ನ್ಯೂಸ್

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ

Weather update 25-09-2023 ಬೆಂಗಳೂರು: ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ನೆರೆ ರಾಜ್ಯ ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಬೀಳುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.


ಶನಿವಾರ ರಾತ್ರಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ರಾಯಚೂರು ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಆದರೆ ಅನೇಕ ದಿನಗಳ ಬಳಿಕ ಮಳೆರಾಯನ ಪ್ರವೇಶ ಕಂಡು, ಈ ಭಾಗದ ಜನರ ಮೊಗದಲ್ಲಿ ಸಂತಸ ಮೂಡಿದೆ.


ಭಾನುವಾರದಂದು, ತುಂತುರು ಮಳೆಯೊಂದಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿತ್ತು. ರಾಷ್ಟ್ರ ರಾಜಧಾನಿಯ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಮತ್ತು 25 ಡಿಗ್ರಿಗಳಾಗುವ ಸಾಧ್ಯತೆಯಿದೆ.


ದೆಹಲಿಯಲ್ಲಿ ಗರಿಷ್ಠ ತಾಪಮಾನ 35.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸರಾಸರಿಗಿಂತ ಒಂದು ಡಿಗ್ರಿ ಹೆಚ್ಚಾಗಿತ್ತು. ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಸಾಮಾನ್ಯಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಮಾಹಿತಿ ನೀಡಿದೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ಶನಿವಾರದಂದು ವಾಯವ್ಯ ದೆಹಲಿಯ ಕಾಜಾವಾಲಾ ರಸ್ತೆಯಲ್ಲಿರುವ ಟಾಟಾ ಪವರ್ ಲಿಮಿಟೆಡ್ ಕಚೇರಿಯ ಬಳಿ ನೀರು ನುಗ್ಗಿದೆ.


ಕಳೆದ ಎರಡು ದಿನಗಳ ಹಿಂದೆ ದೆಹಲಿಯ ದಿಲಾಶದ್ ಗಾರ್ಡನ್ ಪ್ರದೇಶದಲ್ಲಿ ಮಳೆಯಿಂದಾಗಿ ಶಾಲೆಯ ಗೋಡೆ ಕುಸಿದು ಸುಮಾರು 11 ವಾಹನಗಳು ಜಖಂಗೊಂಡಿತ್ತು.


ವಾಯುವ್ಯ ದೆಹಲಿಯ ಪಶ್ಚಿಮ ಶಾಲಿಮಾರ್ ಬಾಗ್, ಶಾಲಿಮಾರ್ ಬಾಗ್‌’ನ ಬಿಎಫ್ ಬ್ಲಾಕ್ ಮತ್ತು ಉತ್ತರ ದೆಹಲಿಯ ಮಾಡೆಲ್ ಟೌನ್ ಪ್ರದೇಶದ ಗುಜ್ರಾನ್‌’ವಾಲಾ ಟೌನ್‌’ನಲ್ಲಿ ಮರಗಳು ಧರೆಶಾಹಿಯಾಗಿವೆ ಎಂದು ತಿಳಿದುಬಂದಿದೆ.


ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿಯ ಹವಾಮಾನವು ಇದ್ದಕ್ಕಿದ್ದಂತೆ ಬದಲಾಗಿದ್ದು, ದಟ್ಟವಾದ ಮೋಡಗಳು ಕಾಣಿಸಿಕೊಂಡು, ಬಳಿಕ ನಗರದ ಹಲವೆಡೆ ಜೋರು ಗಾಳಿ ಸಹಿತ ಮಳೆಯಾಗಿದೆ.