Plane Crash: ಅಹಮದಾಬಾದ್‌ನಲ್ಲಿ ಜೂ.12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಪ್ರಯಾಣಿಕರು ಸೇರಿದಂತೆ 270 ಜನರು ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಸ್ ಕುಮಾರ್ ರಮೇಶ್ ವಿಮಾನ ಪತನದ ವೇಳೆ ಬೃಹತ್ ಬೆಂಕಿ ಹರಡಿದಾಗ ಹಾಸ್ಟೆಲ್ನಿಂದ ಹೊರ ಬರುತ್ತಿರುವ ಹೊಸ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಜೂ.12ರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 242 ಜನರಲ್ಲಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ರಮೇಶ್ ಕೂಡ ಒಬ್ಬರು. ರಮೇಶ್ ಪ್ರಸ್ತುತ ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ನಾಯಕರು ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ:ಏರ್ ಇಂಡಿಯಾ ವಿಮಾನ ದುರಂತಕ್ಕೆ RAT ಕಾರಣ!; ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಮಾಜಿ ಪೈಲಟ್ ಕ್ಯಾಪ್ಟನ್ ಸ್ಟೀವ್!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ, 11A ನಲ್ಲಿ ಕುಳಿತಿದ್ದ ರಮೇಶ್ ಅವರು ವಿಮಾನ ಪತನದ ವೇಳೆ ಬಿಜೆ ವೈದ್ಯಕೀಯ ಕಾಲೇಜು ಕ್ಯಾಂಪಸ್‌ನಿಂದ ಹೊರಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಪಕ್ಕದಲ್ಲಿರುವ ಜನರು ಅಪಘಾತವನ್ನು ವೀಕ್ಷಿಸುತ್ತಿದ್ದಾರೆ ಮತ್ತು ಹಿನ್ನೆಲೆಯಲ್ಲಿ ದಟ್ಟವಾದ ಕಪ್ಪು ಹೊಗೆಯ ಆವರಿಸುತ್ತಿವೆ. ದಾರಿಹೋಕರಲ್ಲಿ ಒಬ್ಬರು ರಮೇಶ್ ಅವರನ್ನು ಗಮನಿಸಿ, ಅವರ ಬಳಿಗೆ ನಡೆದು, ಅವರ ಕೈ ಹಿಡಿದು ನಂತರ ಅಪಘಾತದ ಸ್ಥಳದಿಂದ ಅವರನ್ನು ಕರೆದುಕೊಂಡು ಹೋಗುತ್ತೀರುವ ವಿಡಿಯೋ ವೈರಲ್ ಆಗಿದೆ.(ಏಜೆನ್ಸೀಸ್)