ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ
- 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಟಾಕ್ ಶೋ
- ಅದನ್ನು ಮರೆಯುವ ಮುನ್ನವೇ ಮತ್ತೊಂದು ಶಾಕಿಂಗ್ ಹೇಳಿಕೆ
- ದಾಂಪತ್ಯಕ್ಕೂ ಮೊದಲು ಬಾಲಿವುಡ್ನ ಒಬ್ಬ ಸ್ಟಾರ್ ನಟನೊಂದಿಗೆ ಡೇಟಿಂಗ್
ಮುಂಬೈ: ಬಾಲಿವುಡ್ ಚಿತ್ರರಂಗದ ಹಿರಿಯ ನಟಿಯರಾದ ಟ್ವಿಂಕಲ್ ಖನ್ನಾ ಮತ್ತು ಕಾಜೋಲ್ ಜತೆಗೂಡಿ ನಡೆಸಿಕೊಡುವ 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಟಾಕ್ ಶೋ ಸದ್ಯ ಹಿಂದಿ ವೀಕ್ಷಕರ ಗಮನ ಸೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ಇವರಿಬ್ಬರು ಮಾತನಾಡುವ ಕೆಲವು ವಿಚಾರಗಳು ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿವೆ. ಅಂತೆಯೇ ಇಲ್ಲೊಂದು ವಿಷಯ ಸದ್ಯ ಸಿನಿಪ್ರಿಯರ ಹುಬ್ಬೇರಿಸಿದೆ.
ಅಚ್ಚರಿ ಹೇಳಿಕೆಗಳೇ ಹೆಚ್ಚು!
ಇತ್ತೀಚಿನ ಸಂಚಿಕೆಯೊಂದರಲ್ಲಿ, ಕಾಜೋಲ್, "ದಾಂಪತ್ಯ ಸಂಬಂಧಕ್ಕೂ ಒಂದು ಮುಕ್ತಾಯ ದಿನಾಂಕ ಇರಬೇಕು" ಎಂಬ ಹೇಳಿಕೆ ನೆಟ್ಟಿಗರ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಈ ಕಮೆಂಟ್ ಮರೆಯುವ ಮುನ್ನವೇ ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿರುವ ನಟಿಮಣಿಯರು, ಅಂದು ನಾವು ಆ ಒಬ್ಬ ಸ್ಟಾರ್ ನಟನನ್ನು ಇಷ್ಟಪಟ್ಟಿದ್ದೆವು ಎಂದಿದ್ದಾರೆ.
ದಾಂಪತ್ಯಕ್ಕೂ ಮೊದಲು...
ಖನ್ನಾ ಹಾಗೂ ಕಾಜೋಲ್ ತಮ್ಮ ದಾಂಪತ್ಯಕ್ಕೂ ಮೊದಲು ಬಾಲಿವುಡ್ನ ಒಬ್ಬ ಸ್ಟಾರ್ ನಟನೊಂದಿಗೆ ಡೇಟಿಂಗ್ ಮಾಡುತ್ತಿದ್ದರಂತೆ. ನಟಿಮಣಿಯರ ಈ ಹೇಳಿಕೆ ಸದ್ಯ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಊಹಾಪೋಹ, ಗೊಂದಲಗಳಿಗೆ ದಾರಿ ಮಾಡಿಕೊಟ್ಟಿದೆ. ಆದಾಗ್ಯೂ, ಈ ಜೋಡಿ ತಾವು ಯಾವ ಹೀರೋನನ್ನು ಡೇಟ್ ಮಾಡುತ್ತಿದ್ದೆವು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ಇಬ್ಬರು ಸ್ಟಾರ್ ನಟರ ಹೆಸರು ಮುನ್ನೆಲೆಗೆ
ಕಾಜೋಲ್ ಮತ್ತು ಖನ್ನಾ ಹೇಳಿಕೆ ವೈರಲ್ ಆಗ್ತಿದ್ದಂತೆ ನೆಟ್ಟಿಗರು, ಅಕ್ಷಯ್ ಕುಮಾರ್ ಅಥವಾ ಅಭಿಷೇಕ್ ಬಚ್ಚನ್ ಇರಬೇಕು ಎಂದು ಕಮೆಂಟ್ಗಳಲ್ಲಿ ಅಭಿಪ್ರಾಯಿಸಿದ್ದಾರೆ. ಏಕೆಂದರೆ, ಅಕ್ಷಯ್ ಕುಮಾರ್ ಈ ಹಿಂದೆ ರವೀನಾ ಟಂಡನ್ ಮತ್ತು ಶಿಲ್ಪಾ ಶೆಟ್ಟಿ ಅವರಂತಹ ಸ್ಟಾರ್ ನಾಯಕಿಯರೊಂದಿಗೆ ಡೇಟಿಂಗ್ನಲ್ಲಿದ್ದರು. ಮತ್ತೊಂದೆಡೆ, ಕಾಜೋಲ್ ಅವರ ಪತಿ ಅಜಯ್ ದೇವಗನ್, ಕರಿಷ್ಮಾ ಕಪೂರ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಆ ಸಮಯದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.
ಈ ಹಿನ್ನೆಲೆಯಲ್ಲಿ, ಕಾಜೋಲ್-ಟ್ವಿಂಕಲ್ ತಮ್ಮ ಹಿಂದಿನ ಪ್ರೇಮ ಸಂಬಂಧಗಳ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೂಲಕ ಹಿಂದಿ ವೀಕ್ಷಕರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದ್ದಾರೆ,(ಏಜೆನ್ಸೀಸ್).