ಬೆಂಗಳೂರು: ಗ್ಯಾರಂಟಿ ಹೆಸರಲ್ಲಿ ಕೊಳ್ಳೆಹೊಡೆದಿರುವ ದುಡ್ಡನ್ನು ಇಟಲಿ ಮಾತೆಯ ಮಗಳನ್ನು ಗೆಲ್ಲಿಸಲು ಮತದಾರರಿಗೆ ರೇಷನ್ ಕಿಟ್ ಹಂಚುತ್ತಿದೆ(Ration Kit Distribution) ಎಂದು ಜೆಡಿಎಸ್ ಕಿಡಿಕಾರಿದೆ.
ವಯನಾಡಿನಲ್ಲಿ ಸಿಎಂ,ಡಿಸಿಎಂ ಭಾವಚಿತ್ರವಿರುವ ರೇಷನ್ ಕಿಟ್ ಹಂಚಿ ಕಾಂಗ್ರೆಸ್ ವಾಮಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಸರ್ಕಾರದ ಪರ್ಸೆಂಟೇಜ್ ಸಿಎಂ ಸಿದ್ದರಾಮಯ್ಯ ಹಾಗೂ ಕಲೆಕ್ಷನ್ ಗಿರಾಕಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೇರಳದ ವಯನಾಡು ಕ್ಷೇತ್ರದಲ್ಲಿ ಹೈಕಮಾಂಡ್‌ನ ಗುಲಾಮಗಿರಿಯನ್ನು ಜೋರಾಗಿಯೇ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.
ಮೊನ್ನೆಯಷ್ಟೆ ಏರ್‌ಪೋರ್ಟ್‌ನಲ್ಲಿ ಡಿಸಿಎಂ ಭೇಟಿಯಾಗಿದ್ದ ಹೈಕಮಾಂಡ್‌ನ ಕೇರಳದ ಏಜೆಂಟ್‌ಗೆ ದೊಡ್ಡ ಮೊತ್ತದ ಹಣ ಸಂದಾಯವಾಗಿದೆ. ವಯನಾಡಿನಲ್ಲಿ ಸ್ಪರ್ಧಿಸಿರುವ ಪ್ರಿಯಾಂಕ್ ಗಾಂಧಿ ಅವರನ್ನು ಗೆಲ್ಲಿಸಲು ಕರ್ನಾಟಕದ ಜನರ ತೆರಿಗೆ ಹಣವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಲೂಟಿಹೊಡೆದು ಕೇರಳಕ್ಕೆ ಕಳಿಸಲಾಗುತ್ತಿದೆ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟು ಮತಕೇಳುವ ಹಕ್ಕನ್ನು ಕಳೆದುಕೊಂಡಿರುವ ಕಾಂಗ್ರೆಸ್ ವಾಮಮಾರ್ಗದಲ್ಲಿ ಚುನಾವಣೆ ಎದುರಿಸುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.