ಮೇಷ ರಾಶಿಗೆ ದ್ವಾದಶದಲ್ಲಿ ಗುರುವಿದ್ದು, ಗುರುವಿಲ್ಲದೆ ದಾರಿ ಕಾಣದು. ಏಕಾದಶ ಶನಿ ಲಾಭದಲ್ಲಿದ್ದರೂ ಗುರುವು ಎಲ್ಲವನ್ನೂ ಕೊಡುವುದೂ ಇಲ್ಲ. ಗುರುವಿಗೆ ಶರಣಾದಲ್ಲಿ ಜೀವನದ ಗುರಿಯನ್ನು ಉತ್ತುಂಗಕ್ಕೆ ಮುಟ್ಟಿಸುತ್ತಾನೆ. ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಲೇಬೇಕು. ಶರೀರಕ್ಕೆ ಅಸ್ವಸ್ಥವನ್ನು ಗುರುವು ನೀಡುತ್ತಾನೆ. ಕೋಪದಿಂದ ಆರೋಗ್ಯ ಕೆಡುತ್ತದೆ.
ಮನುಷ್ಯ ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸಿ ಕೆಟ್ಟವನಾಗಿ ಬಿಂಬಿತವಾಗುತ್ತಾನೆ. ದೇವರಲ್ಲಿ ಪ್ರಾರ್ಥನೆ ಇರಿಸಿದರೆ ಮಾತ್ರವೇ ಜೀವನದಲ್ಲಿ ಬೇಕಾದ್ದನ್ನು ಪಡೆಯುತ್ತೀರ. ಏಕಾದಶದಲ್ಲಿ ಗುರುವಿರುವ ಈ ಸಮಯ ಸಾಧಿಸಿ ಕಷ್ಟದ ಸರಮಾಲೆಗಳನ್ನು, ಆರ್ಥಿಕ ಬಂಧನದಿಂದ ಬಿಡಿಸಿಕೊಂಡು ಕ್ಷೇಮ ಕಂಡುಕೊಳ್ಳಿ. ದ್ವಾದಶ ರಾಹುವಿಗೆ ನಾಗರಾಜ ಅಷ್ಟೋತ್ತರ ಪಾರಾಯಣ ಮಾಡಿ. ಭಾನುವಾರಗಳಂದು ಅರಳಿಕಟ್ಟೆಗೆ 21 ಪ್ರದಕ್ಷಿಣೆ ಮಾಡಿರಿ.
ಮಿಥುನ ರಾಶಿಯಲ್ಲೇ ಸೂರ್ಯನಿದ್ದು, ದ್ವಾದಶದಲ್ಲಿ ಬುಧ-ಶುಕ್ರರು ಇರುವುದರಿಂದ ಆರ್ಥಿಕವಾಗಿ ಹಿನ್ನಡೆ ಆಗುವ ಸಮಯ. ದಶಮದಲ್ಲಿ ಗುರುವಿರುವುದು ಸ್ವಕ್ಷೇತ್ರವಾದರೂ ಸಮಸ್ಯೆಗಳನ್ನು ನೀಗಿಸಲು ದೈವಬಲ ಬೇಕು. ಮಹಾವಿಷ್ಣುವನ್ನು ಪ್ರಾರ್ಥಿಸಿ. ಆಧ್ಯಾತ್ಮ ರಾಮಾಯಣದ ಸುಂದರಕಾಂಡ ಪಾರಾಯಣ ಮಾಡಿ. ನಿರಾಸೆ ದೂರವಾಗಿ ಆಶಾದಾಯಕ ಉತ್ತರ ದೊರಕುವುದು.
ಶುದ್ಧವಾದ ನೀರಿನ ಮನಸ್ಸುಳ್ಳವರು ನೀವು. ನಿಮ್ಮ ಪ್ರತಿಬಿಂಬವನ್ನು ನೀರಿನಲ್ಲೇ ಕಂಡುಕೊಳ್ಳಬೇಕು. ನಿಮ್ಮ ಸಮಸ್ಯೆಗಳಿಗೆ ನೀವೇ ಉತ್ತರವನ್ನು ಕಂಡುಕೊಳ್ಳಿ. ಸಾವಧಾನವಾಗಿ ಸಂಯಮದಿಂದ ಅಷ್ಟಮ ಶನಿಯ ತಾಪವನ್ನು ತಡೆದು 9ರ ಗುರುವಿನ ಫಲವನ್ನು ಪಡೆಯಲು ಗುರುವನ್ನು, ಉಮಾಮಹೇಶ್ವರನನ್ನು ಆರಾಧಿಸಿ.
ಸಿಂಹರಾಶಿಯವರು ಸಿಂಹದಂತೆ ಜೀವನವನ್ನು ನಡೆಸಿ, ಸ್ಥಾನಮಾನಗಳನ್ನು ಗಳಿಸಬೇಕು. ಅದಕ್ಕೆ ತಕ್ಕಂತೆ ಆರ್ಥಿಕ ಪರಿಸ್ಥಿತಿಯೂ ಸಹಕರಿಸಬೇಕು. ಈ ರಾಶಿಯಲ್ಲಿ ಜನಿಸಿದವರಿಗೆ ಇಲ್ಲವೆಂಬ ಶಬ್ದ ಅನ್ವಯಿಸುವುದಿಲ್ಲ. ಸೂರ್ಯನಾರಾಯಣನನ್ನು ಪ್ರಾರ್ಥಿಸಿ. ಸೂರ್ಯಾಷ್ಟಕ ಪಠಿಸಿ. ಆದಿತ್ಯಹೃದಯ ಪಾರಾಯಣ ಮಾಡಿಬುದ್ಧಿಗೆ ಬೆಳಕನ್ನು ನೀಡುತ್ತಾನೆ. ಉದಯ ಸೂರ್ಯನನ್ನು ದರ್ಶಿಸಿ.
ಸಪ್ತಮ ಗುರುವು ಕೆಲವೊಂದು ಸಂತೋಷ ತಂದುಕೊಟ್ಟು ಒಳ್ಳೆಯ ಕಾರ್ಯಗಳನ್ನು ಮಾಡಲು ಹರಸುತ್ತಾನೆ. ಆರರಲ್ಲಿ ಶನಿಯಿದ್ದು, ಸಪ್ತಮ ಗುರು ಇರುವುದರಿಂದ ದೇವರೇ ನಿಮ್ಮ ಜೀವನದ ಬುಗುರಿಯನ್ನು ಆಡಿಸುತ್ತಾನೆ. ಸತ್ಯನಾರಾಯಣ ವ್ರತಕಥೆಯನ್ನು ಓದಿ. ರಾಮಾಷ್ಟೋತ್ತರ ಸಹಿತವಾಗಿ ವಿಷ್ಣು ಸಹಸ್ರನಾಮದಲ್ಲಿ ಪೂಜಿಸಿ. ಇಚ್ಛೆಗಳು ಈಡೇರುತ್ತವೆ.
ತೂಕವನ್ನು ಮಾಡುವವನು ಮೋಸಮಾಡಬಾರದು. ನಿಮ್ಮ ಮನಸ್ಸನ್ನು ಅಳೆದು ತೂಕಮಾಡಿ ವಿವಾದಕ್ಕೆ ಅವಕಾಶ ಕೊಡದೆ ಭಗವಂತನ ಕೃಪೆಯಾದರೆ ಪಂಚಮ ಶನಿ, ಷಷ್ಠ ಗುರು ಏನೂ ಮಾಡಲಾಗುವುದಿಲ್ಲ. ಶರೀರಕ್ಕೆ ಆಲಸ್ಯ ಬೇಡ. ಖಡ್ಗ ಮಾಲಾಸ್ತೋತ್ರ ಪಠಿಸಿ. ದುರ್ಗೆಯನ್ನು ಅರ್ಚಿಸಿ. ಅನನ್ಯ ಭಕ್ತಿಯಿಂದ ಸೇವೆ ಮಾಡಿದರೆ ಸುಖಕ್ಕೆ ಕೊರತೆ ಇರುವುದಿಲ್ಲ.
ತೂಕವನ್ನು ಮಾಡುವವನು ಮೋಸಮಾಡಬಾರದು. ನಿಮ್ಮ ಮನಸ್ಸನ್ನು ಅಳೆದು ತೂಕಮಾಡಿ ವಿವಾದಕ್ಕೆ ಅವಕಾಶ ಕೊಡದೆ ಭಗವಂತನ ಕೃಪೆಯಾದರೆ ಪಂಚಮ ಶನಿ, ಷಷ್ಠ ಗುರು ಏನೂ ಮಾಡಲಾಗುವುದಿಲ್ಲ. ಶರೀರಕ್ಕೆ ಆಲಸ್ಯ ಬೇಡ. ಖಡ್ಗ ಮಾಲಾಸ್ತೋತ್ರ ಪಠಿಸಿ. ದುರ್ಗೆಯನ್ನು ಅರ್ಚಿಸಿ. ಅನನ್ಯ ಭಕ್ತಿಯಿಂದ ಸೇವೆ ಮಾಡಿದರೆ ಸುಖಕ್ಕೆ ಕೊರತೆ ಇರುವುದಿಲ್ಲ.
ಧನುರ್ ರಾಶಿಯವರು ಸದೃಢವಾಗಿ ನಿಲ್ಲಬೇಕಾದರೆ ದೇವರ ಅಪ್ಪಣೆ, ಜನ್ಮಕೊಟ್ಟವರ ಪುಣ್ಯಮಾತ್ರದಿಂದ ಸಾಧ್ಯ. ರಾಮನು ಗುರು ವಸಿಷ್ಠರನ್ನು ತಂದೆ ಎಂದು ತಿಳಿದರೂ ಗುರುಭಕ್ತಿ, ಪಿತೃ-ಮಾತೃ ಭಕ್ತಿಯನ್ನು ಮರೆಯಲಿಲ್ಲ. ಅದರಂತೆ 10 ಸಹಸ್ರ ವರ್ಷಗಳು ಭರತಖಂಡವನ್ನು ಆಳಿದನು. ನೀವೂ ಅವನಂತೆ ನಡೆಯಿರಿ. ಶನಿಯು ಮಕರಕ್ಕೆ ಬರುವುದ ರಿಂದ ಮಾತಿನಲ್ಲಿ ಎಚ್ಚರಿಕೆ ಇರಲಿ. ರಾಮಾಷ್ಟೋತ್ತರ ಪಠಿಸಿ. ದುರ್ಗೆಯನ್ನು ಪೂಜಿಸಿ.
ಶನಿಯು ಮಕರಕ್ಕೆ ಜುಲೈ 12ರಿಂದ ಮತ್ತೆ ಹಿಂದೆ ಬಂದು ನಿಮ್ಮನ್ನು ಪರೀಕ್ಷಿಸುತ್ತಾನೆ. ದೃಢ ಭಕ್ತಿಯೊಂದೇ ಕಾಪಾಡುತ್ತದೆ. ತೃತೀಯ ಗುರುವಿನ ರಕ್ಷಣೆ ಇರುತ್ತದೆ. ಕೆಲಸದಲ್ಲಿ ಶ್ರದ್ಧೆಯೂ ಅಚಂಚಲ ಭಕ್ತಿಯೂ ಇದ್ದಲ್ಲಿ ಸಪ್ತಸಮುದ್ರವನ್ನೇ ದಾಟಬಹುದು. ನೀಲಾಂಬರಿ ಅಷ್ಟೋತ್ತರ, ಕಾಳಭೈರವ ಅಷ್ಟಕ ಪಠಿಸಿ. ಸೋಮವಾರದಂದು ಈಶ್ವರ ದರ್ಶನ ಪಡೆದು ಸಾಯಂಕಾಲ ಫಲಾಹಾರ ಸ್ವೀಕರಿಸಿ.
ಕಾಲನನ್ನು ಗೆಲ್ಲಬೇಕಾದರೆ ಈಶ್ವರನ ಅರ್ಚಿಸಿ. ಜಗತ್ತನ್ನು ಕಟ್ಟಿದ ಮಹದೇವನು ಬ್ರಹ್ಮನು ಸೃಷ್ಟಿಯನ್ನು ವಿಷ್ಣುವನ್ನು ಸ್ಥಿತಿಗೂ ಇಟ್ಟು, ಕಡೆಯಲ್ಲಿ ನಾನು ಎಂಬುದು ಏನೂ ಇಲ್ಲವೆಂದು ಹೇಳಿದ್ದಾನೆ. ಜು.12ರಿಂದ ದ್ವಾದಶಕ್ಕೆ ಶನಿಯು ಬಂದು ಸ್ವಲ್ಪ ಮಟ್ಟಿಗೆ ಜೀವನವು ನೀವಂದುಕೊಂಡಂತೆ ನಡೆಯುತ್ತದೆ. ಸಾಲಿಗ್ರಾಮ ಗುರುನರಸಿಂಹನನ್ನು ದರ್ಶಿಸಿ. ಲಕ್ಷ್ಮೀನರಸಿಂಹ ಸ್ತೋತ್ರ ಪಾಠಿಸಿ
ಆಸರೆ ಇಲ್ಲದ ಹೆಣ್ಣು, ನೀರನ್ನು ಬಿಟ್ಟ ಮೀನು ಬದುಕಲು ಕಷ್ಟದಾಯಕವಾಗಿರುತ್ತದೆ. ದ್ವಾದಶ ಶನಿಯು ಜುಲೈ 12ರವರೆಗೆ ಇರುತ್ತಾನೆ. ಆದ್ದರಿಂದ ಯಾರನ್ನೂ ದ್ವೇಷಿಸದಿರಿ. ಇನ್ನೂ ಮೂರು ವಾರ ಶನಿಯ ಪ್ರಾರ್ಥನೆ ಇರಲಿ. ಏಕಾದಶಕ್ಕೆ ಶನಿಯು ಯಶಸ್ಸಿನ ಉತ್ತುಂಗಕ್ಕೆ ಒಯ್ಯುತ್ತಾನೆ. ಪಾರ್ವತಿ ಸಮೇತ ಸಾಂಬಸದಾಶಿವನ ಕಥಾಶ್ರವಣ ಮಾಡಿ. ಲಿಂಗಾಷ್ಟಕವನ್ನು ಹೇಳುತ್ತಾ ಬಿಲ್ವಪತ್ರೆಯಿಂದ ಪೂಜಿಸಿ.