ನ್ಯೂಸ್

ನೀವು ಈ ಮಹಾಮಂತ್ರ ಪಠಿಸಿ, ಅದೇ ನಿಮಗೆ ಔಷಧವಾಗುತ್ತದೆ: ವಾರಭವಿಷ್ಯ

ಮೇಷ ರಾಶಿ

ಭಾನು ಭಾಸ್ಕರ ಮಾರ್ತಾಂಡ ಆರೋಗ್ಯಂ ದೆಹಲಿ ಎಂಬ ವಚನದಂತೆ ಭಾನುವಾರದಿಂದ ಶುರುವಾಗುವ ಈ ವಾರವು ಮೇಷ ರಾಶಿಯವರಿಗೆ ಗುರು ರಾಹು ಅಲ್ಲೇ ಕುಳಿತಿರುವುದರಿಂದ ಮನಸ್ಸು, ಆತ್ಮಶುದ್ಧಿಗೆ ಆದಿತ್ಯತ್ಮಕ ರೂಪನಾದ ಸೂರ್ಯನಾರಾಯಣನನ್ನು ಪೂಜಿಸಿ. ಮೇಷ ರಾಶಿಯಲ್ಲಿ ಜನಿಸಿದವರಿಗೆ ಹತ್ತು ಹಲವಾರು ಕಾರ್ಪಣ್ಯಗಳು ರಾಹುವಿನಿಂದ ಬಂದು ಮನಸ್ಸಿಗೆ ಖೇದವಾದರೂ ಹರ್ಷವಾಗಿರಲು ದೈವಬಲ ಬೇಕು. ವ್ಯಾಪಾರ, ವಹಿವಾಟಿಗೆ ಬುದ್ಧಿ ಬಲಬೇಕು. ಜ್ಞಾನ ವಿಜ್ಞಾನಕ್ಕೆ ಗುರುಬಲವು ಬೇಕು. ಇದನ್ನು ಪಡೆಯಲು ಪ್ರಯತ್ನಿಸಿದರೆ ದುಃಖವು ಸುಖಕ್ಕೆ ಪರಿವರ್ತನೆ ಆಗುತ್ತದೆ.

ವೃಷಭ ರಾಶಿ

ವೃಷಭ ವಾಹನ ಎಂದರೆ ಈಶ್ವರನು ಕುಳಿತಿರುವ ವಿಶೇಷ ವಾಹನ. ಗೋವಿಗೆ ಎಷ್ಟು ಬೆಲೆ ಉಂಟು ಅಷ್ಟೇ ಬೆಲೆಯು ವೃಷಭಕ್ಕೂ ಉಂಟು. ಗೋವು ಹಾಲು ಕೊಡುತ್ತದೆ. ಎತ್ತು ದುಡಿಯುತ್ತದೆ. ಬೇರೆ ಯಾವ ಪ್ರಾಣಿಯೂ ಮನುಷ್ಯನಿಗೆ ಇಷ್ಟು ಉಪಕಾರ ಮಾಡುವುದಿಲ್ಲ. ಮೂಕ ಪ್ರಾಣಿಗಳನ್ನು ರಕ್ಷಿಸಿ. ಈಶ್ವರನ ಅನುಗ್ರಹಕ್ಕೆ ಪಾತ್ರರಾಗಿ . ನಿಮಗೆ ಬರಬೇಕಾದ ಭಾಗ್ಯ ಬಂದು ಸೇರಿ, ತೃಪ್ತಿ ಆಗುವಷ್ಟು ಧನವನ್ನು ಆನಂದವನ್ನು ನೀಡುತ್ತಾನೆ. ರುದ್ರ ಪಾರಾಯಣ ಮಾಡಿದಲ್ಲಿ ದ್ವಾದಶ ರಾಹುವಿನ ದೋಷವು ನಿವಾರಣೆಯಾಗಿ ಸುಖಕ್ಕೆ ನಾಂದಿಯಾಗುತ್ತದೆ.

ಮಿಥುನ ರಾಶಿ

ರವಿ, ಬುಧರು ಬುಧನ ಮನೆಯಲ್ಲಿ ಇದ್ದು, ಬುಧದಿತ್ಯ ಯೋಗವನ್ನು ನೀಡುವುದರಲ್ಲಿ ಸಂದೇಹವಿಲ್ಲ. ಆರಿದ್ರ ಪುನರ್ವಸು ಪುಷ್ಯ ನಕ್ಷತ್ರ 1ನೇ ಪಾದದಲ್ಲಿ ಜನಿಸಿದವರು ಏಕಾದಶ ಗುರುವಿನ ಲಾಭ, ನವಮ ಶನಿಯ ವಿಶೇಷ ಫಲವನ್ನು ಪಡೆಯುತ್ತೀರಿ. ಗುರುವಿಗೆ ರಾಹು ಸಂಧಿ ಕಾಲ ಇರುವುದರಿಂದ ರಾಹು ಕೇತುಗಳನ್ನು ಏಕಕಾಲದಲ್ಲಿ ಪೂಜಿಸಿ. ನಾಗಪೂಜೆಯನ್ನು ಮಾಡಿದರೆ ಅಧಿಕ ಫಲ ಸಿಗುತ್ತದೆ.

ಕಟಕ ರಾಶಿ

ಶುಕ್ರನು ಚಂದ್ರನ ಮನೆಯಲ್ಲಿ ಗುರುವಿನ ಉಚ್ಚರಾಶಿಗೆ ಬಂದಿದ್ದಾರೆ. ಕೈ ಕಾಲಿಗೂ ಕೀಲುಗಳಿಗೂ ಅಲ್ಪಸ್ವಲ್ಪ ತಾಪತ್ರಯ ನೀಡಿದರೂ ಉಪಶಮನಕ್ಕೆ ಕಟಕ ರಾಶಿಯ ಅಧಿಪತಿ ಮೃತ್ಯುಂಜಯ ಮಹಾ ಮಂತ್ರವನ್ನು ಪಠಿಸಿ. ಅದೇ ನಿಮಗೆ ಔಷಧವಾಗುತ್ತದೆ. ಇದೇ ಜುಲೈ 15ನೇ ತಾರೀಖಿನಂದು ಶನಿತ್ರಯೋದಶಿಯಂದು ಈಶ್ವರನನ್ನು ವಿಶೇಷವಾಗಿ ಪೂಜಿಸಿ ನಿಮ್ಮ ಬಾಳನ್ನು ಬಂಗಾರವಾಗಿಟ್ಟುಕೊಳ್ಳಿ.

ಸಿಂಹ ರಾಶಿ

ಕುಜನು ಸಿಂಹ ರಾಶಿಯನ್ನು ಸೇರಿರುವುದು ಅಷ್ಟೇನೂ ಒಳ್ಳೆಯ ಸೂಚನೆಯಲ್ಲ. ಸೂರ್ಯನ ಮನೆಯಾಗಿರುವುದರಿಂದ ಸಿಂಹ ರಾಶಿಯವರ ಘರ್ಜನೆಗೆ ದೈವ ಬಲವು ಬೇಕೇಬೇಕು. ಅದಕ್ಕೆ ಮಿಗಿಲಾಗಿ ಮಾತಾಪಿತರ ಪರಿಪೂರ್ಣ ಆಶೀರ್ವಾದ ಇದ್ದಲ್ಲಿ ಯಾರನ್ನು ಏನೂ ಕೇಳಬೇಕಾಗಿಲ್ಲ. ಸಿಂಹ ವಾಹಿನಿ ದುರ್ಗೆ ಎಲ್ಲವನ್ನು ನೀಡುತ್ತಾಳೆ. ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪೂಜಿಸಿ. ಈ ದಿನದಿಂದ ಅಧಿಕ ಮತ್ತು ನಿಜಶ್ರವಣ ಮುಗಿಯುವವರೆಗೂ ಪೂಜಿಸಿ. ನಿಮ್ಮನ್ನು ನೀವೇ ಉಳಿಸಿಕೊಳ್ಳಲಾಗದಷ್ಟು ವಿಶೇಷ ಸ್ಥಾನಮಾನ ಪಡೆಯುತ್ತೀರಾ.

ಕನ್ಯಾ ರಾಶಿ

ಅಷ್ಟಮ ಗುರು ಋಣವನ್ನು ಕೊಟ್ಟು, ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಕೊಟ್ಟ ಕೈಗೆ ಚಿಪ್ಪನ್ನು ಕೊಟ್ಟರೆ ಮುಂದೆ ನಿಮಗೆ ಸಹಿಸಲಾಗದ ದುಃಖವನ್ನು ನೀಡುತ್ತಾನೆ . ಸರ್ವಪಾಪಗಳು ಮನುಷ್ಯನಿಗೆ ಬರುವುದು ಧನದಿಂದಲೇ. ಕೊಟ್ಟ ಧನ, ಅನ್ನದ ಋಣ, ಹಾಲಿನ ಋಣ ತೀರಿಸಲೇಬೇಕು. 6ರ ಶನಿ ನಿಮಗೆ ಬೇಕಾದಷ್ಟು ಕೊಡುತ್ತಾನೆ. ಲಕ್ಷ್ಮಿ ನಾರಾಯಣ ಹೃದಯ ಪಾರಾಯಣ ಮಾಡಿಸಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಸೋಲನ್ನು ಕಂಡರಾಗದು. ಮನುಷ್ಯನು ವಿಷ ಸರ್ಪ ಜಂತುಗಳು, ಆನೆಯ ಉಳಿ, ಸಿಂಹದ ಘರ್ಜನೆಗೆ ಹೆದರುತ್ತಾನೆ. ಭಯವನ್ನು ನಿವಾರಿಸುವ ಏಕೈಕ ಮಹಾಮಾತೆ ಎಂದರೆ ನಿಮಗೆ ವಿದ್ಯಾ, ಧನ ಸ್ವರೂಪಿಣಿ ಭವ ಸಾಗರವನ್ನು ದಾಟಿಸುವ ದುರ್ಗೆಯೆ ನಿಮಗೆ ರಕ್ಷಣೆಯನ್ನು ಕೊಟ್ಟು ಕಾಪಾಡುತ್ತಾಳೆ. 7ರ ಗುರು ಶುಭ ಸಂದೇಶವನ್ನು ತಂದುಕೊಡುವಲ್ಲಿ ಸಫಲನಾಗುತ್ತಾನೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಕೆತುವು ದ್ವಾದಶದಲ್ಲಿ ಇದ್ದು, ಅನಂತ ನಾಮ ಎಂಬ ಹೆಸರಿನಿಂದಲೇ ಶ್ರೀಕೃಷ್ಣನು ಜಗದೊಡೆಯನಾಗಿದ್ದಾನೆ. ಪಾಂಡವರು ಕೃಷ್ಣನ ಮನೆಗೆ ಹೋದಾಗ ರಾಜ್ಯವೇ ಅವರ ಕೈಗೆ ಮತ್ತೆ ಬಂದ ಉದಾಹರಣೆ ಇದೆ. ಕೌಂಡಿನ್ಯ ಮಹರ್ಷಿಗೆ ವಿಶ್ವರೂಪದರ್ಶನ ಕೊಟ್ಟು ಸಿಂಹಾಸನವನ್ನು ಕೊಟ್ಟ ಉದಾಹರಣೆ ಚರಿತ್ರೆಯಲ್ಲಿ ಇದೆ. ಆದ್ದರಿಂದ ಈ ಕೂಡಲೇ ನಿಂತ ಕೆಲಸ ಕಾರ್ಯಗಳು ಕೈಗೂಡುವುದಕ್ಕೆ, ಬರುವ ದುಡ್ಡು ಬರಬೇಕಾದರೆ, ಅನಂತಪದ್ಮನಾಭನ ವ್ಯಾಖ್ಯಾನದ ಕಥೆ ಓದಿರಿ. ದೋಷವನ್ನು ತೊಳೆದು ಕಿಲುಬು ಕಟ್ಟಿದ ತಾಮ್ರವು ಹುಣಸೆಯಿಂದ ಹೊಳೆಯುವಂತೆ ನಿಮ್ಮ ಹೊಳಪಿಗೆ ಅನಂತನೇ ಮೆರುಗು ನೀಡುತ್ತಾನೆ.

ಧನುರ್ ರಾಶಿ

ಪೂರ್ವಾಷಾಢ ಮೂಲ, ಉತ್ತರಶದ 1ನೇ ಪಾದ ನಕ್ಷತ್ರದವರಿಗೆ ಗುರು ಶುಭ ಗ್ರಹ ಆಗಿದ್ದು, ನಗರದಲ್ಲಿ ಸಂಚಾರ ಮಾಡುವಾಗ ಅಡ್ಡಿ ಆತಂಕ ತಂದು ರಾಹು ನಿಮ್ಮನ್ನು ಕಟ್ಟಿ ಹಾಕಿದರೂ ಹನುಮಂತನನ್ನು ನೆನೆದರೆ ಸಾಕು ಆ ಕಟ್ಟನ್ನು ಬಿಚ್ಚಿ ನಿಮಗೆ ಇಷ್ಟವಾದ ಪರ್ವತವನ್ನು ತೋರಿ ರಾಮನ ಕೃಪೆಗೆ ಪಾತ್ರರಾಗುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಹನುಮಾನ್ ಚಾಲೀಸಾ ಪಠಿಸಿ. ಆಲಸ್ಯ ಬಿಟ್ಟು ರಾಮ ಅಷ್ಟೋತ್ತರವನ್ನು ಓದಿರಿ. ಧನುರ್ ರಾಶಿಯಲ್ಲಿ ಹುಟ್ಟಿದ ನಿಮ್ಮ ಜೀವನವು ಸಾಫಲ್ಯವಾಗುತ್ತದೆ.

ಮಕರ ರಾಶಿ

ವಕ್ರನಾಗಿ ಶನಿ ಹಿಂದೆ ಸರಿದಿರುವುದರಿಂದ ಅಲ್ಪಸ್ವಲ್ಪ ಅಡೆತಡೆಗಳು ಬಂದರೂ ಅದನ್ನು ನಿವಾರಿಸಿಕೊಳ್ಳಲು ಸಿದ್ದಿ ಬುದ್ಧಿ ಸಮೇತ ಗಣಪತಿಯನ್ನು ಅರ್ಚಿಸಿ. ಎಕ್ಕದ ಹೂವನ್ನು ಪೂಜಿಸಿ. ಪಂಚಕಜ್ಜಾಯ ಮಾಡಿ ನೈವೇದ್ಯ ಮಾಡಿ. ನಿಮ್ಮ ತೊಡಕನ್ನು ತೊಳೆದು ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.

ಕುಂಭ ರಾಶಿ

ಶನಿಯು ದ್ವಾದಶದಲ್ಲಿ ಇದ್ದರೂ ಮೇಷ ರಾಶಿಯಲ್ಲಿ ಗುರು, ರಾಹು ಇರುವುದು ಅಷ್ಟೇ ಸೂಚ್ಯಕವಾದರೂ, ನಿಮ್ಮಲ್ಲಿರುವ ಪೌರುಷವನ್ನು, ಸಾಧನೆಯನ್ನು ಪ್ರದರ್ಶಿಸುವ ಸಮಯವಿದು. ನಿಮ್ಮ ದುಡ್ಡು ದುಡಿಮೆ ಸಿಗಬೇಕಾದರೆ ಪುಣ್ಯವನ್ನು ವೃದ್ಧಿ ಮಾಡಿ ಕೊಳ್ಳುವುದು ಒಂದೇ ಮಾರ್ಗ. ಈ ಸಂದರ್ಭ ದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಸಾಧ್ಯವಾದಲ್ಲಿ ಕುಲ ದೇವರ ಪ್ರೀತಿಗೆ ಪವಮಾನ ಪಾರಾಯಣ ಮಾಡಿಸಿ. ಒಳ್ಳೆಯ ಫಲ ಪಡೆಯಲು ಸಾಧ್ಯವಾಗುತ್ತದೆ.

ಮೀನ ರಾಶಿ

ಮೀನ ರಾಶಿಗೆ ಬೇಕಾಗಿರುವುದು ಈಗ ಮನೋ ಧೈರ್ಯವೊಂದೇ. ದ್ವಾದಶ ಶನಿ ಕಂಟಕವನ್ನು ನಿವಾರಿಸಿಕೊಳ್ಳಲು ನಿತ್ಯ ಶನಿ ಪ್ರಾರ್ಥನೆ ಹಾಗೂ ಈಶ್ವರನಿಗೆ ಬಿಲ್ವಾರ್ಚನೆ ಮಾಡುವುದು ಅತ್ಯಗತ್ಯ. ದ್ವಿತೀಯದಲ್ಲಿ ಗುರು ರಾಹು ಇದ್ದು, ಯಾವ ಕಷ್ಟದ ಕೋಟೆಗಳು ಬಂದರೂ ಅದನ್ನು ತೊಳೆದು ಹಾಕಲು ಗುರು ಒಬ್ಬನೇ ಸಾಕು. ಗುರು ದತ್ತಾತ್ರೇಯನನ್ನು ಪೂಜಿಸಿ. ಗುರು ಚರಿತ್ರೆ ಪಾರಾಯಣ ಮಾಡಿ. ಗುರುಕ್ಷೇತ್ರವಾದ ಗಾಣಗಾಪುರಕ್ಕೆ ಹೋಗಿ ಅಷ್ಟ ತೀರ್ಥ ಸ್ನಾನ ಮಾಡಿ ಬನ್ನಿ . ಶುದ್ಧ ಮನಸ್ಸು , ಧರ್ಮದಿಂದ ಕೂಡಿದ ಬುದ್ಧಿ, ದಾನದಿಂದ ಕೂಡಿದ ಜೀವನ ನಿಮ್ಮದಾಗುತ್ತದೆ.