ ಮುತ್ತಿನ ಹಾರಕ್ಕೂ ಬೆಲೆ ಇರುತ್ತದೆ. ಮಾತು ಮುರಿದರೆ ಮನುಷ್ಯನ ಬಾಳು ವ್ಯರ್ಥ. ನಿಮ್ಮ ಜೀವನ, ಹಣಕಾಸಿನ ವ್ಯವಹಾರವನ್ನು ಸರಿಯಾಗಿ ರೂಪಿಸಿಕೊಳ್ಳುವ ಕಾಲ. ಅಳತೆಗೆ ತಕ್ಕಂತೆ ಉಡುಪಿರಬೇಕು. ಯೋಗ್ಯತೆಗೆ ತಕ್ಕಂತೆ ಹಣಕಾಸು ವ್ಯವಹಾರವಿರಬೇಕು. ಗಾಣಗಾಪುರದ ದತ್ತಾತ್ರೇಯನನ್ನು ಪೂಜಿಸಿ. ಗುರುಚರಿತ್ರೆ ಪಾರಾಯಣ ಮಾಡಿ.
ರಾಮನು ನಾರಾಯಣನ ಅವತಾರವೇ. ನೀವು ಹಿರಿಯರ ಮಾರ್ಗದರ್ಶನದಂತೆ ನಡೆದು, ನಾರಾಯಣನಂತೆ ನಡೆದುಕೊಳ್ಳಿ. ಮನುಷ್ಯನು ನಾಡು, ನುಡಿಯನ್ನು ಸರಿಯಾಗಿಟ್ಟುಕೊಂಡಲ್ಲಿ ಶತ್ರುಗಳ ಭಯವಿಲ್ಲ. ಕಡೆಯ ಭಾಗದ ಶನಿ ಸಂಚಾರ ದಿಂದ ಕೆಲವೊಂದು ಅಲ್ಪಕಾಲದ ಅನಾರೋಗ್ಯ ಉಂಟಾಗಬಹುದು. ರುದ್ರಪಾರಾಯಣ ಮಾಡಿ.
ಮಕರದಲ್ಲಿ ಗುರುವಿರುವುದರಿಂದ ಶನಿ ಸಂಚಾರದ ಆಗುಹೋಗುಗಳನ್ನು ತಡೆಹಿಡಿದಿದ್ದಾನೆ. ಕಣ್ಣೀರನ್ನು ಒರೆಸಿದ್ದಾನೆ. ಹಸಿವು ಬಾಯಾರಿಕೆಗಳು ತಾತ್ಕಾಲಿಕ. ಆದರೆ ನಿಮಗೆ ಎಲ್ಲ ಸಮಸ್ಯೆ ಪರಿಹಾರವು ದೈವಭಕ್ತಿಯೇ. ಲಕ್ಷಿ್ಮೕನಾರಾಯಣ ಹೃದಯ ಪಾರಾಯಣ ಮಾಡಿ. ನಿಮ್ಮ ಕಷ್ಟವನ್ನು ನೀಗಿಸಿ. ಶನೈಶ್ಚರ ಅಷ್ಟೋತ್ತರ, ನವಗ್ರಹ ಸ್ತೋತ್ರ ಪಠಿಸಿ.
ಸೂರ್ಯನು ಕುಂಭ ರಾಶಿಯಲ್ಲಿ ಬಂದಿದ್ದು, ಮಿಥುನಾಧಿಪತಿ ಬುಧನು ಸೇರಿದ್ದಾನೆ. ಹನ್ನೆರಡನೇ ಮನೆ ಶನಿಯು ನಿಮ್ಮ ಜೀವನದಲ್ಲಿ ತಳಮಳ ಉಂಟುಮಾಡಿದೆ. ಹೆದರಿ ಹಣ್ಣಾಗದಿರಿ. ನಿಮ್ಮ ಮನೆಯ ಹೆಣ್ಣುಮಕ್ಕಳನ್ನು ಬಯ್ಯದಿರಿ. ತಾಳಿದವನು ಬಾಳಿಯಾನು. ಶನಿಯು ದ್ವಾದಶವನ್ನು ಬಿಟ್ಟ ಸಮಯವೇ ಒಳ್ಳೆಯದಾಗುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಶ್ರೀಕೃಷ್ಣನನ್ನು ಪೂಜಿಸಿ.
ನಾಲ್ಕು ಮೂಲೆಗಳಲ್ಲಿ ಭಾರವನ್ನು ಸಮನಾಗಿ ಹಂಚಲು ವರ್ತಲಾಕಾರದ ಸುಭದ್ರ ವಿನ್ಯಾಸವುಳ್ಳ ಕಂಬ ಅತಿಮುಖ್ಯ. ಮೀನ- ಮಿಥುನ-ಕನ್ಯಾ-ಧನಸ್ಸು ರಾಶಿಯವರು ಸಮಾಜದ 4 ಕಂಬವಿದ್ದಂತೆ. ಅನ್ಯರ ಕಷ್ಟ ನೀಗಿ ಸಂತೋಷ ನೀಡುವ ಸಮಯ ನಿಮ್ಮದಾಗಿದೆ. ಶರೀರದಲ್ಲಿ ಸ್ವಲ್ಪ ಆಲಸ್ಯ. ಹೆದರಬೇಡಿ. ತಾನಾಗಿಯೇ ಸರಿಹೋಗುತ್ತದೆ. ಭಗವದ್ಗೀತೆಯ 11ನೇ ಅಧ್ಯಾಯ, ಸುಂದರಕಾಂಡ ಪಾರಾಯಣ ಮಾಡಿ.