ನ್ಯೂಸ್

ಗುರುದಕ್ಷಿಣೆ ರೂಪದಲ್ಲಿ ಪಿಒಕೆ ಬೇಕು

ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಗುರುವಾರ ಮಧ್ಯಪ್ರದೇಶದ ಚಿತ್ರಕೂಟ ದಲ್ಲಿರುವ ಜಗದ್ಗುರು ರಾಮ ಭದ್ರಾಚಾರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಸೀತೆಯನ್ನು ಹುಡುಕಲು ಹನುಮಂತನು ಲಂಕೆಗೆ ಹೋಗುವ ಮೊದಲು ನೀಡಲಾಗಿದ್ದ ರಾಮ ಮಂತ್ರದ ದೀಕ್ಷೆಯನ್ನು ಉಪೇಂದ್ರ ದ್ವಿವೇದಿಗೆ ರಾಮಭದ್ರಾಚಾರ್ಯರು ನೀಡಿದರು. ಇದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಗುರುದಕ್ಷಿಣೆಯಾಗಿ ನೀಡುವಂತೆ ಕೇಳಿದ್ದೇನೆ ಎಂದು ರಾಮಭದ್ರಾಚಾರ್ಯರು ತಿಳಿಸಿದ್ದಾರೆ. 75 ವರ್ಷದ ಜಗದ್ಗುರು ರಾಮಭದ್ರಾಚಾರ್ಯರು ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಶ್ರೀ ತುಳಸಿ ಪೀಠ ಚಿತ್ರಕೂಟ ಧಾಮದ ಸಂಸ್ಥಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. ಇವರು ನಾಲ್ಕು ಜಗದ್ಗುರು ರಾಮಚಂದ್ರಾಚಾರ್ಯರಲ್ಲಿ ಒಬ್ಬರಾಗಿದ್ದು, ತುಳಸಿ ಪೀಠದ ಮುಖ್ಯಸ್ಥರಾಗಿದ್ದಾರೆ. ಅವರು 2 ತಿಂಗಳ ಮಗುವಿದ್ದಾಗ ಕಣ್ಣು ಕಳೆದುಕೊಂಡಿದ್ದು, ಮಧ್ಯ ಭಾರತ ಭಾಗದ ಪ್ರಮುಖ ಸ್ವಾಮೀಜಿಗಳಲ್ಲಿ ಒಬ್ಬರಾಗಿದ್ದಾರೆ.