ನ್ಯೂಸ್

ವಾರ ಭವಿಷ್ಯ: ಈ ರಾಶಿಯವರು ಎಲ್ಲದರಲ್ಲೂ ಯಶಸ್ಸನ್ನು ಕಾಣಬಹುದು

ಮೇಷ: ಆ.17ರಿಂದ ರಾಶ್ಯಾಧಿಪತಿ ಕುಜನು ಸಿಂಹ ರಾಶಿಗೆ ಬಂದು ಸೇರುತ್ತಾನೆ. ಪರಮಾತ್ಮನು ದುಷ್ಟರನ್ನು ಬಿಡನು. ಮೇಷ ರಾಶಿಗೆ ಪಂಚಮದಲ್ಲಿ ಸೂರ್ಯನಿದ್ದು, ಸೂರ್ಯ ಅಷ್ಟೋತ್ತರ, ಸೂರ್ಯನ ಪ್ರಾರ್ಥನೆ, ಸೂರ್ಯ ಅಷ್ಟಕ ಪಠಿಸಿದರೆ ಇಚ್ಛಿತ ಫಲ ಪಡೆಯಬಹುದು.

ವೃಷಭ: ರಾಶ್ಯಾಧಿಪತಿ ಶುಕ್ರನು ಆಗಸ್ಟ್ 27ರವರೆಗೂ ಬುದ ಸಂಯೋಗದಲ್ಲಿ ಇದ್ದು ಸ್ವಾರ್ಥವಿಲ್ಲದೆ ಮಾಡಿದ ಕಾರ್ಯಕ್ಕೆ ಜಯವನ್ನು ತಂದು ಕೊಡುತ್ತಾನೆ. ಮಡದಿ ಮಕ್ಕಳನ್ನು ಸಲಹುವುದು ಆದ್ಯ ಕರ್ತವ್ಯ. ಮಡದಿಯೆಂದರೆ ಮನೆಯನ್ನೇ ಕಾಪಾಡುವ ಮಹಾದೇವತೆ. ನೀವು ಹುಟ್ಟಿರು ವುದು ಶುಕ್ರನ ಮನೆಯಲ್ಲಿ. ಶುಕ್ರ ಎಂದರೆ ಸಂಸಾರ, ಸಂಸಾರವನ್ನು ಜೋಪಾನವಾಗಿ ಕಾಪಾಡಿ ಕೊಂಡರೆ ಸಾಗರವನ್ನೇ ದಾಟಬಹುದು. ಎಲ್ಲದರಲ್ಲೂ ಯಶಸ್ಸನ್ನು ಕಾಣಬಹುದು.

ಮಿಥುನ: ಲಗ್ನದಲ್ಲಿ ಗುರುವಿರುವುದು ಭಗವಂತ ಆತ್ಮದಲ್ಲೇ ಸ್ಥಿತನಾದಂತೆ. ಮಿಥುನ ರಾಶಿಯಲ್ಲಿ ಗುರುವಿರುವ ಕಾಲ ಈ ರಾಶಿಯವರ ಪುಣ್ಯ. ಬುಧನ ಮನೆಯಲ್ಲಿದ್ದು, ಅಲ್ಪ ಭಕ್ತಿಯಿದ್ದರೂ ಅನೇಕ ಹಸ್ತದಿಂದ ಬೇಡಿದ ವರ ಕೊಡುತ್ತಾನೆ. ನಾವು ದೇವರಿಗೆ ಕೊಡುವುದು ಸ್ವಲ್ಪವೇ. ಭಗವಂತನು ಅಲ್ಪನಲ್ಲ, ಕಲ್ಪವೃಕ್ಷ. ಆನಂದ ಕಂದನಾಗಿ ಕಂಸಾಸುರನ ವಧೆ ಮಾಡಿದ ಕೃಷ್ಣನನ್ನು ಸ್ವಚ್ಛವಾದ ಮನಸ್ಸಿನಿಂದ ಪ್ರಾರ್ಥಿಸಿದರೆ ಕೆಲಸ ಕಾರ್ಯಗಳು ಕೈಗೂಡುತ್ತವೆ.

ಕಟಕ: 12 ರ ಗುರುವಿಗೆ ಪ್ರಾರ್ಥನೆೆ ಇರಲೇಬೇಕು. ಶನಿ 9 ನೇ ಮನೆಯಲ್ಲಿದ್ದು, ವಕ್ರಗತಿಯಲ್ಲಿ ಇರುವುದ ರಿಂದ ಅಷ್ಟಮಕ್ಕೆ ಬಂದರೂ ಹೆಚ್ಚು ಬಾಧೆ ಕೊಡನು. ಕಾಲಿಗೆ ಸಣ್ಣ ಮುಳ್ಳು ಚುಚ್ಚಿದರೂ ನೋವೇ. ಆ ನೋವು ಆಗಬಾರದೆಂದರೆ ತ್ರಿಮೂರ್ತಿ ಅವತಾರ ಅನಸೂಯ ಸುತನಾದ ದತ್ತಾತ್ರೇಯನನ್ನು ಪ್ರಾರ್ಥಿಸಿ. ಯಾವ ಕಷ್ಟವೂ ಯಾವ ವ್ಯಾಧಿಯೂ ಬರದಂತೆ ಕಾಪಾಡುತ್ತಾನೆ.

ಸಿಂಹ: ಆಗಸ್ಟ್ 17 ರಿಂದ ರಾಶ್ಯಾಧಿಪತಿ ಸೂರ್ಯ ಸ್ವಗೃಹದಲ್ಲಿ ಇದ್ದು, 20ನೇ ತಾರೀಖಿನಿಂದ ಶುಕ್ರನು ಕಟಕ ರಾಶಿಯನ್ನು ಬಂದು ಸೇರುತ್ತಾನೆ. ದುಡ್ಡು ಎಲ್ಲೇ ಇರಲಿ ಎಣಿಸಿ ಇಟ್ಟುಕೊಳ್ಳಬೇಕು. ಹತೋಟಿಯಲ್ಲಿ ಖರ್ಚು ಮಾಡಬೇಕು. ಕೇತುವೂ ರಾಶಿಯಲ್ಲೇ ಇರುವುದರಿಂದ ಸೂರ್ಯನಿಗೆ ಗ್ರಹಣವಾದಂತೆ. ಅದಕ್ಕಾಗಿ ಗಣಪತಿಯನ್ನು ಪ್ರತ್ಯಕ್ಷ ದೇವರಾದ ಕಣ್ಣಿಗೆ ಕಾಣುವ ಸೂರ್ಯನನ್ನು ನಿರಂತರವಾಗಿ ಕೆಂಪು ಪುಷ್ಪಗಳಿಂದ ಪೂಜಿಸಿ.

ಕನ್ಯಾ: ಕನ್ಯಾ ರಾಶಿಯಲ್ಲಿ ಅಂಗಾರಕನು ಕೂತಿರುವುದರಿಂದ ಆಸೆಗಳನ್ನು ಪೂರೈಸಿಕೊಳ್ಳಲು ಪಾರ್ವತಿ ನಂದನ ಷಣ್ಮುಖನನ್ನು ಸಧೃಡವಾದ ಭಕ್ತಿಯಿಂದ ಪೂಜಿಸಿ. ತಪ್ಪಿ ನಡೆದರೆ ಪರಮಾತ್ಮನೇ ಶಿಕ್ಷಿಸುತ್ತಾನೆ. ಸರ್ವದೇವರಲ್ಲಿ ಶ್ರೇಷ್ಠನಾದ ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ಏನನ್ನೂ ಪಡೆಯಬಹುದು. ಆತ್ಮರಕ್ಷಣೆಗಾಗಿ ಸೂರ್ಯನನ್ನು ಪ್ರಾರ್ಥಿಸಿ.

ತುಲಾ: 10ರಲ್ಲಿ ಬುಧ ಶುಕ್ರರಿದ್ದು, ಅಡೆತಡೆಗಳು ಉಂಟಾಗಬಹುದು. ನಿಮ್ಮಲ್ಲಿ ಧೃಡವಾದ ಗುರುಭಕ್ತಿ, ವಿಶ್ವಾಸವಿದ್ದರೆ ಬಂದ ಜಾಗವನ್ನು ತಲುಪ ಬಹುದು. ಶನಿ-ಗುರುಗಳಿಂದ ರಾಜಯೋಗ ನಡೆಯುತ್ತಿದೆ ಅನುಭವಿಸಿ ಸುಖಪಡಿ. ಸಂತೋಷ ಹಂಚಿಕೊಳ್ಳಿರಿ. ತಪು್ಪ ಮಾಡಿದರೆ ನಾವು ಮೊದಲು ತಿದ್ದಿಕೊಳ್ಳಬೇಕು. ತಿದ್ದಿದ ಬುದ್ದಿ ಅಪ್ಪ-ಅಮ್ಮ ಕಲಿಸಿದ ಅಕ್ಷರವನ್ನು ಮರೆಯುವುದಿಲ್ಲ. ಮಹಾಲಕ್ಷ್ಮಿಯನ್ನು ಪೂಜಿಸಿ. ದುರ್ಗೆಯ ಪ್ರಾರ್ಥನೆ ನಿರಂತರವಾಗಿರಲಿ.

ವೃಶ್ಚಿಕ: ಅನಂತ ಕೋಟಿ ಪುಣ್ಯ ಮಾಡಿದರೆ ಸತ್ಪುರುಷರ ದರ್ಶನ, ಮನೆಗೆ ಸತ್ಪುರುಷರ ಪಾದಸ್ಪರ್ಶ ಆಗುತ್ತದೆ. ಈ ಸಮಯದಲ್ಲಿ ನಿಮ್ಮ ಜೊತೆ ಯಾರು ಇದ್ದಾರೆ, ಯಾರು ಇಲ್ಲ ಎಂದು ಹುಡುಕಿ ನೋಡಿ. ಈಗ ನಿಮ್ಮ ಜತೆಯಿರುವವರನ್ನು ಸರಿಯಾಗಿ ಉಪಯೋಗಿಸಿ ಮುನ್ನಡೆಯಿರಿ.

ಧನುಸ್ಸು: ಬಿಲ್ಲಿಗೆ ಬಾಣವೇ ಆಧಾರ. ಬಿಲ್ಲಿನಿಂದ ಬಾಣವನ್ನು ಬಿಡಲು ಎಳೆದು ಕಟ್ಟಿದ ಸೂತ್ರವೇ ಮೂಲಾಧಾರ. ಧನುರ್ ರಾಶಿಯವರಿಗೆ ಆಧಾರ ಜನ್ಮಕೊಟ್ಟ ಮಾತಾ-ಪಿತೃಗಳು. ಶುದ್ಧ ಮನಸ್ಸಿನಿಂದ ಅವರ ಸೇವೆ ಮಾಡಿದರೆ ರಾಮನಂತೆ ಪಿತೃವಾಕ್ಯವನ್ನು ಪರಿಪಾಲನೆ ಮಾಡಿದಲ್ಲಿ 11 ಸಾವಿರ ವರ್ಷ ರಾಜ್ಯವಾಳಬಹುದು. ರಾಮನಾಮ ಜಪಿಸಿರಿ.

ಮಕರ: ರಾಮನೇ ನಿಮ್ಮಆಕಾಂಕ್ಷೆ ಈಡೇರಿಸುತ್ತಾನೆ. ಸುಖದ ದಿನಗಳು ಮುಂದೆ ಅತಿಶೀಘ್ರದಲ್ಲಿ ಬರಲಿವೆ. ತಾತ್ಕಾಲಿಕವಾಗಿ ಶನಿಯು ವಕ್ರಗತಿಯಲ್ಲಿ ದ್ವಿತೀಯದಲ್ಲಿ ಇರುವುದು ಸಂಸಾರದಲ್ಲಿ ಕೆಲವೊಂದು ತಾಪತ್ರಯ ಬರಬಹುದು. ಕೃಷ್ಣನಿಗೆ ಅರ್ಪಿಸಿದ ಒಂದು ತುಳಸಿಯೇ ಕೃಷ್ಣನ ತುಲಾಭಾರಕ್ಕೆ ಸಾಕಾಯಿತು. ಭಕ್ತಿಯೇ ಮುಖ್ಯವಾದದ್ದು. ಶಿವನಿಗೆ ಬಿಲ್ವಾರ್ಚನೆ ಮಾಡಿರಿ. ಶನಿಶ್ಚರನನ್ನು ಪೂಜಿಸಿದರೆ ನಿಮ್ಮ ಕಾರ್ಯಗಳು ಸಿದ್ಧಿಯಾಗುವುದು.

ಕುಂಭ:  ಲಗ್ನದಲ್ಲಿ ವಕ್ರ ಶನಿಯಿದ್ದಾಗ ಯಾವುದೇ ಕೆಲಸ ಕಾರ್ಯ ವಿಳಂಬವಾಗುತ್ತದೆ. ಸ್ತ್ರೀ ಮೂಲ, ಋಷಿ, ದೈವಮೂಲ, ಜಲಮೂಲ ಹುಡುಕಿದವನು ಮಹಾಪಾಪಿ ಎಂದು ವೇದಾಂತವೇ ಹೇಳುತ್ತದೆ. ಇನ್ನು ಒಂದು ಶ್ರಾವಣ ಸೋಮವಾರ ವಿಶೇಷ ಭಕ್ತಿಯಿಂದ ಈಶ್ವರನನ್ನು ಪೂಜಿಸಿದರೆ ವರವನ್ನೂ ಕೊಟ್ಟು ಆಯುಷ್ಯವನ್ನೂ ಕೊಟ್ಟು ನಕಾರಾತ್ಮಕ ಚಿಂತೆಯನ್ನು ದೂರವಾಡುತ್ತಾನೆ.

ಮೀನ: ಶನಿಯು ದ್ವಾದಶದಲ್ಲಿದ್ದು, ಗುರುವು ಚತುರ್ಥದಲ್ಲಿದ್ದಾನೆ. ಶನಿ-ರಾಹು ಸಂಯೋಗದಲ್ಲಿ ದ್ವಾದಶದಲ್ಲಿ ಇರುವುದರಿಂದ ಆತ್ಮಶಕ್ತಿ ಕುಗ್ಗಿಸಿ ನೋಡುತ್ತಾನೆ. ನೀವು ಮಾಡಬೇಕಾದ ಏಕೈಕ ಕೆಲಸ ಮಹಾವಿಷ್ಣುವಿನ ಅವತಾರವಾದ ವಾಮನನನ್ನು ಪೂಜಿಸಿ. ಅಷ್ಟೋತ್ತರ ಪಠಿಸಿ. ಸದ್ಭುದ್ದಿಗೆ ಸರಸ್ವತಿಯನ್ನು ಬಿಳಿ ಪುಷ್ಪದಿಂದ ಅರ್ಚಿಸಿ.