ಬೆಂಗಳೂರು ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ 2023-24ನೇ ಸಾಲಿನ ಮಾರ್ಚ್‌ವರೆಗೆ ಬಾಕಿ ಉಳಿಯುವ ವಿದ್ಯುತ್ ಮತ್ತು ನೀರಿನ ಬಿಲ್‌ಗಳ ಮೊತ್ತವನ್ನು ಭರಿಸುವಂತೆ ಸೂಚಿಸಿದ್ದ ಆದೇಶವನ್ನು ಶಾಲಾ ಶಿಕ್ಷಣ ಇಲಾಖೆಯು (ಸಮಗ್ರ ಶಿಕ್ಷಣ ಕರ್ನಾಟಕ) ವಾಪಸ್ ಪಡೆದಿದೆ.
ಈ ಮೂಲಕ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯುತ್ ಮೊತ್ತ ಪಾವತಿಸಬೇಕೆಂಬ ತಲೆನೋವನ್ನು ಕಡಿಮೆ ಮಾಡಿದೆ.
ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಿವೆ ಉಚಿತ ನೀರು ಮತ್ತು ವಿದ್ಯುತ್ ಸರಬರಾಜು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ರಾಜ್ಯೋತ್ಸವ ಕಾರ್ಮಕ್ರಮದಲ್ಲಿ ೋಷಿಸಿದ್ದರು. ಈ ೋಷಣೆಯನ್ನು ಜಾರಿಗೊಳಿಸುವ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಡಿ.15ರಂದು ಆದೇಶ ಹೊರಡಿಸಿತ್ತು.
2023-24ನೇ ಸಾಲಿನಲ್ಲಿ ಈಗಾಗಲೇ ಬಳಸಿರುವ ಮತ್ತು ಬಳಸಲಿರುವ ವಿದ್ಯುತ್ ಮತ್ತು ನೀರಿನ ಶುಲ್ಕ ಪಾವತಿಗಾಗಿ ಅಗತ್ಯವಿರುವ ಜಿಲ್ಲಾವಾರು ಅನುದಾನದ ಪ್ರಸ್ತಾವವನ್ನು ಶಾಲೆಗಳು ಇಲಾಖೆ ಆಯುಕ್ತರಿಗೆ ಮತ್ತು ಪಿಯು ಕಾಲೇಜುಗಳು ಇಲಾಖೆ ನಿರ್ದೇಶಕರಿಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಆದರೆ, ೆ.2ರಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಆದೇಶ ಹೊರಡಿಸಿದ್ದು, 2023-24ನೇ ಸಾಲಿನಲ್ಲಿ ಮಾರ್ಚ್‌ವರೆಗೆ ಬಾಕಿ ಉಳಿಯುವ ವಿದ್ಯುತ್ ಮತ್ತು ನೀರಿನ ಬಿಲ್ ಮೊತ್ತವನ್ನು ಭರಿಸುವಂತೆ ಸೂಚನೆ ನೀಡಿತ್ತು.