ಮೇಷ: ಇಡೀ ವಿಶ್ವಕ್ಕೆ ಮರೆಯಲಾರದ ವಿಶೇಷವಾದ ಸಂದರ್ಭ. ಈ ಲೋಕದಲ್ಲಿ ಪುಣ್ಯದ ಕೆಲಸ ಮಾಡಿದರೆ ಉತ್ತಮ ಭವಿಷ್ಯವನ್ನು ಕಾಣುವಿರಿ. ಮಧ್ಯರಾತ್ರಿ ಗ್ರಹಣ ಆರಂಭವಾಗಿ ತಡರಾತ್ರಿ 1.26ಕ್ಕೆ ಮುಕ್ತಾಯವಾಗುತ್ತದೆ. ಇದು ಮೇಷ ರಾಶಿಗೆ ಶುಭದಾಯಕ. ಸುಖ ಸಂತೋಷ ನಿಮ್ಮ ಮನೆಯಲ್ಲಿ ಮತ್ತೆ ಬಂದು ಸೇರುತ್ತದೆ.
ವೃಷಭ: ಈ ರಾಶಿಗೆ ಚಂದ್ರ ಗ್ರಹಣ ವಿಶೇಷ ಫಲ ನೀಡುತ್ತದೆ. ಚಂದ್ರನೆಂದರೆ ಪಾರ್ವತಿಯ ಸ್ವರೂಪ ಎಂದು ಅರ್ಥೈಸಿಕೊಂಡು ಇಷ್ಟಾರ್ಥ ಸಿದ್ಧಿ ಮಾಡಿಕೊಳ್ಳಿ. ಗ್ರಹಣ ಕಾಲದಲ್ಲಿ ದೇವಿ ಸ್ತುತಿ ಮಾಡಿ ಜೀವನದ ಅಭಿಲಾಷೆ ಪೂರೈಸಿಕೊಳ್ಳಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳಿ.
ಮಿಥುನ: ಮಿಥುನ ರಾಶಿಯವರಿಗೆ ಗ್ರಹಣದಿಂದ ತೊಂದರೆಗೆ ಒಳಗಾಗದ ವಿಶೇಷ ಫಲ ಇದೆ. ಜನ್ಮದಲ್ಲೇ ಗುರು ಇದ್ದು ಊರುಗೋಲಿನಂತೆ ನಿಮ್ಮನ್ನು ನಡೆಸುತ್ತಾನೆ. ಪಾಪ ಮಾಡಬಾರದು. ಪುಣ್ಯ ಮಾಡುವ ಅಭಿಲಾಷೆ ಇರಬೇಕು. ಅನಂತ ಪದ್ಮನಾಭ ವ್ರತ ಕಥೆ ಓದಿದರೆ ಜೀವನದ ಸೊಬಗನ್ನು ಕಾಣುವಿರಿ.
ಕಟಕ: ನೀವು ಜಲ ರಾಶಿಯಲ್ಲಿ ಜನಿಸಿದವರು. ಜಲಾಧಿಪತಿ ಚಂದ್ರನಿಗೆ ಗ್ರಹಣ ಆಗುತ್ತಿದ್ದು, ಗ್ರಹಣ ಕಾಲದ ನಕಾರಾತ್ಮಕ ಶಕ್ತಿ ನಿಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಶಿವನ ಶಿರಸ್ಸಿನಲ್ಲಿರುವ ಚಂದ್ರನೇ ಕಾಪಾಡುವುದರಲ್ಲಿ ಸಂಶಯ ಇಲ್ಲ. ಪಾರ್ವತಿ ಸಹಿತ ಸಾಂಬಸದಾಶಿವನ ಪ್ರದೋಷ ವ್ರತ ಕಥೆ ಓದಿ. ಜೀವನವನ್ನು ಸರಿ ಮಾಡಿಕೊಳ್ಳಿ.
ಸಿಂಹ: ಕೇತು ಜನ್ಮದಲ್ಲಿ ಕೂತಿರುವುದರಿಂದಲೂ, ರಾಹುಗ್ರಸ್ತ ಚಂದ್ರ ಗ್ರಹಣ ಆಗಿದ್ದು ರಾಹು ಕೇತು ಸಂಪರ್ಕದಲ್ಲಿ ನಡೆಯುವ ಗ್ರಹಣಗಳಿಂದ ಬಾಧೆ ಉಂಟಾಗದಿರಲು ಲಗ್ನದಲ್ಲಿ ಕೇತುವಿಗೆ ಗಣಪತಿಯನ್ನು ಆರಾಧಿಸಿ. ವಾಕ್ ಸಿದ್ಧಿ, ಯುದ್ಧದಲ್ಲಿ ಗೆಲುವನ್ನು ವನಸಾಮ್ರಾಜ್ಯದ ಸಿಂಹಕ್ಕೆ ಯಾರಾದರೂ ಹೆದರದೇ ಇರಲು ಆಗುವುದೇ? ಯಾರೂ ತೊಂದರೆ ಕೊಡಲು ಸಾಧ್ಯವಿಲ್ಲ. ಸೂರ್ಯನ ಪ್ರಾರ್ಥನೆ ಲಲಿತಾ ಪರಮೇಶ್ವರಿಯ ಕೃಪೆ ದೊರಕಿಸಿಕೊಂಡು ನಿಮ್ಮ ಹೆಜ್ಜೆಯನ್ನು ಮುಂದಿಡಿ.
ಕನ್ಯಾ: ಗ್ರಹಣ ಕಾಲದಲ್ಲಿ ಶುಭ ಫಲ ಕಾಣುತ್ತೀರಿ. ಅಷ್ಟಮ ಗುರು ಸಪ್ತಮ ಶನಿ ಕಾರ್ಯ ಸ್ಥಗಿತ ಮಾಡದೆ ಪೂರ್ವ ಪುಣ್ಯದ ನಿಮ್ಮ ಉತ್ತರೋತ್ತರ ಅಭಿವೃದ್ಧಿಗೆ ಉತ್ತರದ ಬಾಗಿಲು ತೆರೆದು ಲಾಭದಲ್ಲಿ ನಿಮ್ಮನ್ನು ಇಟ್ಟಿರುತ್ತಾನೆ. ಅದನ್ನು ದೈವ ಪ್ರಾರ್ಥನೆಯಿಂದ ಪಡೆಯಿರಿ. ನಾಗರಾಜ ಅಷ್ಟೋತ್ತರ ಪಠಿಸಿ.
ತುಲಾ: ಈ ರಾಶಿಯವರಿಗೆ ವಿಶೇಷವಾದ ಸಂದರ್ಭ ಪ್ರಸ್ತುತ ಜೀವನದಲ್ಲಿ ಬಂದು ಗ್ರಹಣ ಕಾಲದಲ್ಲಿ ನಿರೀಕ್ಷೆಗೂ ಮೀರಿದ ಶುಭ ಫಲ ಪಡೆಯುತ್ತೀರಿ. ದುರ್ಗಾ ಸ್ಥಿತಂ ತುಲಾ ವೃಷಭ ರಾಶಿಂ. ಆಕಾಶವನ್ನೇ ಮುಟ್ಟಬಹುದು. ನೀರಿನ ಮೇಲೆ ನಡೆಯಲೂಬಹುದು. ವಿಶೇಷ ಸಮಯ. ಸೊಗಸಾದ ಜೀವನ ನಡೆಸಿರಿ.
ವೃಶ್ಚಿಕ: ಈ ರಾಶಿಯವರಿಗೆ ಈ ಗ್ರಹಣ ಯಾವ ಕೇಡನ್ನೂ ಮಾಡದಿದ್ದರೂ ಕೆಲಸ ಮುಂದೆ ಹೋಗುತ್ತದೆ. ಗಿಡ ಮರ ನಿಂತಲ್ಲೇ ನಿಂತರೂ ತಮ್ಮ ಗುಣ ತೋರಿಸುತ್ತವೆ. ಬಿಸಿಲ ವೈಪರೀತ್ಯದಿಂದ ಮನುಷ್ಯ ಕುಸಿಯುತ್ತಾನೆ. ಅಂದರೆ ನೀವು ದೈವ ಬಲ ಹೊಂದಿದ್ದರೆ ಮಹಾವಿಷ್ಣುವಿನ ಅವತಾರವಾದ ವೆಂಕಟೇಶ್ವರನೇ ನಿಮಗೆ ಕೀರ್ತಿ ಲಾಭ ತರುತ್ತಾನೆ.
ಧನುಸ್ಸು: ರಾಶ್ಯಾಧಿಪತಿ ಸಪ್ತಮದಲ್ಲಿ ಇದ್ದು ಗ್ರಹಣ ಕಾಲದ ವಿಶೇಷ ಫಲ ಪಡೆಯುವುದರಲ್ಲಿ ಸಂದೇಹ ಬೇಡ. ನಾವು ಮಾಡಿದ ಪುಣ್ಯ ನಮ್ಮನ್ನು ಕಾಪಾಡುತ್ತದೆ. ನಾವು ಮಾಡಿದ ಪಾಪ ಕುಟುಂಬವನ್ನು ಬಾಧಿಸುತ್ತದೆ. ಮಾಡಿದ ಪಾಪ ಪರಿಹಾರ ಮಾಡಿಕೊಳ್ಳಲೇಬೇಕು. ಶುಭ ಫಲ ನಿರೀಕ್ಷಿಸಿ. ಕೀರ್ತಿ ಶಾಲಿಗಳಾಗಿ ನಿಲ್ಲಬಹುದು. ಸುಖವಿದೆ. ಒಳ್ಳೆಯ ಆಯುಷ್ಯ ಇದೆ.
ಮಕರ: ಈ ರಾಶಿಯಲ್ಲಿ ವಕ್ರ ಗತಿಯಲ್ಲಿ ಎರಡರಲ್ಲಿ ಶನಿ ಇದ್ದಾನೆ. ಮನುಷ್ಯನಿಗೆ ಬಾಧೆ ಉಂಟಾದರೂ ತಡೆದುಕೊಳ್ಳಬೇಕು ಎನ್ನುವ ಸಮಯ. ನೀವು ರಾಮ ನಾಮ ಸ್ತುತಿ ಕೇಳಿ ಸಾಕ್ಷಾತ್ ರಾಮಚಂದ್ರನನ್ನು ಬೇಡಿದರೆ ನಿಮಗೆ ಎಲ್ಲವನ್ನೂ ಕೊಡುವುದರಲ್ಲಿ ಸಂದೇಹ ಬೇಡ.
ಕುಂಭ: ಈ ರಾಶಿಯಲ್ಲಿ ಚಂದ್ರ ಗ್ರಹಣ ಆಗುವುದರಿಂದ ಲಗ್ನದಲ್ಲಿ ಶನಿ ರಾಹು ಸ್ಥಿತನಾಗಿದ್ದು ಈ ಕಾಲಘಟ್ಟದಲ್ಲಿ ನೀವು ಶುದ್ಧತೆಯಿಂದ ನಡೆದರೆ, ಎಳನೀರು ಕುಡಿದರೆ, ದೇಹ ರಕ್ಷಣೆ. ಮುಖ ತೊಳೆದರೆ ಕಾಂತಿಯ ರಕ್ಷಣೆ. ಆದ್ದರಿಂದ ನಿಮ್ಮ ಬಾಳು ಬಂಗಾರವಾಗುವ ಸಮಯ. ಸತ್ಪುರುಷರ ಸಂಗದಿಂದ ಭಾಗ್ಯ ಬಂದು ಸೇರುತ್ತದೆ. ಗುರು ಪಂಚಮದಲ್ಲಿದ್ದು ನಿಮ್ಮ ಮನೋಭಿಲಾಷೆ ಈಡೇರುತ್ತದೆ.
ಮೀನ: ಈ ರಾಶಿಯವರಿಗೆ ಚಂದ್ರ ಗ್ರಹಣದ ಛಾಯೆಯೂ ಬೀರುವುದರಿಂದ ಈ ಸಂಬಂಧ ಎಲ್ಲ ಬೇಕಾದ ಫಲ ಪಡೆಯಬೇಕಾದರೆ ಬೆಲ್ಲದ ತಂಬಿಟ್ಟು ಎಳ್ಳಿನ ಉಂಡೆ ದೇವರಿಗೆ ನೈವೇದ್ಯ ಮಾಡಿ. ಗ್ರಹಗಳ ಕೃಪೆಗೆ ಪಾತ್ರರಾಗಿ. ಗುರು ದತ್ತಾತ್ರೇಯನ ಪ್ರಾರ್ಥನೆ ಸದಾ ಇರಲಿ.