ಬೆಂಗಳೂರು: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಭಾರತೀಯ ತಕ್ಕ ಪ್ರತ್ಯುತ್ತರ ನೀಡಿರುವ ನಡುವೆ ಅಕಸ್ಮಾತ್ ಯುದ್ಧ ಸಂಭವಿಸಿದರೆ ನಾಗರಿಕರು ಹೇಗೆ ತಮ್ಮನ್ನು ಸಂರಕ್ಷಿಸಿಕೊಳ್ಳಬೇಕೆಂಬ ಬಗ್ಗೆ ಹಲಸೂರಿನ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಪ್ರಧಾನ ಕಚೇರಿ ಆವರಣದಲ್ಲಿ ಬುಧವಾರ ಕೇಂದ್ರ ರಕ್ಷಣಾ ಇಲಾಖೆ ಹಾಗೂ ಗೃಹ ಇಲಾಖೆ ನಿರ್ದೇಶನದ ಮೇರೆಗೆ ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು. ‘ಆಪರೇಷನ್ ಅಭ್ಯಾಸ್’ ಹೆಸರಿನಲ್ಲಿ ನಾಗರಿಕರ ರಕ್ಷಣೆ, ಪ್ರಾಥಮಿಕ ಚಿಕಿತ್ಸೆ, ರಕ್ಷಣಾ ಕಾರ್ಯಾಚರಣೆ ಬಗ್ಗೆ ಅಣಕು ಪ್ರದರ್ಶನ ಮಾಡಲಾಯಿತು.
ಕೆರೆಯಲ್ಲಿ ಮಾಕ್ ಡ್ರಿಲ್: ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್, ಗೃಹರಕ್ಷಕದಳ, ಪೊಲೀಸರು, ಸಿವಿಲ್ ಡಿಫೆನ್ಸ್, ಎನ್‌ಸಿಸಿ ಕೆಡೆಟ್‌ಗಳು, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೆಡೆಟ್‌ಗಳು ಮಾಕ್ ಡ್ರಿಲ್‌ನಲ್ಲಿ ಭಾಗವಹಿಸಿದ್ದವು. ಮೊದಲಿಗೆ ಎರಡು ನಿಮಿಷ ಸೈರನ್ ಮೊಳಗಿಸುವುದರೊಂದಿಗೆ ಹಲಸೂರು ಕೆರೆಯಲ್ಲಿ ಮಾಕ್ ಡ್ರಿಲ್ ಆರಂಭವಾಯಿತು. ಕೆರೆಯ ದ್ವೀಪದಲ್ಲಿ ಸಿಲುಕಿದ್ದ ನಾಗರಿಕರನ್ನು ಬೋಟ್ ಮುಖಾಂತರ ರಕ್ಷಣೆ ಮಾಡಲಾಯಿತು,
ಕಟ್ಟಡದ ಮೇಲೆ ಬಾಂಬ್ ದಾಳಿಯಿಂದ ಬೆಂಕಿ ಹೊತ್ತಿ ಉರಿಯುತ್ತಿರುವ ಸನ್ನಿವೇಶ ಸೃಷ್ಟಿಸಿ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಂದಿಸಿ ಕಟ್ಟಡದೊಳಗೆ ಸಿಲುಕಿದ್ದ ಸಾರ್ವಜನಿಕರು ಹಾಗೂ ಗಾಯಾಳುಗಳನ್ನು ರಕ್ಷಣೆ ಮಾಡಿ ಹೊರಗೆ ತರುವ ಹಾಗೂ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವ ಅಣಕು ಪ್ರದರ್ಶನ ಮಾಡಿದರು. ಇದೇ ವೇಳೆ ಬಹುಮಹಡಿ ಕಟ್ಟಡದೊಳಗೆ ಸಿಲುಕಿದ್ದ ಜನರಲ್ಲಿ ಏರಿಯಲ್ ಲ್ಯಾಡರ್ ಮುಖಾಂತರ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಗಾಯಾಳುಗಳು ಹಾಗೂ ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ಆಸ್ಪತ್ರೆಗೆ ಸಾಗಿಸಿದರು.
ಬ್ಲ್ಯಾಕ್ ಔಟ್ ಡ್ರಿಲ್ :
ರಾತ್ರಿ ವೇಳೆ ವೈಮಾನಿಕ ದಾಳಿಯಾದರೆ, ಸಾರ್ವಜನಿಕರು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಅರಿವು ಮೂಡಿಸಲು 7.10ಕ್ಕೆ ಬ್ಲ್ಯಾಕ್ ಔಟ್ ಅಣಕು ಪ್ರದರ್ಶನ ಮಾಡಲಾಯಿತು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪ್ರಧಾನ ಕಚೇರಿಯ ವಿದ್ಯುತ್ ದೀಪ ಆ್ ಮಾಡಿ ಅಣಕು ಪ್ರದರ್ಶನ ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ಜಾಗೃತಿ
ಯುದ್ಧ ಸನ್ನಿವೇಶದಲ್ಲಿ ಸ್ವಯಂರಕ್ಷಣೆ ಜತೆಗೆ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಶಾಲಾ-ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. ದೇಶದಲ್ಲಿ ಯುದ್ಧದ ಛಾಯೆ ಆವರಿಸಿದೆ. ಇದಕ್ಕೆ ನಾವೆಲ್ಲ ತಯಾರಿ ಮಾಡಿಕೊಳ್ಳಬೇಕು. ‘ಆಪರೇಷನ್ ಅಭ್ಯಾಸ್’ ಮೂಲಕ ನಾಗರಿಕರ ರಕ್ಷಣೆ ನಡೆಯುತ್ತಿದೆ ಎಂದರು.
ಸಂಸದ ಡಾ.ಕೆ.ಸುಧಾಕರ್, ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್, ಅಗ್ನಿ ಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಗೃಹ ಇಲಾಖೆ ಕಾರ್ಯದರ್ಶಿ ಎಸ್.ರವಿ ಇದ್ದರು.
ಸೈರನ್ ಮೊಳಗಿದಾಗ ಏನು ಮಾಡಬೇಕು :
ದೇಶದ ವಾಯು ಗಡಿಯನ್ನು ಅಪರಿಚಿತ ಏರ್ ಕ್ರ್‌ಟಾ ದಾಟಿ ಒಳನುಗ್ಗಿದರೇ ಭಾರತೀಯ ವಾಯು ಸೇನೆಯಿಂದ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ಬರಲಿದೆ. ಆಗ ಸೈರನ್ ಮೊಳಗಲಿದ್ದು, ಜನರು ಗಾಬರಿಗೊಳ್ಳಬಾರದು. ಸಿಮೆಂಟ್ ಕಟ್ಟಡದ ಒಳಗೆ ಸೇರಿಕೊಳ್ಳಬೇಕು. ವಿದ್ಯುತ್ ದೀಪ ಆ್ ಮಾಡಿ, ಕಿಟಕಿ ಕರ್ಟನ್ ಮುಚ್ಚಬೇಕು.
ವಾಯು ದಾಳಿ ನಡೆದರೆ ಅಗತ್ಯ ಇರುವ ಔಷಧದ ಕಿಟ್, ಪವರ್ ಬ್ಯಾಂಕ್, ಟಾರ್ಚ್, ತೆಳ್ಳನೆಯ ಹತ್ತಿಬಟ್ಟೆ, ಹೆಲ್ಪ್‌ಲೈನ್ ನಂಬರ್, ಆಪ್ತರು, ಸ್ನೇಹಿತರ ಮೊಬೈಲ್ ನಂಬರ್ ಒಳಗೊಂಡ ಪುಸ್ತಕ, ೆನ್ ಚಾರ್ಜಿಂಗ್ ಇಟ್ಟುಕೊಳ್ಳಬೇಕು. ಮತ್ತೊಂದು ಸೈರನ್ ಮೊಳಗಿದಾಗ ನಿಧಾನವಾಗಿ ಹೊರಬರಬೇಕು. ವಿದ್ಯುತ್ ತಂತಿ, ನೀರಿನ ಪೈಪ್ ಕಟ್ ಆಗಿರುವುದನ್ನು ಗಮನಿಸಬೇಕು. ಕಟ್ಟಡ ಕುಸಿದಿರುವ ಸ್ಥಳ ಗುರುತಿಸಿ ಸಿಲುಕಿದವರ ರಕ್ಷಣೆ ಮಾಡಬೇಕು.
ಅಪಾರ್ಟ್‌ಮೆಂಟ್ ಅಥವಾ ಬಹುಮಹಡಿ ಕಟ್ಟಡಗಳಲ್ಲಿ ಇರುವರು ಲ್‌ಟಿ ಬಳಸದೆ ಮೆಟ್ಟಿಲು ಮೂಲಕ ಹೊರಬರಬೇಕು. ವಯಸ್ಸಾದವರು, ರೋಗಿಗಳನ್ನು ಆದಷ್ಟು ನೆಲಮಹಡಿಯಲ್ಲಿ ಇರುವರ ಜೊತೆಯಲ್ಲಿ ಇರಿಸುವುದು ಒಳಿತು.
ಸಮವಸ ಪಡೆಗಳು ಮತ್ತು ಸಿವಿಲ್ ಡೀೆನ್ಸ್ ಸಹಯೋಗದಲ್ಲಿ ರಾಜ್ಯದ ನಿಗದಿತ ಸ್ಥಳಗಳಲ್ಲಿ ಮಾಕ್ ಡ್ರಿಲ್ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಣಕು ಪ್ರದರ್ಶನ ನಡೆಸಲು ಚಿಂತಿಸಲಾಗಿದೆ.
ಪ್ರಶಾಂತ್ ಕುಮಾರ್ ಠಾಕೂರ್, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ