ಒಟ್ಟಾವಾ: ಕರೊನಾ ನಿಯಂತ್ರಣಕ್ಕೆ ಏನೇನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಲವು ತಜ್ಞರು ಈಗಾಗಲೇ ಹೇಳಿದ್ದಾರೆ.
ಹಾಗೇ ಸೆಕ್ಸ್ ಮಾಡುವಾಗ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಕೆನಡಾದ ಪ್ರಮುಖ ವೈದ್ಯೆಯೋರ್ವರು ತಿಳಿಸಿದ್ದಾರೆ. ಲೈಂಗಿಕ ಕ್ರಿಯೆ ನಡೆಸುವಾಗ ಪರಸ್ಪರ ಚುಂಬಿಸಿಕೊಳ್ಳಬೇಡಿ. ಮಾಸ್ಕ್ ಧರಿಸಿಯೇ ಸೆಕ್ಸ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಡಾ.ತೆರೆಸಾ ಟಾಮ್ ಅವರು ಈ ಹೇಳಿಕೆ ನೀಡಿದ್ದಾರೆ. ವೀರ್ಯ ಅಥವಾ ಯೋನಿದ್ರವದಿಂದ ಕರೊನಾ ಸೋಂಕು ಪ್ರಸರಣ ಆಗುವ ಸಾಧ್ಯತೆ ಇಲ್ಲ. ಆದರೆ ಯಾರಾದರೂ ಹೊಸ ಪಾರ್ಟನರ್ ಜತೆ ಸೆಕ್ಸ್ ಮಾಡುವಾಗ ಕಿಸ್ ಬೇಡ. ಮಾಸ್ಕ್ ಧರಿಸಿಯೇ ಕ್ರಿಯೆ ನಡೆಸಿ ಎಂದಿದ್ದಾರೆ. ಇದನ್ನೂ ಓದಿ: ಪತಿಯ ಮರ್ಮಾಂಗವನ್ನೇ ಕಡಿದ ಪತ್ನಿ: ಇದಕ್ಕೆ ಕಾರಣ ಇಲಿಯ ಕಿತಾಪತಿ…!
ಸೆಕ್ಸ್ ಮಾಡುವಾಗ ಮುಖವನ್ನು ಪರಸ್ಪರ ಹತ್ತಿರ ತರಬೇಡಿ. ಕೊವಿಡ್-19 ಇರುವ ಈ ಸಂದರ್ಭದಲ್ಲಿ ಹೇಗೆ ಸೆಕ್ಸ್ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳುವುದು ಅಗತ್ಯ ಎಂದಿದ್ದಾರೆ. ಅಷ್ಟೇ ಅಲ್ಲ, ಒಬ್ಬರೇ ಏಕಾಂಗಿಯಾಗಿ ಮಾಡುವ ಸೆಕ್ಸ್ ಇನ್ನೂ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ. ಸದ್ಯ ಕೆನಡಾದಲ್ಲಿ 1,29,425 ಕೊವಿಡ್-19 ಪ್ರಕರಣಗಳು ಪತ್ತೆಯಾಗಿದೆ. (ಏಜೆನ್ಸೀಸ್)