ಮೇಷ: ಅಧಿಪತಿ ಅಂಗಾರಕನು ಹನ್ನೆರಡರಲ್ಲಿದ್ದು, 1ನೇ ತಾರೀಖು ಬುಧನು ಚಂದ್ರನ ಮನೆಗೆ ಬಂದಿರುತ್ತಾನೆ. ರವಿಯೊಡನೆ ಇದ್ದಾನೆ. ಸೂರ್ಯನು ಆ.16ರಂದು ಸಿಂಹರಾಶಿಗೆ ಬರುವುದರಿಂದ ಚಂದ್ರನ ಮನೆಯಲ್ಲಿದ್ದು, ಕೆಲವು ಕಾರ್ಯಗಳು ನಿಧಾನವಾಗಬಹುದು. ಮಹಾವಿಷ್ಣುವಿನ ಪ್ರಾರ್ಥನೆ ಇರಲಿ, ಗುರುವಿನ ಬಲವೊಂದೇ ಶ್ರೀರಕ್ಷೆ.
ವೃಷಭ: ಅಧಿಪತಿ ಶುಕ್ರನು ದ್ವಿತೀಯದಲ್ಲಿದ್ದು ಏಕಾದಶಿ ಬುಧ ಜಾಣ್ಮೆಯಿಂದ ವ್ಯವಹಾರ ಮಾಡಿದಲ್ಲಿ ಸಂತೋಷ, ಸುಖ, ನಿಮ್ಮದಾಗುತ್ತದೆ. ಈ ಹಿಂದೆ ಅಷ್ಟಮ ಶನಿಯಲ್ಲಿ ಬಂದಿದ್ದ ಕೋರ್ಟು ಕಚೇರಿ ಆತಂಕಗಳನ್ನು ಸರಿಪಡಿಸಿ ಕೊಳ್ಳಬಹುದು. ಗುರುವಿನ ಗುಲಾಮನಾಗಲೇ ಬೇಕು.
ಮಿಥುನ: ಅಧಿಪತಿ ಬುಧನು ಸ್ವಂತ ಮನೆಯಲ್ಲೇ ಇದ್ದು ಆತಂಕಗಳಿಂದ ಬರಬೇಕಾಗಿದ್ದ ತೊಂದರೆಯನ್ನು ಗುರುಕಟಾಕ್ಷದಿಂದ ಕಾಪಾಡುತ್ತಾನೆ. ಉಪಕಾರವನ್ನು ನೆನೆಸದೆ ಮಾಡಿದ ಉಪಕಾರಕ್ಕೆ ಕೃತಜ್ಞತೆ ಇಲ್ಲದಲ್ಲಿ ನಿಮಗೆ ಚಿಂತೆಯು ದೂರವಾಗುವುದಿಲ್ಲ. ಗುರು ನರಸಿಂಹನನ್ನು ಅನನ್ಯವಾಗಿ ಭಜಿಸಿ.
ಕಟಕ: ರವಿಯ ಪ್ರವೇಶವು ಆ.17ರಂದು ಸಿಂಹ ರಾಶಿಗೆ ಬಂದಾಗ ಪಂಚಮಗುರು, ಷಷ್ಟಿ ಶನಿ, ಏಕಾದಶದ ರಾಹುವಿನಿಂದ ನಿಮ್ಮ ಕೈ ಸೇರಬೇಕಾದ ಪುಣ್ಯ, ಲಾಭ, ಯಶಸ್ಸು, ಕೀರ್ತಿ, ಆರೋಗ್ಯವಾದ ಬಾಳು ನಿಮ್ಮ ಜೇಬಿನಲ್ಲಿದೆ. ಮರೆಯದಿರಿ ಭಗವಂತನನ್ನು. ಸೂರ್ಯ, ಷಣ್ಮುಖ, ದತ್ತಾತ್ರೇಯನನ್ನು ಆರಾಧಿಸಿ.
ಸಿಂಹ: ಸಿಂಹ ರಾಶಿಯಲ್ಲಿ ಜನಿಸಿದ ನೀವು, ಪಂಚಮ ಗುರುವಿನಿಂದ ಆಗದ ಕೆಲಸ ಸಾಧಿಸಬಹುದು. ಕೋರ್ಟು ಕಚೇರಿ ವ್ಯವಹಾರ ಜಯ ತರಲಿದೆ. ಪುಣ್ಯ ಲಯವಾದಾಗ ಅಧಿಪತಿ ಸೂರ್ಯನು ನೆತ್ತಿ, ಕಾಲನ್ನು ಸುಡುತ್ತಾನೆ. ಎಚ್ಚರವಿರಲಿ. ಸದಾ ಉಮಾಮಹೇಶ್ವರ ನನ್ನು ಆರಾಧಿಸಿ. ತ್ರಯಂಬಕನನ್ನು ಪೂಜಿಸಿ.
ಕನ್ಯಾ: ‘ಎತ್ತು ಏರಿಗೆ, ಕೋಣ ನೀರಿಗೆ’ ಎಂಬಂತೆ ನೀವು ಸಾಮಾನ್ಯವಾಗಿ ಹೇಳಿದ ಮಾತು ಕೇಳುವುದು ಕಷ್ಟ. ಸಂಶಯಾಸ್ಪದದಲ್ಲಿ ಬದುಕುವುದು ದುಸ್ತರ. ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ ಮಾಡುವುದೇನು. ಖರ್ಚು ಹೆಚ್ಚಾಗಿ ಬರಿಗೈಯಾಗುವುದು. ವಿಷ್ಣು ಪುರಾಣ ಓದಿ. ವಿಷ್ಣು ಸಹಸ್ರನಾಮ ಪಠಿಸಿ.
ತುಲಾ: ನ್ಯಾಯ, ಧರ್ಮ, ನೀತಿ, ನ್ಯಾಯಾಲಯಕ್ಕೆ ಹೋದಾಗ ಗೋಚರವಾಗುವ ತಕ್ಕಡಿ, ಇವು ಮನುಷ್ಯನ ಅವಿಭಾಜ್ಯ ಅಂಗ. ಒಂದು ಕೊಂಡಿ ಕಳಚಿ ಬಿದ್ದರೂ ಮನುಷ್ಯ ಪಂಚೇಂದ್ರಿಯಗಳಲ್ಲಿ ಒಂದನ್ನು ಕಳೆದುಕೊಂಡಂತೆ. ಎಚ್ಚರವಾಗಿ ಹೆಜ್ಜೆಯಿಡಿ. ವೃಥಾ ಮನಸ್ಸನ್ನು ಉದ್ವೇಗ ಮಾಡಬೇಡಿ. ಶ್ರೀ ಇಡಗುಂಜಿ ಗಣೇಶ ಹಾಗೂ ದುರ್ಗಾ ಪರಮೇಶ್ವರಿಯನ್ನು ಧ್ಯಾನಿಸಿ.
ವೃಶ್ಚಿಕ: ಕೆಲಸಗಳು ನಿರೀಕ್ಷೆಯಂತೆ ನಡೆಯುತ್ತಿವೆ. ಪರಮಾತ್ಮನು ಹಣದ ಕೊರತೆ ತರುವುದಿಲ್ಲ. ಪೂರ್ವಜನ್ಮದ ದೋಷವೋ ಅಥವಾ ರಾಷ್ಟ್ರಕ್ಕೆ ಅಂಟಿರುವ ಆರ್ಥಿಕ ಸಂಕಷ್ಟವೋ ಅಥವಾ ರೋಗದ ಸಂಕಷ್ಟವೋ, ಧೈರ್ಯವಿರಲಿ. ಎರಡರ ಗುರು ನಿಮ್ಮನ್ನು ಕಾದು ಇಚ್ಛೆಯನ್ನು ಪೂರೈಸಿ ಶುಭತರುತ್ತಾನೆ. ಷಣ್ಮುಖನಾದ ದೇವರು ಸುಬ್ರಹ್ಮಣ್ಯನನ್ನು ಪೂಜಿಸಿ.
ಧನು: ರಾಶಿಯಲ್ಲೇ ಗುರುವಿದ್ದು, ಗುರುವು ಎಲ್ಲವನ್ನೂ ಕೊಡುತ್ತಾನೆ. ಜನರ ಸೇವೆಮಾಡಲು ದುಷ್ಟತನದ ಮನಸ್ಸನ್ನು ಕಳೆದು ಸ್ವತಂತ್ರವಾಗಿ ಮಾಡುವವರು ಶ್ರೀ ಗುರುದತ್ತಾತ್ರೇಯ ಹಾಗೂ ಅಂಬಾಭವಾನಿ. ಸಮುದ್ರವನ್ನು ದಾಟಬೇಕು. ಕೈಲಾಸವನ್ನು ದಾಟಿಸಿ ದ್ದಾಗಿದೆ. ಪೂರ್ವಪುಣ್ಯದ ಖಾತೆಯಿಂದ ಶ್ರೇಯಸ್ಸು. ಲಕ್ಷ್ಮೀ ಸಹಿತ ಅನಂತಪದ್ಮನಾಭನನ್ನು ಪೂಜಿಸಿ.
ಮಕರ: ಅಧಿಪತಿ ಶನಿಯು ಪರೀಕ್ಷೆ ಮಾಡುತ್ತಿದ್ದಾನೆ. ಧರ್ಮವನ್ನು ಬಿಟ್ಟು ಅಧರ್ಮವನ್ನು ಸ್ಥಾಪಿಸಬೇಡಿ. ಮನಸ್ಸಿಗೆ ಕೆಲವೊಂದು ವಿಚಾರದಿಂದ ಗೊಂದಲವಾದರೂ ಪ್ರಾರ್ಥನೆಯಿಂದ ಅದೃಷ್ಟವನ್ನು ಬದಲಿಸಿಕೊಳ್ಳಬಹುದು. ಶ್ರೀರಾಮಚಂದ್ರನನ್ನು ಪೂಜಿಸಿ, ಸುಂದರಕಾಂಡ ಪಾರಾಯಣ ಮಾಡಿ.
ಕುಂಭ: ದ್ವಾದಶ ಶನಿ ನಿಮಗೆ ಸಮಸ್ಯೆಗಳನ್ನು ಕೊಟ್ಟು ಬಗೆಹರಿಸಿಕೊಳ್ಳಲು ಬಿಟ್ಟು ಪಾಠ ಕಲಿಸುತ್ತಾನೆ. ವಿದ್ಯಾರ್ಥಿಗೆ ಕಲಿಯಲು ವಯಸ್ಸು ಮುಖ್ಯವಲ್ಲ. ಪಾಠ ಕಲಿತು ಜೀವನ ಅರ್ಥಮಾಡಿಕೊಂಡು ನಡೆಯಬೇಕು. ಮಕರ, ಕುಂಭ, ಮೀನ, ಮಿಥುನ ರಾಶಿಯವರಿಗೆ ಡಿಸೆಂಬರ್ 31 ನಂತರ ಸುದಿನಗಳು ಬರಲಿವೆ. ಭಗವದ್ಗೀತೆಯ 11, 14ನೇ ಅಧ್ಯಾಯವನ್ನು ಆರಾಧಿಸಿ.
ಮೀನ: ಬಂಗಾರದ ತಟ್ಟೆಯಲ್ಲಿ ಊಟಕೊಟ್ಟು ಸಂಸಾರ ಸುಖ, ಸಾಮರಸ್ಯವಿರಲಿ ಎಂದು ಭಗವಂತ ಆಶೀರ್ವ ದಿಸಿದ್ದಾನೆ. ಇಲ್ಲದ್ದಕ್ಕೆ ಚಿಂತಿಸುವುದು ಮನುಷ್ಯನ ಅಲ್ಪತನ, ಮಂದಬುದ್ಧಿ. ಗುರುವಿನ ಅಷ್ಟೋತ್ತರ ಪಠಿಸಿ, ಶಿವಸಹಸ್ರನಾಮ ಹಾಗೂ ಸೌಂದರ್ಯಲಹರಿ ಪಾರಾಯಣ ಮಾಡಿ. ಹನ್ನೊಂದರ ಶನಿ, ಹತ್ತರ ಗುರುವು ಬೆಂಬಲವಾಗಿ ನಿಂತಿರುತ್ತಾರೆ. ಪರೋಪಕಾರ, ದೇಶದ ಚಿಂತನೆ ನಿಮ್ಮದಾಗಿರಲಿ.