bank 
ನ್ಯೂಸ್

ಬ್ಯಾಂಕ್​ಗಳಿಗೂ ಹವಾಮಾನ ವೈಪರೀತ್ಯದ ಬಿಸಿ: ರೂ 6.19 ಲಕ್ಷ ಕೋಟಿ ಸಾಲ ಸಂಕಷ್ಟ

ನವದೆಹಲಿ: ಪ್ರಕೃತಿ ವಿಕೋಪಗಳ ಕಾರಣ 6.19 ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳುವುದು ಭಾರತದ ಮುಂಚೂಣಿ ಬ್ಯಾಂಕುಗಳಿಂದ ಸಾಧ್ಯವಾಗಿಲ್ಲ ಎಂದು ಸಿಡಿಪಿ ಇಂಡಿಯಾ ವಾರ್ಷಿಕ ವರದಿ 2020 ಉಲ್ಲೇಖಿಸಿದೆ.

ಪ್ರವಾಹ, ಬರ ಮತ್ತು ಸೈಕ್ಲೋನ್ ಮುಂತಾದ ಹವಾಮಾನ ವೈಪರೀತ್ಯ ಅಪಾಯಗಳ ಕಾರಣ ದೇಶದ ಮುಂಚೂಣಿ ಬ್ಯಾಂಕ್ ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಏಕ್ಸಿಸ್ ಬ್ಯಾಂಕುಗಳು ಸಾಲ ವಸೂಲಾತಿ ಸಂಕಷ್ಟವನ್ನು ಎದುರಿಸಿವೆ. ಸಿಮೆಂಟ್, ಕಲ್ಲಿದ್ದಲು, ತೈಲ ಮತ್ತು ವಿದ್ಯುತ್ ಮುಂತಾದ ಪರಿಸರ ಸೂಕ್ಷ್ಮ ಉದ್ಯಮಗಳಿಗೆ ಬ್ಯಾಂಕುಗಳು ಸಾಲ ನೀಡಿದ್ದವು. ಪ್ರಕೃತಿ ವಿಕೋಪದ ಕಾರಣ ನಷ್ಟ ಅನುಭವಿಸಿರುವ ಈ ಉದ್ಯಮಗಳು ಸಾಲ ಮರುಪಾವತಿ ಸರಿಯಾಗಿ ಮಾಡಿಲ್ಲ. ಬ್ಯಾಂಕುಗಳಿಗೆ ಭಾರತದ 67 ಟಾಪ್ ಕಂಪನಿಗಳು ಒಟ್ಟು 97 ಶತಕೋಟಿ ಡಾಲರ್ ಸಾಲ ಮರುಪಾವತಿಸಬೇಕು. ಒಟ್ಟು ಸಾಲ ವಸೂಲಾತಿ ಸಂಕಷ್ಟದಲ್ಲಿ ಈ ಪಾಲು ಶೇಕಡ 87 ಇದೆ ಎಂದು ಸಿಡಿಪಿ ವರದಿ ತಿಳಿಸಿದೆ.

''ಉದ್ಯಮಗಳಿಗೆ ದೀರ್ಘಾವಧಿಯಲ್ಲಿ ಅತಿದೊಡ್ಡ ಅಪಾಯ ತಂದೊಡ್ಡುವುದು ಹವಾಮಾನ ವೈಪರೀತ್ಯಗಳೇ ಆಗಿವೆ. ಹಣಕಾಸು ಸಂಸ್ಥೆಗಳು ಅದನ್ನು ಈಗಷ್ಟೇ ಅರ್ಥಮಾಡಿಕೊಳ್ಳತೊಡಗಿವೆ''

ದಮನ್​ದೀಪ್ ಸಿಂಗ್, ಸಿಡಿಪಿ ಇಂಡಿಯಾದ ನಿರ್ದೇಶಕ

ಯಾವ ಬ್ಯಾಂಕ್, ಎಷ್ಟು ಸಾಲ?

ಎಸ್​ಬಿಐ: ರೂ 3.83 ಲಕ್ಷ ಕೋಟಿ

ಎಚ್​ಡಿಎಫ್​ಸಿ: ರೂ1.79 ಲಕ್ಷ ಕೋಟಿ

ಇಂಡಸ್​ಇಂಡ್ ಬ್ಯಾಂಕ್: ರೂ 46,600 ಕೋಟಿ

ಏಕ್ಸಿಸ್ ಬ್ಯಾಂಕ್: ರೂ 7500 ಕೋಟಿ

ಯೆಸ್ ಬ್ಯಾಂಕ್, ರೂ 2000, ಕೋಟಿ