ಮೇಷ: ಕಾರ್ತಿಕ ಮಾಸ ಕಡೆಯ ಹಂತದಲ್ಲಿದ್ದು, ಒಂದೇ ಮಾಸದಲ್ಲಿ ಶಿವ, ಮಹಾವಿಷ್ಣುವನ್ನು ಪೂಜಿಸುವುದು ಮನುಷ್ಯನ ಉದ್ದಾರಕ್ಕಾಗಿಯೇ ಪ್ರತಿ ಸಂವತ್ಸರದಲ್ಲೂ ಬರುತ್ತದೆ. ನ. 17ರ ಸೋಮವಾರ ಮುಗಿದರೆ ಕಾರ್ತಿಕ ಮಾಸವು ಅಂತ್ಯವಾಗುತ್ತದೆ. ಗುರು ಎಂದರೆ ದತ್ತಾತ್ರೇಯ. ನಾರಾಯಣ ಎಲ್ಲಾ ಗುರುಸ್ವರೂಪವೂ ಅವನೇ. ನಿಮ್ಮ ಪುಣ್ಯವಿಶೇಷದಿಂದ ನಿಂತ ಕೆಲಸಗಳು ನಡೆಯುತ್ತವೆ. ನಿಮಗೆ ಸುಬ್ರಹ್ಮಣ್ಯ ದೇವರು ಆಧಾರಸ್ತಂಭ ಎಂದು ಮರೆಯಬಾರದು.
ವೃಷಭ: ತೃತೀಯ ಗುರು ವಕ್ರನಾಗಿ ಫಲ ಕೊಡುತ್ತಿದ್ದಾನೆ. ನಿಂತ ಕೆಲಸಗಳು ತನ್ನಿಂದ ತಾನೇ ಆಗುವ ಕಾಲ ಬರಲಿದೆ. ಮನುಷ್ಯನು ಇಟ್ಟ ನಂಬಿಕೆ ಬಿಡಬಾರದು. ಏನೇ ಲಾಭ ಬರಬೇಕಾದಲ್ಲಿ ಎಲ್ಲರನ್ನು ಸಮಾನವಾಗಿ ನೋಡಿ ಹಿಡಿದ ಪಟ್ಟು ಬಿಡಬಾರದು. ದುರ್ಗಾದೇವಿಯ ಸ್ತುತಿ ಮಾಡಿ. ಕೆಲಸವನ್ನು ನಿಮ್ಮ ಇಷ್ಟದಂತೆ ಮಾಡಿಕೊಡುತ್ತಾಳೆ.
ಮಿಥುನ: ಈ ರಾಶಿಗೆ ವಕ್ರಗತಿಯಲ್ಲಿ ಗುರು ಬಂದಿದ್ದಾನೆ. ಈ ಸಮಯದಲ್ಲಿ ಎಲ್ಲವೂ ನಿಮ್ಮಂತೆ ನಡೆಯುವುದಿಲ್ಲ. ಆದರೆ ಪ್ರಯತ್ನ ಬಿಡಬಾರದು. ಅದನ್ನು ಶ್ರದ್ಧೆಯಿಂದ ರ್ತಾಕ ಅಂತ್ಯಕ್ಕೆ ತೆಗದುಕೊಂಡು ಹೋಗಿ ಕೆಲಸವನ್ನು ಸಾಧಿಸಿಕೊಳ್ಳಬೇಕು. ಹಯಗ್ರೀವ ಅಷ್ಟೋತ್ತರ ಪಠಿಸಿ. ಕಡಲೆಬೇಳೆಯಲ್ಲಿ ಹಯಗ್ರೀವ ಸಿಹಿ ಮಾಡಿ ದೇವರಿಗೆ ಸಮರ್ಪಿಸಿ. ಕಾರ್ಯ ಈಡೇರುತ್ತದೆ.
ಕಟಕ: ಈ ರಾಶಿಗೆ ಗುರು ವಕ್ರಿಯಾಗಿ 12ನೇ ಮನೆಯ ಫಲವನ್ನು ಕೊಡುತ್ತಾನೆ. ಡಿಸೆಂಬರ್ 5ರವರೆಗೆ ಗುರುವು ಕಟಕ ರಾಶಿಯಲ್ಲಿ ಇರುತ್ತಾನೆ. ಗುರುವಿನ ಕೃಪಾ ದೃಷ್ಟಿ ಒಂದೇ ಸಾಕು. ಬೇಕಾದ್ದನ್ನು ಪಡೆದುಕೊಂಡು ಸಂತೋಷಪಡಬಹುದು. ಸಿಹಿ. ಸಂತೋಷವನ್ನು ಹಂಚಿಕೊಳ್ಳುವುದೇ ಮಾನವನಿಗೆ ದೇವರು ಕೊಟ್ಟ ವರ. ದುಡ್ಡು ಬಂದು ಸೇರುವ ಕಾಲವಿದು.
ಸಿಂಹ: ಈ ರಾಶಿಗೆ ವಕ್ರಗತಿಯಲ್ಲಿ 11ನೇ ಮನೆ ಗುರು ಸೇರಿ ಯಥೋಚಿತ ವಾಗಿ ಕಾರ್ಯಗಳು ಮುಂದೆ ಸಾಗುತ್ತದೆ. ಗುರುವು ಆಶ್ರಯ ನೀಡಿ ಆಸೆಯನ್ನೂ ಪೂರೈಸುತ್ತಾನೆ. ಈ ಸಂದರ್ಭದಲ್ಲಿ ನಿಮ್ಮ ವಹಿವಾಟನ್ನು ನೀವೇ ನೋಡಿ ಜಾಗರೂಕರಾಗಿರಿ. ಹನುಮದ್ ದೇವರನ್ನು ಪೂಜಿಸಿ.
ಕನ್ಯಾ: ಗುರುವು ವಕ್ರಗತಿಯಲ್ಲಿ ದಶಮಕ್ಕೆ ಬಂದು ಕೆಲಸ ಕಾರ್ಯಗಳು ಏಕಾಏಕಿ ಆಗುವುದು ಕಷ್ಟಸಾಧ್ಯ ಹಾಗೂ ಶನಿಯಿಂದ ಕುಟುಂಬದಲ್ಲೇ ಮನಸ್ಸು ಕೆಡುತ್ತದೆ. ದೇವ ಮಂದಿರದಲ್ಲಿರುವ ದೇವರು ಫಲವನ್ನು ಕೊಡಬೇಕಾದರೆ ಪ್ರಾರ್ಥನೆ ಸರಿಯಾಗಿರಬೇಕು. ಸೂರ್ಯ ಉದಯಿಸುವ ಮುನ್ನ ಎದ್ದು ಶನಿಸ್ತೋತ್ರ ಪಠಿಸಿ. ಶನಿವಾರದಂದು ಕರಿಎಳ್ಳು ಬೆಲ್ಲ ದಾನ ನೀಡಿ, ದೇವರೇ ಕಣ್ಣು ಬಿಟ್ಟು ಹರಸುತ್ತಾನೆ.
ತುಲಾ: ಈ ರಾಶಿಯವರಿಗೆ ಶುಕ್ರನೇ ಲಗ್ನದಲ್ಲಿದ್ದು, ಗುರು ವಕ್ರನಾಗಿ 9ನೇ ಮನೆಯಲ್ಲಿ ಫಲ ಕೊಡುವಲ್ಲಿ ಸಂದೇಹವಿಲ್ಲ. ಮಾಡಿದ ಪುಣ್ಯ ಕಾರ್ಯ ವೃದ್ಧಿ-ಸಮೃದ್ಧಿಯನ್ನು ತಂದು ಚಾಣಾಕ್ಷತೆಯಿಂದ ಕೆಲಸ ಮಾಡಿ ಖ್ಯಾತಿಯನ್ನು ಹೊಂದುವಿರಿ. ದೈವಕೃಪೆ ಇದ್ದರೆ ಗ್ರಹಗಳ ಸ್ಥಾನ-ಮಾನ ಮುಖ್ಯವಾಗುವುದಿಲ್ಲ. ತುಲಾ-ವೃಷಭ ರಾಶಿಯವರು ಶುಕ್ರ ಸ್ವರೂಪದಲ್ಲಿ ಇರುವ ದುರ್ಗೆಯನ್ನು ಪೂಜಿಸಿದರೆ ದಾರಿದ್ರ್ಯ-ದುಃಖ ದೂರವಾಗುತ್ತದೆ.
ವೃಶ್ಚಿಕ: ಈ ರಾಶಿಗೆ ವಕ್ರಗತಿಯಲ್ಲಿ ಗುರು 8ನೇ ಮನೆಗೆ ಬಂದು, ವಕ್ರಗತಿಯ ಶನಿಯು ಚತುರ್ಥದಲ್ಲಿದ್ದು, ಭಾದೆಗಳನ್ನು ತಡೆದುಕೊಳ್ಳಲು ದೃಢವಾದ ಭಕ್ತಿ ಇರಬೇಕು. ಗುರುವಿನ ಮೇಲೆ ವಿಶ್ವಾಸವಿಟ್ಟು, ಗುರು ಅಷ್ಟೋತ್ತರ ಪಠಿಸಿ. ನಿಮ್ಮ ಕೆಲಸವು ದೈವಮಾಯೆಯಿಂದ ಸಾಗುತ್ತದೆ. ಋಣವನ್ನು ತೀರಿಸಲು ಸಕಾಲ. ಆರ್ಥಿಕ ಸುಖವನ್ನು ಹೊಂದುತ್ತೀರಿ. ಮುಂದಿನ ದಿನಗಳಲ್ಲಿ ಪಳನಿ ಸುಬ್ರಹ್ಮಣ್ಯನ ಅನುಗ್ರಹ ಹೊಂದಿದರೆ ಕಾರ್ಯಗಳು ಆಗುವುದರಲ್ಲಿ ಸಂದೇಹವಿಲ್ಲ.
ಧನಸ್ಸು: ಶನಿಯು ವಕ್ರನಾಗಿ ತೃತೀಯ ಸ್ಥಾನದಲ್ಲಿದ್ದು, ವಕ್ರಾಂಶದ ಯಾವುದೇ ವಿಚಾರ ನಿಮ್ಮನ್ನು ಮುಟ್ಟುವುದಿಲ್ಲ. ನಿಮ್ಮ ಸ್ಥಾನದ ಗೌರವ ಕಾಪಾಡಿಕೊಳ್ಳಲು ಗಣಪತಿಗೆ ನಿತ್ಯ ಗರಿಕೆ ಇರಿಸಿ ಪೂಜಿಸಿ. ಚಿಂತಾಮಣಿ ಗಣಪತಿಯು ಚಿಂತೆಯನ್ನು ದೂರ ಮಾಡಿ ಚಿಂತಿತ ಫಲವನ್ನು ಕೊಡುತ್ತಾನೆ.
ಮಕರ: ‘ಸಪ್ತಮೇ ಗುರು ಸುಖಃ’ ಸುಖ, ಶಾಂತಿ ಧೈರ್ಯ ಯಾವುದಕ್ಕೂ ಅಡ್ಡಿ ಇರುವುದಿಲ್ಲ. ದ್ವಿತೀಯದಲ್ಲಿ ರಾಹುವಿರುವುದರಿಂದ ಕುಟುಂಬದಲ್ಲಿ ಏನೇ ನಕಾರಾತ್ಮಕ ಚಿಂತನೆ ಬಂದರೂ ಕೂಡ ಅದನ್ನು ಪರಿಗಣಿಸದೆ ನಿಮ್ಮ ಕಾರ್ಯದಲ್ಲಿ ಮುಂದೆ ಸಾಗಿರಿ. ಈ ಸಮಯದಲ್ಲಿ ನಿಮಗೆ ಒಳ್ಳೆಯ ಫಲವೇ ಸಿಗುತ್ತದೆ. ನರಸಿಂಹ ಅಷ್ಟೋತ್ತರ ಪರಾವಲಂಬನ ಸ್ತೋತ್ರ ಪಠಿಸಿ. ದೈವದ ಸಹಾಯ ದೊರಕುತ್ತದೆ.
ಕುಂಭ: ವಕ್ರೀ ಗುರು ಪಂಚಮಕ್ಕೆ ಬಂದು ಸೇರುತ್ತಾನೆ. ಧೈರ್ಯಂ ಸವ್ರರ್ತ ಸಾಧನಂ. ಧೈರ್ಯದಿಂದ ಮುನ್ನುಗ್ಗಿ ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಕೆಲಸವನ್ನು ಮುಂದುವರಿಸಿ. ನಾಗರಾಜ ಅಷ್ಟೋತ್ತರ ಪಠಿಸಿ. ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಿ ಪ್ರತಿದಿನ 9 ಪ್ರದಕ್ಷಿಣೆ ಹಾಕಿ ಬನ್ನಿ. ನಿಮ್ಮ ಬೇಡಿಕೆಗಳು ನೆರವೇರಿ ಮನಃ ಸಂತೋಷಗೊಳಿಸುತ್ತದೆ.
ಮೀನ: ಗ್ರಹಗಳು ವಕ್ರರಾಗಿ ಇರುವಾಗ ನಕಾರಾತ್ಮಕ ಚಿಂತನೆ ಮಾಡ ಬಾರದು. ಯಾರನ್ನೂ ದೂಷಿಸಬಾರದು. ‘ಕಾಲಾಯ ತಸ್ಮೈ ನಮಃ’ ಎಂಬಂತೆ ಒಳ್ಳೆಯ ಕಾಲ ಬಂದೇ ಬರುತ್ತದೆ. ರಾಮಾಯಣದಲ್ಲಿ ಹೇಳಿರುವಂತೆ ಮನುಷ್ಯನು ನೂರುವರ್ಷ ಬದುಕಿದರೂ ಅವನಿಗಾಗಿ ಒಂದು ಒಳ್ಳೆಯ ದಿನ ಬಂದೇ ಬರುತ್ತದೆ. ನಿಮ್ಮ ಸುಖ ಸಂತೋಷ ಶನಿ ಸಂಚಾರವು ಮುಗಿದ ನಂತರ ಇಷ್ಟಾರ್ಥ ನೆರವೇರುತ್ತದೆ.