ಮೇಷ: ಅಂಗಾರಕನಿಂದ ಚಿಂತೆಗಳು ಕಾಡುವ ಸಾಧ್ಯತೆ. ಕುಲದೇವರನ್ನು ಆರಾಧಿಸಿ. ನವಮದಲ್ಲಿರುವ ಗುರುವು ಸಂಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ಶನಿಯು ದಶಮ ಸ್ಥಾನದಲ್ಲಿದ್ದು ಯಥಾಸ್ಥಿತಿಯಲ್ಲಿ ನಿಮ್ಮನ್ನು ಕಾಪಾಡುತ್ತಾನೆ. ಮಾರ್ಚ್ 29ರತನಕ ಗುರುವೇ ನಿಮ್ಮನ್ನು ರಕ್ಷಿಸುತ್ತಾನೆ. ಈಶ್ವರನ ಆರಾಧನೆ ಮಾಡಿರಿ.
ವೃಷಭ: ನೀವು ಮಾಡುವಂತಹ ಕೆಲಸಗಳಲ್ಲಿ ಲಾಭ ಮತ್ತು ವಿಜಯವನ್ನು ಹೊಂದುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶಿವಾರಾಧನೆಯನ್ನು ಮಾಡಿರಿ. ಹಣಕಾಸು ವ್ಯವಹಾರಗಳಲ್ಲಿ ಹೆಚ್ಚಿನ ಜಾಗ್ರತೆಯಿಂದ ಮುಂದುವರಿಯಿರಿ. ಜಗನ್ಮಾತೆ ದುರ್ಗಾಮಾತೆಯನ್ನು ಶ್ರದ್ಧಾಭಕ್ತಿಗಳಿಂದ ಪ್ರಾರ್ಥಿಸಿ.
ಮಿಥುನ: ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸುವುದಕ್ಕೆ ಇದು ಯೋಗ್ಯವಾದ ಸಮಯವಲ್ಲ. ಗುರುವಿನ ಅನುಗ್ರಹದಿಂದ ಸುಖ ಪ್ರಾಪ್ತಿಯಾಗಲಿದೆ. ಅಷ್ಟಮ ಶನಿಯು ದುಃಖವನ್ನು ತರಬಹುದು. ಎಲ್ಲ ವಿಷಯಗಳಲ್ಲಿಯೂ ಸ್ಥಿತಪ್ರಜ್ಞರಾಗಿಯೇ ವರ್ತಿಸಿರಿ. ಆಂಜನೇಯ ಹಾಗೂ ಈಶ್ವರನ ಆರಾಧನೆಯನ್ನು ಮಾಡಿರಿ.
ಕಟಕ: ಮನಃಕಾರಕನಾದ ಚಂದ್ರಗ್ರಹನು ವಾರದ ಆರಂಭದಲ್ಲಿ ಸುಖವನ್ನು ತರುತ್ತಾನೆ. ಸಾಧ್ಯವಾದಷ್ಟರ ಮಟ್ಟಿಗೆ ಶತ್ರುಗಳಿಂದ ದೂರವಿರಿ. ಯಾವುದೇ ಕೆಲಸವನ್ನು ಪ್ರಾರಂಭಿಸುವುದಕ್ಕಿಂತ ಮೊದಲು ಅದರ ಪರಿಣಾಮಗಳ ಬಗ್ಗೆ ಚಿಂತಿಸಿಯೇ ಮುಂದುವರಿಯಿರಿ. ದುರ್ಗಾರಾಧನೆ ಮಾಡಿ.
ಸಿಂಹ: ಮಕ್ಕಳಿಲ್ಲದವರಿಗೆ ಸಂತಾನಪ್ರಾಪ್ತಿಯ ಯೋಗವಿದೆ. ಶತ್ರುಗಳು ಕೂಡ ಮಿತ್ರರಾಗಿ ಬದಲಾಗುವ ಸಮಯ ಬಂದಿದೆ. ಗುರುವಿನ ಬಲದಿಂದಾಗಿ ಮಾಡುವ ಕೆಲಸಗಳಲ್ಲಿ ಜಯ ಪ್ರಾಪ್ತವಾಗಲಿದೆ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಈಶ್ವರ ಹಾಗೂ ಸೂರ್ಯನಾರಾಯಣನ ಆರಾಧನೆಯನ್ನು ಮಾಡಿರಿ.
ಕನ್ಯಾ: ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸುವುದಕ್ಕೆ ಇದು ಸೂಕ್ತ ಸಮಯ. ಜಯ ಪ್ರಾಪ್ತಿ. ಬಂಧುಗಳೊಡನೆ ಜಾಗರೂಕತೆಯಿಂದ ವರ್ತಿಸಿ ಹಾಗೂ ವ್ಯವಹರಿಸಿ. ಶನಿಯು ಪಂಚಮದಲ್ಲಿ ಇರುವುದರಿಂದ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಶ್ರೀ ಲಕ್ಷ್ಮೀನಾರಾಯಣನ ಆರಾಧನೆ ಮಾಡಿರಿ.
ತುಲಾ: ಇದು ತುಸು ಒತ್ತಡದ ವಾರವಾಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಬಹಳ ಜವಾಬ್ದಾರಿಯಿಂದ ವರ್ತಿಸಿ. ಭಯಪಡದೆ ಮುನ್ನಡೆಯಿರಿ. ಯಾರೊಡನೆಯೂ ಕಲಹ ಮಾಡುವುದು ಬೇಡ. ದುರ್ಗಾರಾಧನೆ ಹಾಗೂ ಗಾಣಗಾಪುರದ ಶ್ರೀ ದತ್ತಾತ್ರೇಯನ ಆರಾಧನೆ ಮಾಡಿರಿ.
ವೃಶ್ಚಿಕ: ಗುರುವು ಎರಡನೆ ಮನೆಯಲ್ಲಿ ಸಂಚರಿಸುವುದರಿಂದ ಧನಲಾಭವಾಗಲಿದೆ. ಬಹುದಿನಗಳ ನಿರೀಕ್ಷಿತ ಧನವು ಬಂದು ಸೇರುವುದು. ವ್ಯಾಪಾರದಲ್ಲಿ ಲಾಭ. ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಸಂತಾನ ಪ್ರಾಪ್ತಿ. ಶುಭಕರವಾದ ವಾರ ನಿಮ್ಮದಾಗಲಿದೆ. ಸುಬ್ರಹ್ಮಣ್ಯನ ಆರಾಧನೆ ಮಾಡಿ.
ಧನು: ಗುರುವು ಜನ್ಮದಲ್ಲಿ ಇರುವುದರಿಂದ ಕೈಗೊಳ್ಳುವ ಕೆಲಸಗಳಲ್ಲಿ ಎಚ್ಚರ ವಹಿಸಿ. ಜಾಗರೂಕತೆಯಿಂದ ವ್ಯವಹಾರ ಮಾಡಬೇಕು. ಉದ್ಯೋಗದಲ್ಲಿ ಏರಿಳಿತಗಳಿರುತ್ತವೆ. ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಸಾಂಸಾರಿಕ ಜೀವನದಲ್ಲಿ ಸುಖಪ್ರಾಪ್ತಿ. ದತ್ತಾತ್ರೇಯ ಹಾಗೂ ರುದ್ರದೇವರ ಆರಾಧನೆ ಮಾಡಿರಿ.
ಮಕರ: ಶನಿಯು ಜನ್ಮದಲ್ಲಿ ಇರುವುದರಿಂದ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ. ಎಚ್ಚರಿಕೆಯಿಂದ ವ್ಯವಹಾರಗಳನ್ನು ಕೈಗೊಳ್ಳಬೇಕು. ಮಕ್ಕಳ ಮೇಲಿನ ಕೋಪ ಒಳ್ಳೆಯದಲ್ಲ. ಇದರಿಂದ ಸಾಂಸಾರಿಕ ನೆಮ್ಮದಿ ಹಾಳಾಗುತ್ತದೆ. ವೈಯಕ್ತಿಕ ಕಾರಣಗಳಿಗಾಗಿ ಪ್ರಯಾಣ. ಶ್ರೀ ಗಾಣಗಾಪುರದ ದತ್ತಾತ್ರೇಯನ ಆರಾಧನೆ ಮಾಡಿರಿ.
ಕುಂಭ: ಇದು ನಿಮಗೆ ಶುಭ ವಾರವಾಗಲಿದೆ. ಅನಿರೀಕ್ಷಿತ ಧನಲಾಭವಾಗುವುದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಅನಿರೀಕ್ಷಿತವಾಗಿ ಪ್ರಯಾಣ ಮಾಡಬೇಕಾದ ಸಂದರ್ಭ ಒದಗಿಬರಬಹುದು. ವ್ಯವಹಾರಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುತ್ತೀರಿ. ಶ್ರೀ ದತ್ತಾತ್ರೇಯನ ಆರಾಧನೆ ಮಾಡಿರಿ.
ಮೀನ: ಸುಖ, ಸಂತೋಷ, ಧೈರ್ಯ, ಕೀರ್ತಿ, ಲಾಭವನ್ನು ತರುವ ಸಮಯ ಇದಾಗಿದೆ. ನೀವು ಮಾಡುವಂತಹ ಕೆಲಸಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಶ್ರೀ ಲಕ್ಷ್ಮೀ ನರಸಿಂಹನ ಆರಾಧನೆಯಿಂದ ಒಳ್ಳೆಯದಾಗುತ್ತದೆ. ನೆಮ್ಮದಿಯ ಜೀವನ ನಿಮ್ಮದಾಗಲಿದೆ. ಪರೋಪಕಾರಿಗಳಾಗಿ ಬದುಕಿ. ರುದ್ರನ ಆರಾಧನೆ ಮಾಡಿರಿ.