ವೃಷಭ: ಇದೇ 14 ನೆ ತಾರೀಕು ಗುರುವು ತನ್ನ ಮನೆಯನ್ನು ಬದಲಾಯಿಸಿ ಮಿಥುನ ರಾಶಿಗೆ ಹೋಗುತ್ತಾನೆ. ವಿದ್ಯಾಕಾರಕ ಗುರುವು ಬುದ್ಧಿಯನ್ನು ಕೊಡುವ ಬುಧನ ಮನೆಯಲ್ಲಿ ಇರುವುದು ಶ್ರೇಷ್ಠ ಸಮಯ. ದೇವರು ಕೊಟ್ಟ ವಿದ್ಯೆ ಬುದ್ಧಿಯನ್ನು ಉಪಯೋಗಿಸುವ ಬುದ್ಧಿ ಇದ್ದರೆ ಧೈರ್ಯದಿಂದ ಏನನ್ನೂ ಸಾಧಿಸಬಹುದು. ಗುರು ಪಾರಾಯಣ ಮಾಡಿ. ಮಹಾವಿಷ್ಣುವನ್ನು ಪೂಜಿಸಿ.
ಮಿಥುನ: ರಾಶಿಗೆ ಗುರು ಬಂದು ಒತ್ತಡ ಕಡಿಮೆ ಮಾಡಿ ನಿಮಗೆ ಸರಿಯಾದ ದಾರಿಯನ್ನು ತೋರಬಲ್ಲನು. ನಿಮ್ಮ ಬುದ್ಧಿಗೆ ವಿವೇಕ ಮಿಶ್ರಣ ಮಾಡಿ. ವಿಷಯ ಆಲೋಚಿಸಿ ನಿರ್ಣಯ ಮಾಡುವುದು ಅತ್ಯುತ್ತಮ ವಾದ ಸಲಹೆ. ಗುರುವಿಗೆ 2ನೇ ಮನೆಯಲ್ಲಿ ಅಂಗಾರಕನಿರುವುದರಿಂದ ತರ್ಕ, ದ್ವಂದ್ವವೂ ಬೇಡ. ಆನಂದ ಕೊಟ್ಟು ಕಾರ್ಯ ಸಿದ್ಧಿ ಮಾಡುವ ಗಣಪತಿಯನ್ನು ಪೂಜಿಸಿ. ಗಣಪತಿ ಅಷ್ಟೋತ್ತರ ಪಠಿಸಿ.
ಕಟಕ: ಅಂಗಾರಕನು ಜಲ ರಾಶಿಯಲ್ಲಿರುವುದದರಿಂದ ದೇಶದಲ್ಲಿ ಭಯದ ವಾತಾವರಣ ಇರುತ್ತದೆ. ದೇಶವು ಶಾಂತಿಯನ್ನು ಕಾಪಾಡಿಕೊಳ್ಳಲು ಶ್ರಮ ಪಡಬೇಕು. ಈ ಸಮಯದಲ್ಲಿ ಮನಸಂಕಲ್ಪ ಹೊಂದಿ ರಾಷ್ಟ್ರಕ್ಕೂ ಒಳ್ಳೆಯದಾಗಲಿ ಎಂದು ಉಮಾಮಹೇಶ್ವರನ ಪ್ರಾರ್ಥಿಸಿ. ಸ್ವಾರ್ಥ ವಿಲ್ಲದ ಜೀವನ ಸಾರ್ಥಕ ಜೀವನವೆಂದು ಶಾಸ್ತ್ರ ಹೇಳುತ್ತದೆ. ಶಿವ ತ್ರಿಶತಿ ಪಠಿಸಿ.
ಸಿಂಹ:ಗುರು ಬಲ ಬಂದು ಏಕಾದಶ ಗುರುವು ನಿಮ್ಮ ಪೂರ್ವ ಪುಣ್ಯ ಹಿರಿಯರ ಆಶೀರ್ವಾದ, ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇತ್ಯಾದಿ ನವಗ್ರಹ ಫಲವನ್ನು ಕೊಟ್ಟು ಹರಸುತ್ತಾರೆ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ. ಸುಖದ ಕಾಲವನ್ನು ಸುಖವಾಗಿ ಕಳೆಯಿರಿ.
ಕನ್ಯಾ: ಹತ್ತನೇ ಮನೆಗೆ 9ರ ಗುರು ಬಂದು ಗುರು ಬಲದಲ್ಲಿ ವ್ಯತ್ಯಾಸ ಆಗುವುದು ಸಹಜ. ಕಷ್ಟದ ನಂತರ ಸುಖ, ದುಃಖದ ನಂತರ ನಗುವು, ನಗುವನ್ನು ಮರೆತಾಗ ಮನೋಭಾರವು ದೈವ ಸಂಕಲ್ಪವಾಗಿರುತ್ತದೆ. ಶನಿಯು ಸಪ್ತಮದಲ್ಲಿ ಇದ್ದಾನೆ. ಆರೋಗ್ಯ ಬಗ್ಗೆ ಎಚ್ಚರ ಇರಲಿ.
ತುಲಾ: ಜಗದೊಡೆಯ ಕೃಷ್ಣನನ್ನು ಚಿನ್ನದಲ್ಲಿ, ವಜ್ರ ವೈಢೂರ್ಯದಲ್ಲಿ ತೂಗಬಹುದು. ನಿಮ್ಮ ಸಮಯ ಇಂಥದಿರುವಾಗ ಏನೂ ಕೇಳಬೇಕಾಗಿಲ್ಲ. ಚಂದ್ರನ ತಂಪನ್ನು ಅನುಭವಿಸುವ ಕಾಲ. ಕೊಟ್ಟ ಧನ ಸಂಪತ್ತು ಕಾಪಾಡಿಕೊಳ್ಳಿ. ನಿಮ್ಮ ಪುಣ್ಯವು ದೇವತಾ ಕಾರ್ಯದಿಂದ ಮತ್ತಷ್ಟು ಹೆಚ್ಚಾಗಲಿ.
ವೃಶ್ಚಿಕ: 8ನೇ ಮನೆಗೆ ಗುರು ಬಂದಿದ್ದಾನೆ. ಪಂಚಮದಲ್ಲಿ ಶನಿ ಇದ್ದಾನೆ. ನಕಾರಾತ್ಮಕ ಮನಸ್ಥಿತಿಯಲ್ಲಿ ಹತ್ತು ಹಲವು ಸಮಸ್ಯೆಗಳಿಗೆ ದಾರಿಯೇ ಕಾಣದಂತೆ ಆಗುವುದು. ದಾರಿಕಂಡರೆ ಸಾಲದು. ಬೆಳಕಿರಬೇಕು. ವಿದ್ಯೆಗೆ ತಕ್ಕ ಬುದ್ದಿ ಇರಬೇಕು. ದೈವಬಲ, ವಿದ್ಯಾ ಬಲವು ಸಾಕಷ್ಟುಕೊಟ್ಟು ನಿಮ್ಮ ಜೀವನವನ್ನು ನಡೆಸುತ್ತದೆ. ಪ್ರಾರ್ಥನೆಯೇ ಮನುಷ್ಯನ ಮೊದಲ ಕರ್ತವ್ಯ.
ಧನುಸ್ಸು: ಗುರುವು ಅನುಗ್ರಹ ಕೊಟ್ಟು ಸುಖ ಶಾಂತಿಯನ್ನು ಕೊಟ್ಟು ನಿಮ್ಮ ಕೀರ್ತಿ ಪತಾಕೆ ಹಾರಿಸುತ್ತಾನೆ . ಚತುರ್ಥ ಶನಿ ಇದ್ದರೂ ಎಚ್ಚರ ಇರಲಿ. ಹಿರಿಯರ ಸಲಹೆ ಇಲ್ಲದೆ ಯಾವ ಕೆಲಸವನ್ನೂ ಮಾಡಬಾರದು. ಸಿಂಹವೂ ಬಲೆಗೆ ಬಿದ್ದಾಗ ದುಃಖ ಪಡುತ್ತದೆ. ದುಃಖಪಡದೆ ಇರಲು ದೇವರ ಸಹಾಯ ಪಡೆದುಕೊಳ್ಳಿ.
ಮಕರ: ಮಕರ ರಾಶಿಯವರು ಭಾಗ್ಯವಂತರು. ಭಾಗ್ಯವತಿ ಎಂದರೆ ಚಂಡಿಕಾ ದುರ್ಗಾಪರಮೇಶ್ವರಿ ಅಮ್ಮನವರು ಎಂಬುದೇ ಅರ್ಥ. ದೈವವನ್ನು ಅರ್ಥೈಸಿಕೊಳ್ಳಿ. ನುಡಿದಂತೆ ನಡೆಯಿರಿ. ಸ್ವಾರ್ಥವಿಲ್ಲದೆ ಪ್ರಾರ್ಥನೆ ಇರಬೇಕು. ಏನು ಕೇಳಿದರೂ ಕೊಡುವ ಚೈತನ್ಯವು ಗುರು ಒಬ್ಬನಿಂದಲೆ ಸಾಧ್ಯ. ನಿಮ್ಮ ಧೈರ್ಯ, ಬಲ, ಯಶಸ್ಸು ಸಂಪತ್ತು ಹೆಚ್ಚಿಸಿಕೊಳ್ಳಲು ನಿತ್ಯ ಗುರುಚರಿತ್ರೆ ಪಾರಾಯಣ ಮಾಡಿ. ದತ್ತಾತ್ರೇಯನನ್ನು ಪ್ರಾರ್ಥಿಸಿ.
ಕುಂಭ: ದ್ವಿತೀಯ ಶನಿ ಗುರು ಮನೆಯಲ್ಲಿದ್ದು ಕುಂಭ ರಾಶಿಗೆ ಪಂಚಮಕ್ಕೆ ಬರುವುದರಿಂದ ಅದೃಷ್ಟದ ಬಾಗಿಲು ತೆರೆದಿದೆ. ಮನೆಗೆ ಅದೃಷ್ಟ ತರುವವಳು ಮಹಾಲಕ್ಷ್ಮಿಯೇ. ನಿಮ್ಮ ಗೃಹ ಲಕ್ಷ್ಮಿ ಚೆನ್ನಾಗಿದ್ದರೆ ಮಹಾಲಕ್ಷ್ಮಿ ಮನೆಗೆ ಬರುತ್ತಾಳೆ. ನಿತ್ಯ ಲಕ್ಷ್ಮಿ ಆರಾಧನೆ ಮಾಡಿ. ಶ್ರೀಸೂಕ್ತ ಪಾರಾಯಣ ಮಾಡಿ. ನಿಮ್ಮ ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಸಾಧ್ಯವಾದರೆ ಮಂಗಳ ದ್ರವ್ಯ, ಕುಪ್ಪಸ ಜತೆ ಯಥಾಶಕ್ತಿ ದಕ್ಷಿಣೆ ಕೊಟ್ಟು ಕಳಿಸಿ. ನೀವು ಇಷ್ಟು ಕೊಟ್ಟರೆ ನಿಮಗೆ ಕೈ ತುಂಬಾ ಕೊಟ್ಟು ಮಹಾಲಕ್ಷ್ಮೀ ಕಾಪಾಡುತ್ತಾಳೆ.
ಮೀನ: ಶನಿಯು ಮೀನ ರಾಶಿಯಲ್ಲಿ ಇದ್ದು ಚತುರ್ಥಕ್ಕೆ ಗುರು ಬಂದು ನಿಮ್ಮ ದೈವ ಪುಣ್ಯ ನಿಮ್ಮನ್ನು ಕಾಪಾಡುತ್ತದೆ. ಪೂರ್ವ ಪುಣ್ಯ ವೃದ್ಧಿಯಾಗುವುದು. ಉಪಕಾರ ಮಾಡಿದ ಕಣ್ಣಿಗೆ ಕಾಣದ ಪುಣ್ಯ ಬಂದು ಸೇರಿ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ ಶ್ರೀಕೃಷ್ಣ. ಕೃಷ್ಣನ ದೇವಸ್ಥಾನಕ್ಕೆ ಹೋಗಿ ಕೃಷ್ಣ ಅಷ್ಟೋತ್ತರ ಮಾಡಿಸಿ. ಎಲ್ಲವೂ ನಿಮ್ಮಂತೆ ನಡೆದು ಸುಖವನ್ನು ಕಾಣುವಿರಿ.