ನವದೆಹಲಿ: ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಡೊನಾಲ್ಡ್ ಟ್ರಂಪ್ಗೆ ಭಾರತದಲ್ಲಿ ತುಸು ವಿಭಿನ್ನವಾಗಿ, ಅದ್ದೂರಿಯಾಗಿ ಸ್ವಾಗತ ಸಿಗುತ್ತಿದೆ.
ಡೊನಾಲ್ಡ್ ಟ್ರಂಪ್ ಬರುವಿಕೆಗಾಗಿ ಭಾರತ ಕಾಯುತ್ತಿರುವಂತೆ, ಅತ್ತ ಟ್ರಂಪ್ ಕೂಡ ಭಾರತವನ್ನು ತಲುಪಲು ತುಂಬ ಉತ್ಸುಕರಾಗಿದ್ದಂತೆ ತೋರುತ್ತದೆ. ನಿನ್ನೆಯಿಂದಲೂ ಟ್ವೀಟ್ ಮೂಲಕವೇ ಅದನ್ನು ಹೇಳುತ್ತಿದ್ದಾರೆ.
ಈಗ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಅದನ್ನೂ ಹಿಂದಿಯಲ್ಲಿ ಮಾಡಿರುವುದು ವಿಶೇಷ. ನಾವೆಲ್ಲ ಭಾರತದ ಭೇಟಿಗೆ ತುಂಬ ಉತ್ಸುಕರಾಗಿದ್ದೇವೆ. ಮಾರ್ಗ ಮಧ್ಯದಲ್ಲಿ ಇದ್ದೇವೆ. ಕೆಲವೇ ಹೊತ್ತಲ್ಲಿ ಭಾರತಕ್ಕೆ ಬಂದು ತಲುಪುತ್ತೇವೆ ಎಂದು ಟ್ರಂಪ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಟ್ರಂಪ್ ಟ್ವೀಟ್ ಮಾಡಿ ಕೆಲವೇ ನಿಮಿಷಗಳಲ್ಲಿ 30 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದಿದೆ. 8 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. (ಏಜೆನ್ಸೀಸ್)