ನ್ಯೂಸ್

ಜಾತ್ರೆಯಲ್ಲಿ ಭರ್ಜರಿ ಕಲ್ಲಂಗಡಿ ಹಣ್ಣು ಪ್ರಸಾದ ಸೇವೆ; ಸುಡುಬಿಸಿಲಿನಲ್ಲಿ ಪ್ರಸಾದಕ್ಕಾಗಿ ಜಮಾಯಿಸಿದ ಭಕ್ತರು...

lakshmihegde

ಹಾವೇರಿ: ಇಲ್ಲಿನ ಗಾಂಧಿ ವೃತ್ತದ ಬಳಿ ಗ್ರಾಮ ದೇವತೆ ಜಾತ್ರಾ ಮಹೋತ್ಸವದ ನಿಮಿತ್ತ ಕಲ್ಲಂಗಡಿ ಹಣ್ಣಿನ ಪ್ರಸಾದ ಸೇವೆ ನಡೆಯುತ್ತಿದ್ದು, ಪ್ರಸಾದಕ್ಕಾಗಿ ಭಕ್ತರು ಮುಗಿಬೀಳುತ್ತಿದ್ದಾರೆ.

ದೇವಿ ಜಾತ್ರೆ ನಿಮಿತ್ತ ಕಾಶಿ ಜಗದ್ಗುರು ಮಂಡಳಿಯಿಂದ ಕಲ್ಲಂಗಡಿ ಹಣ್ಣು ಪ್ರಸಾದ ಸೇವೆ ನಡೆಸಲಾಗುತ್ತಿದ್ದು, ಭಕ್ತರಿಗೆ ಹಣ್ಣು ನೀಡಲಾಗುತ್ತಿದೆ.

ಸುಡು ಬಿಸಿಲಿದ್ದು, ಕಲ್ಲಂಗಡಿ ಹಣ್ಣಿನ ಸೇವನೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು, ಪೊಲೀಸ್​ ಸಿಬ್ಬಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ.

ಜಗದ್ಗುರು ಸೇವಾ ಮಂಡಳಿ ಬರೋಬ್ಬರಿ ನಾಲ್ಕು ಕ್ವಿಂಟಲ್ ಹಣ್ಣು ವಿತರಣೆ ಮಾಡಿದೆ. (ದಿಗ್ವಿಜಯ ನ್ಯೂಸ್​)