ಮೇಷ: ದಶಮ ಶನಿಯು ವಕ್ರತ್ವ ಕಳೆದುಕೊಂಡು ಮುಂದೆ ಸಾಗಲಿದ್ದಾನೆ. ಶನಿಯಿಂದ ಯಾವುದೇ ಅಡಚಣೆ ಇರುವುದಿಲ್ಲ. ಆದರೆ ಏಕಾದಶ ಸ್ಥಾನ ಫಲ ಕೊಡುವುದಿಲ್ಲ. ಒಂಬತ್ತರ ಗುರುವಿನಿಂದ ಈ ವಾರದಲ್ಲಿ ನಿಮ್ಮ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಕಾಲಭೈರವನನ್ನು ಪೂಜಿಸಿ. ವಡೆ, ಮೊಸರನ್ನ ನೈವೇದ್ಯ ಮಾಡಿ. ಇಷ್ಟಾರ್ಥ ಸಿದ್ಧಿಸುವುದು.
ವೃಷಭ: ಎಂಟರ ಗುರುವು ಶುಭ ಸೂಚನೆ ನೀಡದಿದ್ದರೂ, ಒಂಬತ್ತರ ಶನಿಯು ನಿಮ್ಮ ಕಾರ್ಯವನ್ನು ನೆರವೇರಿಸಿ ಚಿಂತೆಯನ್ನು ದೂರಮಾಡುತ್ತಾನೆ. ನಿಮ್ಮ ಪರೀಕ್ಷೆಯ ಕಾಲ ಆರಂಭವಾಗಿದೆ. ವಾರದ ಮಧ್ಯದಲ್ಲಿ ಅಸಾಧ್ಯವಾದ ಕೆಲಸ ಸಾಧಿಸಲು ಸೂಕ್ತ ಸಲಹೆ ಬೇಕು. ಗುರುವಾಯಪ್ಪನನ್ನು ಪೂಜಿಸಿ. ಫಲ ಪಡೆದುಕೊಳ್ಳಿ.
ಮಿಥುನ: ಅಷ್ಟಮ ಶನಿಯು ಸ್ವಕ್ಷೇತ್ರದಲ್ಲಿರುವುದರಿಂದ ನಿಮಗೆ ಒಳ್ಳೆಯದನ್ನು ಮಾಡದಿದ್ದರೂ ಕೇಡನ್ನು ಉಂಟು ಮಾಡುವುದಿಲ್ಲ. ಆದರೆ ಸಪ್ತಮ ಗುರುವು ವಿಶೇಷವಾದ ಫಲವನ್ನು ಕೊಡುತ್ತಾನೆ. ಸಿಂಹ ರಾಶಿಯಲ್ಲಿರುವ ಶುಕ್ರನು ವಿಶೇಷವಾದ ಧನಲಾಭವನ್ನು ನೀಡುತ್ತಾನೆ. ಆನಂದಿಸಿ. ಗುರುಹಿರಿಯರ ಬಗ್ಗೆ ಗೌರವ ಮನೋಭಾವನೆ ಇರಲಿ.
ಕಟಕ: ಚಂದ್ರಾಂಶದಲ್ಲಿ (ನೀರು) ಹುಟ್ಟಿದ ನೀವು ಶೀತಭಾದೆ, ಆಯಾಸಕ್ಕೆ ಒಳಗಾಗಬಹುದು. ಆರೋಗ್ಯದಲ್ಲಿ ಜಾಗರೂಕತೆ ವಹಿಸಿ. ನಿತ್ಯ ಆಂಜನೇಯ ಸ್ತೋತ್ರ ಪಠಿಸಿ. ಆಂಜನೇಯನಿಗೆ ತುಪ್ಪದ ದೀಪ ಹಚ್ಚಿ ಬಾಳೆಹಣ್ಣು ನೈವೇದ್ಯ ಮಾಡಿ. ‘ಹಂ ಹನುಮತೇ ನಮಃ’ ಮಂತ್ರ ಜಪಿಸಿ. ನಿಮ್ಮ ಕಾರ್ಯಗಳನ್ನು ಹನುಮನೇ ಯಶಸ್ಸಿನತ್ತ ಕೊಂಡೊಯ್ಯುತ್ತಾನೆ.
ಸಿಂಹ: ಆರರ ಶನಿಯ ವಕ್ರತ್ವ ಹೋಗಿ ಶುಭಸೂಚಕನಾಗಿದ್ದಾನೆ. ಅರ್ಧಕ್ಕೆ ನಿಂತ ಕೆಲಸಗಳು ಮುಂದೆ ಸಾಗುತ್ತದೆ. ಶುಕ್ರನು ಸಿಂಹರಾಶಿಯಲ್ಲಿ ಇರುವುದರಿಂದ ಅಗತ್ಯವಿರುವಷ್ಟು ಧನವು ಬಂದು ಸೇರುತ್ತದೆ. ಸೂರ್ಯಕವಚ ಸ್ತೋತ್ರ ಪಠಣ ಮಾಡಿ. ಸಿಂಹರಾಶಿಗೆ ದೈವಬಲವಿದ್ದರೆ ತೇಜಸ್ಸನ್ನು ಬೆಳಕನ್ನು ನೀಡುವ ಸೂರ್ಯನೇ ಎಲ್ಲದರಲ್ಲೂ ಯಶಸ್ಸನ್ನು ನೀಡುತ್ತಾನೆ.
ಕನ್ಯಾ: ಪಂಚಮ ಶನಿ ಸ್ಥಾನಪಲ್ಲಟದಿಂದ ಆರೋಗ್ಯವನ್ನು ಹಾಳುಮಾಡುತ್ತಾನೆ. ಆದರೆ ಗುರುಕಟಾಕ್ಷದಿಂದ ಅಲ್ಪಮಟ್ಟಿಗೆ ಕೆಲಸ ಸಾಗುತ್ತದೆ. ಅನಂತಪದ್ಮನಾಭನ ನಾಮೋಚ್ಚಾರಣೆ ಮಾಡಿ. ನಿತ್ಯವೂ ಭಗವದ್ಗೀತೆಯ 11ನೇ ಅಧ್ಯಾಯ ಪಾರಾಯಣ ಮಾಡಿ. ಶುಭಕ್ಕೆ, ಸುಖಕ್ಕೆ ವ್ಯಾಯಾಮ, ಧ್ಯಾನಧಾರಣಗಳು ಅತಿಮುಖ್ಯ ಪರ್ಯಾಯಗಳು.
ತುಲಾ: ನಲುಗದಿರಿ, ನಡುಗದಿರಿ. ತುಲಾ ರಾಶಿಗೆ ಶನಿಯು ವಕ್ರತ್ವ ಕಳೆದುಕೊಂಡು ನಿಮ್ಮ ಜತೆಯಿದ್ದು ಕಾರ್ಯಗಳಲ್ಲಿ ಯಶಸ್ಸು, ಶತ್ರುಸಂಹಾರ ಮಾಡುತ್ತಾನೆ. ಧನಸ್ಸಿನ ಗುರುವು ನಿಮ್ಮನ್ನು ಕೈಹಿಡಿದು ನಡೆಸಿ ನಿಮ್ಮ ಇಚ್ಛೆ ಈಡೇರಿಸುತ್ತಾನೆ. ಹಯಗ್ರೀವ ಅಷ್ಟೋತ್ತರ ಪಠಿಸಿ. ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ. ಕಾರ್ತಿಕೇಯ ಸ್ತೋತ್ರ ಪಠಿಸಿ.
ವೃಶ್ಚಿಕ: ಶನಿಯು ವಕ್ರತ್ವ ಕಳಚಿಕೊಂಡು ಮುಂದೆ ಸಾಗುವುದು ನಿಮಗೆ ಶುಭ ತರುವುದಕ್ಕಾಗಿ. ನಿಂತಲ್ಲೇ ನಿಂತ ಕಾರ್ಯಗಳು ವೇಗವಾಗಿ ಸ್ವರೂಪವನ್ನು ಪಡೆಯುತ್ತದೆ. ಪುರಂದರದಾಸರು ಹೇಳಿರುವಂತೆ- ಅನಾಥೋ ದೈವರಕ್ಷಕಃ. ಸತ್ಯನಾರಾಯಣನನ್ನು ಪ್ರದೋಷ ಕಾಲದಲ್ಲಿ ಪೂಜಿಸಿ. ದಂಪತಿಗೆ ವಸ್ತ್ರದಾನ ಮಾಡಿ ಭೋಜನ ಮಾಡಿಸಿ, ಇಷ್ಟಾರ್ಥ ಪಡೆದುಕೊಳ್ಳಿ.
ಧನುಸ್ಸು: ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ಮಕರದಲ್ಲಿ ಶನಿಯು ಇದ್ದು ನಿಮ್ಮ ಆಕಾಂಕ್ಷೆ, ಮನಃಸಂಕಲ್ಪ ಈಡೇರಿಸುತ್ತಾನೆ. ನಿಮ್ಮ ರಾಶಿಗೆ ಸರಸ್ವತಿಯನ್ನು ಪೂಜಿಸಿ. ನಿಮಗೆ ಗುರಿ, ಚಿತ್ತ, ಬುದ್ಧಿ ಸಾವಧಾನ, ಸಂಯಮ ಇದ್ದಲ್ಲಿ ಶುಭಕಾರ್ಯಗಳು ನೆರವೇರುತ್ತವೆ. ತ್ರಯಂಬಕನನ್ನು ಪೂಜಿಸಿ. ನಿತ್ಯ ಹಾಗೂ ಅಷ್ಟಮಿಯಂದು ವಿಶೇಷವಾಗಿ ಕೃಷ್ಣನನ್ನು ಪೂಜಿಸಿ.
ಮಕರ: ನಿಮ್ಮ ವಕ್ರತ್ವವು ಹೋಗಲೆಂದೇ ಶನಿಯು ವಕ್ರತ್ಯಾಗ ಮಾಡಿದ್ದಾನೆ. ಬುದ್ಧಿ ಸರಿಯಾಗಿದ್ದರೆ ಮನುಷ್ಯನು ಏನನ್ನಾದರೂ ಸಾಧಿಸಬಹುದು. ಆತಂಕಗಳು ಮನುಷ್ಯನಿಗೆ ಕೇಡನ್ನು ಮಾಡುತ್ತವೆ. ಆನಂದವು ಸಿಗುವ ವಸ್ತುವಲ್ಲ. ಅದನ್ನು ಅನುಭವಿಸಬೇಕು. ಗಣಪತಿಯನ್ನು ಪೂಜಿಸಿ ನಿಮ್ಮ ಕಾರ್ಯ, ಆರೋಗ್ಯವನ್ನು ಸರಿಪಡಿಸಿಕೊಳ್ಳಿ.
ಕುಂಭ: ಏಕಾದಶದಲ್ಲಿ ಗುರು ಇರುವುದರಿಂದ ಚುರುಕಾಗಿ. ನಿಮ್ಮ ನೀರಲ್ಲಿ ನೀವು ನಿಧಾನವಾಗಿ ಸಾಗಿದರೆ ಕೆಲವೊಂದು ಕೆಲಸಗಳು ಸ್ವಯಂಕೃತ ಅಪರಾಧ ಹಾಗೂ ವಿಳಂಬದಿಂದ ನಷ್ಟವಾಗಿ ಮನಸ್ಸಿಗೆ ಕಷ್ಟವಾಗಬಹುದು. ಸಾಲಿಗ್ರಾಮದಲ್ಲಿ ನೆಲೆಸಿರುವ ಆಂಜನೇಯನನ್ನು ಪ್ರಾರ್ಥಿಸಿ. ನಿಮ್ಮ ಇಷ್ಟಾರ್ಥವನ್ನು ಪಡೆದುಕೊಳ್ಳಿ. ಆರೋಗ್ಯದ ಕಡೆ ಎಚ್ಚರವಿರಲಿ.
ಮೀನ: ಹತ್ತನೇ ಮನೆಯ ಗುರು ಒಂದು ಹೆಜ್ಜೆ ಮುಂದೆ ಇಡಲಿದ್ದಾನೆ. ಲಾಭ, ಸಂಪತ್ತು, ಯಶಸ್ಸು ಎಲ್ಲವನ್ನೂ ಕೊಡುತ್ತಾನೆ. ನಿರಂತರವಾಗಿ ದೇವರನ್ನು ಪ್ರಾರ್ಥಿಸಿ. ಕಾರ್ಯವನ್ನು ಮಾಡುವವನು ಮನುಷ್ಯ. ಫಲಗಳನ್ನು ಕೊಡುವುದು ದೈವ. ಹನ್ನೊಂದರ ಶನಿ ಎಲ್ಲೆಯನ್ನು ಮೀರಿ ಕೊಡುತ್ತಾನೆ. ನಿಮ್ಮ ಸಂತೋಷವನ್ನು ಅಗತ್ಯವಿದ್ದವರಿಗೆ ಕೊಟ್ಟು ಹಂಚಿ ಆನಂದವಾಗಿರಿ.