ಚಾಮರಾಜನಗರ: ಬಾಕಿ ಸಂಬಳ ಕೊಡದಿದ್ದಕ್ಕೆ ಮನನೊಂದು ವಾಟರ್ ಮ್ಯಾನ್(Waterman) ಒಬ್ಬರು ಹೊಂಗನೂರು ಗ್ರಾಮ ಪಂಚಾಯಿತಿ ಕಚೇರಿಯ ಗೋಡೆಗೆ ಡೆತ್ ನೋಟ್ ಅಂಟಿಸಿ, ಕಿಟಕಿಗೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಪಂ ನೀರುಗಂಟಿ ಚಿಕ್ಕೂಸನಾಯಕ ಮೃತ. ಇದನ್ನು ಆತ್ಮಹತ್ಯೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ.
ಇದನ್ನೂ ಓದಿ:ಫುಡ್ ಆರ್ಡರ್ ಕಂಪನಿಗೆ ವಂಚಿಸಿ 2 ವರ್ಷಗಳಲ್ಲಿ 21 ಲಕ್ಷ ರೂ.ಆಹಾರ ಸೇವನೆ ಮಾಡಿದ ವ್ಯಕ್ತಿ! | Food Order
ಗೋಡೆ ಮೇಲೆ ಡೆತ್ ನೋಟ್ : ಶವ ನೇತಾಡುತ್ತಿರುವ ಗೋಡೆ ಪಕ್ಕದಲ್ಲೇ ಡೆತ್ ನೋಟ್ ಅಂಟಿಸಲಾಗಿದೆ. ಪೊಲೀಸರಿಗೆ ಪತ್ರ ಬರೆದಿರುವ ಚಿಕ್ಕಕೂಸನಾಯಕ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ನನಗೆ ಬರಬೇಕಾದ 27 ತಿಂಗಳ ಸಂಬಳ ಕೊಟ್ಟಿಲ್ಲ. ಪಿಡಿಒ ರಾಮೇಗೌಡ ಮತ್ತು ಅಧ್ಯಕ್ಷ ಕುಮಾರ್ ತುಂಬಾ ತೊಂದರೆ ಕೊಡುತ್ತಿದ್ದರು ಎಂಬುದು ಪತ್ರದ ಪ್ರಮುಖ ಸಾರಾಂಶವಾಗಿದೆ.
ಗ್ರಾಪಂ ಅವ್ಯವಸ್ಥೆ ತೆರೆದಿಟ್ಟಿದ್ದ ವಿಜಯವಾಣಿ
ಹೊಂಗನೂರು ಗ್ರಾಮ ಪಂಚಾಯತಿ ಸಮಸ್ಯೆಗಳ ಆಗರವಾಗಿದೆ. ಈ ಕುರಿತು ವಿಜಯವಾಣಿ ದಿನಪತ್ರಿಕೆಯಲ್ಲಿ ಅ.12ರಂದು ಅಶುಚಿತ್ವದ ತಾಣ ಹೊಂಗನೂರು ಗ್ರಾಪಂ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು.