ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವ ವಿದ್ಯಾಲಯದ ವತಿಯಿಂದ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಸಹಯೋಗದಲ್ಲಿ, ದ್ವಿತೀಯ ಪಿಯು ಪಾಸಾದ ವಿದ್ಯಾರ್ಥಿಗಳಿಗಾಗಿ ಸೆ. 18ರಂದು ಬೆಳಗ್ಗೆ 10.30ಕ್ಕೆ ಝುೂಮ್ ಆಪ್ ಮೂಲಕ ವೃತ್ತಿ ಮಾರ್ಗದರ್ಶನ ಮತ್ತು ಅವಕಾಶಗಳ ಕುರಿತು ವೆಬಿನಾರ್ ಆಯೋಜಿಸಲಾಗಿದೆ.
ಪಿಯು ನಂತರದ ವಿವಿಧ ಶೈಕ್ಷಣಿಕ ಅವಕಾಶಗಳು ಹಾಗೂ ಇಂಜಿನಿಯರಿಂಗ್ ಶಿಕ್ಷಣದ ಆಯ್ಕೆ ಹೇಗೆ, ಏಕೆ? ಎಂಬುದರ ಕುರಿತಾಗಿ ಕೆಎಲ್ಇ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಸ್.ವಿ. ದೇಸಾಯಿ ಮತ್ತು ಡಾ. ನಿತಿನ್ ಕುಲಕರ್ಣಿ ಮಾತನಾಡುವರು. ಕರೊನಾ ಕಾಟ ಇರುವ ಸಮಯದಲ್ಲಿ ಆನ್ಲೈನ್ ವೇದಿಕೆ ಮೂಲಕ ಕಲಿಕೆಯ ಸವಾಲುಗಳನ್ನು ಮಾನಸಿಕ ಸಿದ್ಧತಾ ವಿಧಾನದಿಂದ ನಿಭಾಯಿಸುವ ಬಗ್ಗೆ ಧಾರವಾಡದ ಮಾನಸಿಕ ಆರೋಗ್ಯ ಸಂಸ್ಥೆ (ಡಿಮ್ಹಾನ್ಸ್) ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳ ಕುರಿತು ಧಾರವಾಡದ ಎಸ್.ಡಿ.ಎಂ. ವಿಶ್ವವಿದ್ಯಾಲಯದ ತಜ್ಞ ವೈದ್ಯರಾದ ಡಾ.ಅಜಂತಾ ಜಿ.ಎಸ್. ಮಾತನಾಡುವರು. ಆಸಕ್ತರು
https://bit.ly/3k7Pxjt ಮೂಲಕ ಸಂಪರ್ಕಿಸಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಕೋರಲಾಗಿದೆ.