ನ್ಯೂಸ್

ವಾರ ಭವಿಷ್ಯ: ಈ ರಾಶಿಯವರಿಗೆ ಬುದ್ದಿಗೆ ತಕ್ಕ ಸಂಪತ್ತು, ಸಂಪತ್ತಿಗೆ ತಕ್ಕನಾದ ಸಂತಸ ಎಲ್ಲವೂ ಸಿಗುತ್ತದೆ

ಸುದೀಪ್​ ವಿ.ಎನ್​

ಮೇಷ: ಶ್ರಾವಣ ಮಾಸದ ಪೌರ್ಣಮಿಯಿಂದ ಗಾಯಿತ್ರಿ ಆರಾಧನೆಯು ಆರಂಭವಾಗಿದೆ. ಗಾಯಿತ್ರಿ ಮಂತ್ರದಲ್ಲಿ ಸೂರ್ಯೋಪಾಸನೆ ಇದೆ. ಗುರುಮುಖೇನ ಕಲಿತಲ್ಲಿ ಪರ್ಯಾಯ ಮಂತ್ರವೇ ಇರುವುದಿಲ್ಲ. ಮೇಷ ರಾಶಿಯವರು ತೇಜಸ್ಸು, ಜ್ಞಾನ, ಇಚ್ಚಾ, ಕ್ರಿಯಾಶಕ್ತಿಯನ್ನು ಕೊಟ್ಟು ಕಾಪಾಡುವ ಗಾಯಿತ್ರಿ ದೇವಿ ಉಪಾಸನೆ ತಪ್ಪದೇ ಮಾಡಿ. ಎಲ್ಲ ಒಳ್ಳೆಯದಾಗುತ್ತದೆ.

ವೃಷಭ: ದ್ವಿತೀಯದಲ್ಲಿ ಗುರುವಿದ್ದಾನೆ. ಮುತ್ತಿಗಿಂತ ಶ್ರೇಷ್ಠವಾದ ಹರಳು, ವಜ್ರ ಯಾವುದೂ ಇಲ್ಲ. ಮುತ್ತಿಗೆ ಅಧಿಪತಿ ಚಂದ್ರ. ಮಾತು ಮುತ್ತಿನಂತೆ ಇರಬೇಕು. ಮುತ್ತು ಹೊಳೆಯುತ್ತಿ್ತಬೇಕು. ದೇವತಾ ಸ್ವರೂಪಿ ಸ್ತ್ರೀಯ ಕಂಠದಲ್ಲಿ ಕಂಠಾಭರಣವಾಗುತ್ತದೆ. ಅಂತಹ ತ್ರಿಪುರ ಸುಂದರಿಯನ್ನು ಪೂಜಿಸಿದರೆ ಅದೃಷ್ಟದ ಸಾಗರವೇ ಹರಿಯುತ್ತದೆ. ಸಂಪತ್ತು ವಿದ್ಯೆ- ಬುದ್ಧಿಯನ್ನು ಕೊಟ್ಟು ಹರಸುತ್ತಾಳೆ ಸರಸ್ವತಿ. ಮೌನಕ್ಕೆ ಜಾರಿದರೆ ಹೆಚ್ಚು ಲಾಭವಿರುತ್ತದೆ.

ಮಿಥುನ: ಲಗ್ನದಲ್ಲಿ ಗುರುವಿದ್ದರೆ, ಒಬ್ಬ ತಂದೆ ತನ್ನ ಮಕ್ಕಳನ್ನು ತಿದ್ದಿ ಹೇಗೆ ಬದುಕಲು ದಾರಿ ತೋರಿಸಿ ಕೊಡುವನೋ ಹಾಗೆ ಮನುಷ್ಯನಿಗೆ ಮೊಟ್ಟ ಮೊದಲ ಗುರು ತಂದೆ. ಗಾಯಿತ್ರಿ ಮಂತ್ರವನ್ನು ನಿತ್ಯ ಉಪಾಸನೆ ಮಾಡಿ. ಒಂದು ಸಾವಿರ ಗಾಯಿತ್ರಿ ಮಂತ್ರವನ್ನು ನಿತ್ಯ ಜಪ ಮಾಡಿದರೆ ವಿದ್ಯೆ- ಬುದ್ದಿ, ಬುದ್ದಿಗೆ ತಕ್ಕ ಸಂಪತ್ತು, ಸಂಪತ್ತಿಗೆ ತಕ್ಕನಾದ ಸಂತಸ ಎಲ್ಲವೂ ಸಿಗುತ್ತದೆ.

ಕಟಕ: 12ರಲ್ಲಿ ಗುರುವಿದ್ದರೂ ಆದಿತ್ಯನು ಅಲ್ಲೇ ಇದ್ದಾನೆ. ಮೂರರಲ್ಲಿ ಕುಜ ಎಚ್ಚರಿಕೆಯನ್ನು ನೀಡಿದ್ದಾನೆ. ಸವಾಲನ್ನು ಶಾಂತಿಯಿಂದ ಸ್ವೀಕರಿಸಿದರೆ ಎಷ್ಟು ಎತ್ತರಕ್ಕಾದರೂ ಬೆಳೆಯಬಹಹುದು. ಆದರೆ ಶಿವನ ಕೃಪೆ ಅತ್ಯಗತ್ಯ. ನಿಮ್ಮ ಹಾಗು ಮತ್ತೊಬ್ಬರ ಹಿತವನ್ನು ಕಾಪಾಡಿ. ಇನ್ನು 3 ಸೋಮವಾರ ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪೂಜಿಸಿ. ದ್ವಾದಶ ಲಿಂಗಾಷ್ಟಕ ಪಠಿಸಿ.

ಸಿಂಹ: ಸಿಂಹ ರಾಶಿಗೆ ಶನಿಯು ವಕ್ರನಾಗಿ ಸಪ್ತಮಕ್ಕೆ ಬಂದಿದ್ದಾನೆ. ಸಿಂಹದಲ್ಲೇ ಕೇತು, ಕನ್ಯಾ ರಾಶಿಯಲ್ಲಿ ಕುಜನು ಸ್ಥಿತನಾಗಿದ್ದಾನೆ. ಕೇತುವಿಗೆ ಬಾಲಗಣೇಶನನ್ನು ಸೂರ್ಯೋದಯದಲ್ಲಿ ಪೂಜಿಸಿ. ಮಧ್ಯಾಹ್ನ ಬರುವ ಮುನ್ನ ಕನ್ಯಾ ರಾಶಿಯಲ್ಲಿ ಇರುವ ಕುಜನಿಗಾಗಿ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ಎಲ್ಲರಿಗೂ ಸಂತೋಷವನ್ನು ಹಂಚಿ ನೀವು ಸಂತಸ ಪಡಬಹುದು. ಆದಿತ್ಯ ಹೃದಯ ಪಾರಾಯಣ ಮಾಡಿ.

ಕನ್ಯಾ: ಮಾಡಿದ ಅಡುಗೆ ಬಡಿಸಲು ಸಾಧನ ಬೇಕು. ಆದರೆ ಸುಳ್ಳನ್ನು ಆಧಾರವಾಗಿ ಇಟ್ಟುಕೊಂಡು ಸಾಧನಗಳನ್ನು ಉಪಯೋಗಿಸಿದರೆ ಹತ್ತಿಗೆ ಬೆಂಕಿಬಿದ್ದಂತೆ ಆಗಬಹುದು, ಎಚ್ಚರ ವಹಿಸಿ. ಕೊಟ್ಟ ಮಾತಿಗೆ ತಪ್ಪಬಾರದು. ಮತ್ತೊಬ್ಬರಿಗೆ ಕೊಡಬೇಕಾದ್ದನ್ನು ಕೊಟ್ಟು ಸಂತೋಷದಿಂದ, ನೆಮ್ಮದಿಯಿಂದಿರಿ. ಕಾರ್ತವೀರ್ಯಾರ್ಜುನ ಜಪ ಮಾಡಿ, ಜನಾರ್ದನ ದೇವರನ್ನು ಪೂಜಿಸಿ.

ತುಲಾ: ತಾತ್ಕಾಲಿಕವಾಗಿ ಶನಿ ವಕ್ರನಾಗಿದ್ದಾನೆ. ಧರ್ಮ-ಕರ್ಮದಿಂದ ನಡೆದು ಯಾರೊಂದಿಗೂ ಹೆಚ್ಚು ಮಾತನಾಡಬೇಡಿ. ಜೋಪಾನವಾಗಿ ಹೆಜ್ಜೆಯನ್ನು ಹಾಕಿ. ಎಲ್ಲಿಯೂ ಖಾಲಿ ಹಾಳೆಯ ಮೇಲೆ ಹಸ್ತಾಕ್ಷರ ಬೇಡ. ದೈವ ಕೃಪೆ ಇದೆ. ವ್ಯಕ್ತಿಯ ಬಗ್ಗೆ ಕೂಲಂಕಷವಾಗಿ ವಿಚಾರಿಸದೆ ಎಡವಿದಲ್ಲಿ ಮುಂದೆ 16 ವರುಷಗಳ ಕಾಲ ಕೊರಗುವಂತಾಗುತ್ತದೆ. ಗುರು ಹಿರಿಯರ ಸಲಹೆ ಪಡೆದು, ತಂದೆಯ ಅನುಗ್ರಹ ಪಡೆದು ಸಾಗಿರಿ.

ವೃಶ್ಚಿಕ: ಕನಕಂ ಸಂಪನ್ನಂ ಕನಕ-ಪೂಜಿತ, ವಜ್ರ ವೈಢೂರ್ಯಾಧಿ ಆಭರಣಂ ಭೂಷಣಂ ಸ್ತ್ರೀದೇವತಾಂ ತದನಂತರಂ ಭೂಷಿತಂ ಎಂದಿದ್ದಾರೆ. ಕನಕಾಂಬರ ಹೂವು ನೋಡಲು ಚೆನ್ನ. ಆದರೆ ಸುವಾಸನೆ ಇರದು. ಹಾಗೆಯೇ ದುಡ್ಡನ್ನು ನೋಡಿದರೆ ಸಾಲದು. ಅದು ಬಂದು ಜೇಬು ತುಂಬಬೇಕು. ಅದಕ್ಕೆ ವೃಶ್ಚಿಕ ರಾಶಿಯವರು ಕನಕಧಾರ ಸ್ತ್ರೆೊತ್ರ ಪಠಿಸಿ. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ, ಪೂಜಿಸಿ, ದರ್ಶಿಸಿ.

ಧನುಸ್ಸು: ಧನವೇ, ದವಸವೇ, ವಸ್ತ್ರವೇ ಬೇಕಾಗಲಿ, ಎಲ್ಲರಿಗೂ ಬೇಕಾದ ಧನಸಹಾಯ ಮಾಡಲೇಬೇಕು. ವಿದ್ಯೆಯಿದ್ದರೆ ಸಾಲದು. ಬುದ್ಧಿ ಬಲದಿಂದ ಅಷ್ಟಸಿದ್ಧಿಗಳನ್ನು ಸಂಪಾದನೆ ಮಾಡಿದರೆ ಒಳ್ಳೆಯ ಭವಿಷ್ಯವು ನಿಮ್ಮದಾಗುತ್ತದೆ. ವಕ್ರನಾಗಿ ತೃತೀಯಕ್ಕೆ ಶನಿ ಬಂದಿದ್ದಾನೆ. ಯಾರ ಮೇಲೂ ನಿಮ್ಮ ಕೋಪ ಪ್ರದರ್ಶಿಸಬೇಡಿ. ರಾಮಾಯಣ ಪಾರಾಯಣ ಮಾಡಿರಿ.

ಮಕರ: ಈಗಾಗಲೇ ಶನಿಯು 3ನೇ ಮನೆಯಿಂದ ವಕ್ರನಾಗಿ ಗುರುರಾಶಿಯಿಂದ ಕುಂಭಕ್ಕೆ ಬಂದಿದ್ದಾನೆ. ಆದ್ದರಿಂದ ನೀವು ಎಚ್ಚರಿಕೆಯಿಂದ ಸಾಗಬೇಕು. ಶನಿಯು ವಕ್ರಗತಿಯಲ್ಲಿ ಕುಂಭದಲ್ಲಿ ರಾಹುವಿನೊಂದಿಗೆ ಬಂದಿರುವುದ ರಿಂದ ಜಾಗ್ರತೆ ವಹಿಸಬೇಕು. ಆತ್ಮರಕ್ಷಣೆ ಮಾಡಿಕೊಳ್ಳುವ ಸಮಯ.

ಕುಂಭ:  ಕುಂಭದಲ್ಲಿ ಇಷ್ಟ ದೇವರನ್ನು ಆಹ್ವಾನಿಸಿ ಷೋಡಶೋಪಚಾರದಿಂದ ಪೂಜಿಸಿ, ನೈವೇದ್ಯ ಮಾಡಿದರೆ ಬೇಕಾದ್ದನ್ನು ಗಳಿಸಬಹುದು. ಅನ್ನದಾನ ಮಾಡಿರಿ. ಅಮೃತತ್ವವನ್ನು ಪಡೆಯಿರಿ. ಈಶ್ವರ ಸ್ವರೂಪಿ ಆನಂದೇಶ್ವರನನ್ನು ಪೂಜಿಸಿದರೆ ಸುಖ ಶಾಂತಿ ಲಭಿಸಿ, ಜೀವನ ಹಸನಾಗಿರುತ್ತದೆ.

ಮೀನ: ಗುರುವು ಚತುರ್ಥದಲ್ಲಿದ್ದು, ರವಿಯು ಪಂಚಮದಲ್ಲಿ ಕುಳಿತಿದ್ದಾನೆ. ಕಾರ್ಯಸಾಧನೆ ಮಾಡಿಕೊಳ್ಳುವ ಸಮಯ. ಹೆಣ್ಣು ಮಕ್ಕಳ ಕಾಲ್ಗೆಜ್ಜೆ ಲಾವಣ್ಯವಷ್ಟೇ ಅಲ್ಲ, ಅದು ಎಚ್ಚರಿಕೆಯ ಗಂಟೆಯೂ ಹೌದು. ಹೆಣ್ಣಿನ ಮುಖವನ್ನು ನೋಡಿ ದೈವವೆಂದು ಪರಿಗಣಿಸಿ ಭಕ್ತಿಯಿಂದ ಕೈ ಮುಗಿದರೆ, ಶನಿಯು ಬರುವ ಎಲ್ಲ ಸಂಕಟದಿಂದ ನಿಮ್ಮನ್ನು ಪಾರು ಮಾಡುತ್ತಾನೆ.