ದೇವನಹಳ್ಳಿ: ವಾಟರ್ ಹೀಟರ್ ಮೈಮೇಲೆ ಬಿದ್ದು ಕರೆಂಟ್ ಶಾಕ್ ಪ್ರವಹಿಸಿ ತಾಯಿ ಮತ್ತು ಮಗ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ಮೂಲದ ತಾಯಿ ಜ್ಯೋತಿ ಮತ್ತು ಮಗ ಜಯಾನಂದ್(4) ಮೃತ ದುರ್ದೈವಿಗಳು. ಈ ಘಟನೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಮನೆಯ ಶೌಚಾಲಯದಲ್ಲಿ ತಾಯಿ ನೀರು ಕಾಯಿಸಲು ವಾಟರ್ ಹೀಟರ್ ಆನ್ ಮಾಡಲಾಗಿತ್ತು. ಈ ವೇಳೆ ಮಗ ಶೌಚಾಲಯದ ಒಳಗೆ ಹೋಗಿದ್ದು ಬಕೆಟ್ ಕೆಳಕ್ಕೆ ಬಿದ್ದು ದುರ್ಘಟನೆ ಸಂಭವಿಸಿದೆ. ಕರೆಂಟ್ ಶಾಕ್ನಿಂದ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಾಯಿಯೂ ಸಾವನ್ನಪ್ಪಿದ್ದಾರೆ.
ದಂಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ‘ರಸಗುಲ್ಲಾ ಚಹಾ’ ಬಗ್ಗೆ ಕೇಳಿದ್ದೀರಾ? ನಟ ಆಶಿಶ್ ವಿದ್ಯಾರ್ಥಿ ಹಂಚಿಕೊಂಡ ವೀಡಿಯೋ ಇಲ್ಲಿದೆ….