ನ್ಯೂಸ್

ಅಂಗನವಾಡಿ ಕಾರ್ಯಕರ್ತೆಯರಿಗೆ ಕರೆ; ಕೋಲಾರದ ಕೇಂದ್ರಗಳಿಗೆ ನೇಮಕಾತಿ

ಬೆಂಗಳೂರು: ಗ್ರಾಮೀಣ ಮಕ್ಕಳ ಶುಷ್ರೂಶೆ ಕೇಂದ್ರವಾಗಿರುವ ಅಂಗನವಾಡಿಯು ಮಕ್ಕಳ ಹಸಿವು ಮತ್ತು ಅಪೌಷ್ಠಿಕತೆಯನ್ನು ನೀಗಿಸಲು ಇರುವ ಕೇಂದ್ರವಾಗಿದ್ದು, 1975ರಲ್ಲಿ ಪ್ರಾರಂಭಗೊಂಡಿತು. ಪ್ರಸ್ತುತ ಕೋಲಾರ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬಹುದು.

ಒಟ್ಟು ಹುದ್ದೆ: 513

ಯಾವ್ಯಾವ ಹುದ್ದೆಗೆ ಆಯ್ಕೆ?
ಅಂಗನವಾಡಿ ಕಾರ್ಯಕರ್ತೆ 120
ಅಂಗನವಾಡಿ ಸಹಾಯಕಿ 393

ಶೈಕ್ಷಣಿಕ ಅರ್ಹತೆ
ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ/ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಕನ್ನಡ ಭಾಷೆಯನ್ನು ಪ್ರಥಮ/ದ್ವಿತೀಯ ವಿಷಯವನ್ನಾಗಿ ಓದಿರಬೇಕು. ಹಾಗೆಯೇ, ಡಿಎಸ್‌ಇಆರ್‌ಟಿಯಿಂದ ಇಸಿಸಿಇ ಡಿಪ್ಲೋಮಾ ಕೋಸ್, ಜೆಒಸಿ ಕೋರ್ಸ್, ಎನ್‌ಟಿಟಿ ಕೋರ್ಸ್ ಹಾಗೂ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ನ್ಯೂಟ್ರಿಷಿಯನ್, ಹೊಂ ಸೈನ್ಸ್ ಸರ್ಟಿಫಿಕೇಟ್ ಕೋರ್ಸ್, ಒಂದು ವರ್ಷದ ನರ್ಸರಿ/ಪೂರ್ವ ಪ್ರಾಥಮಿಕ ತರಬೇತಿ ಪಡೆದಿರುವವರಿಗೆ ಬೋನಸ್ 5 ಅಂಕ ನೀಡಲಾಗುವುದು.

ಆದ್ಯತೆ: ಗ್ರಾಮಾಂತರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ಗ್ರಾಮದಲ್ಲಿ ವಾಸ್ತವ್ಯ ಹೊಂದಿರಬೇಕು. ನಗರ ಪ್ರದೇಶದ ಅಂಗನವಾಡಿ ಕೇಂದ್ರವಾದಲ್ಲಿ ಆಯಾ ಕಂದಾಯ ವಾರ್ಡ್‌ನಲ್ಲಿ ವಾಸ್ತವ್ಯ ಹೊಂದಿರಬೇಕು. ಸ್ಥಳೀಯರು ಎಂಬುದನ್ನು ದೃಢೀಕರಿಸಲು ಪೂರಕ ದಾಖಲೆಗಳಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನು ಪಡೆಯಬೇಕಿದೆ. ಆಸಿಡ್ ದಾಳಿಗೆ ಒಳಗಾದವರು, ವಿಧವೆಯರು, ಅಂಗವಿಕಲರಿಗೆ ಆದ್ಯತೆ ನೀಡಲಾಗುತ್ತದೆ.

ವೇತನ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ಪಾವತಿಸಲಾಗುತ್ತದೆ.

ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ತುಂಬಿದ್ದು, ಗರಿಷ್ಠ 35 ವರ್ಷದೊಳಗಿರಬೇಕು. ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಒದಗಿಸಲಾಗಿದೆ.

ಅರ್ಜಿ ವಿಧಾನ, ಶುಲ್ಕ
ಕೋಲಾರ ಡಬು ಡಬ್ಲ್ಯುಸಿಡಿಯಲ್ಲಿ ಲಭ್ಯವಿರುವ ಅಧಿಸೂಚನೆಯನ್ನು ಪರಿಶೀಲಿಸಿ, ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಶೈಕ್ಷಣಿಕೆ ಅರ್ಹತೆ, ವಯಸ್ಸುಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

ಅರ್ಜಿ ಇಲ್ಲಿ ಸಲ್ಲಿಸಿ
bit.ly/3Vp5B6x

ಆಯ್ಕೆ ಪ್ರಕ್ರಿಯೆ
ಮೆರಿಟ್ ಲಿಸ್ಟ್ ತಯಾರಿಸಿದ ನಂತರ ಸಂದರ್ಶನ ಮಾಡುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 19-04-2024

ಹೆಚ್ಚಿನ ವಿವರ
bit.ly/3TD0mPh