ದಿನವಿಡೀ ಫ್ರೆಶ್‌ ಆಗಿರಲು ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡಿ! 
ನ್ಯೂಸ್

ದಿನವಿಡೀ ಉತ್ಸಾಹದಿಂದ ಇರಬೇಕಾ?; ಬೆಳಗ್ಗೆ ಎದ್ದ ತಕ್ಷಣ ಈ 7 ಕೆಲಸ ಮಾಡಿ! | Morning Routine

ಬೆಳಗ್ಗೆ ಎದ್ದ ತಕ್ಷಣ ರೂಢಿಸಿಕೊಳ್ಳುವ ಕೆಲವು ಸರಳ ಅಭ್ಯಾಸಗಳು ದಿನವಿಡೀ ಚೈತನ್ಯದಿಂದ ಇರಲು ಸಹಾಯ ಮಾಡಬಹುದು. ನೀರು ಕುಡಿಯುವುದರಿಂದ ಹಿಡಿದು ಧ್ಯಾನದವರೆಗೆ, ಪಾಲಿಸಬಹುದಾದ 7 ಸುಲಭ ಅಭ್ಯಾಸಗಳು ಇಲ್ಲಿವೆ.

Morning Habits: ದಿನವನ್ನು ಹೇಗೆ ಶುರು ಮಾಡುತ್ತೇವೆ ಅನ್ನೋದು ನಮ್ಮ ದೇಹದ ಚಟುವಟಿಕೆ ಹಾಗೂ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ದಿನವನ್ನು ಚುರುಕಾಗಿ ಹಾಗೂ ನೆಮ್ಮದಿಯಿಂದ ಆರಂಭಿಸಲು ಸಹಾಯವಾಗಬಹುದು.

ಒಂದು ಲೋಟ ನೀರಿನಿಂದ ದಿನ ಶುರು ಮಾಡಿ

ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ನಿದ್ರೆಯ ಬಳಿಕ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರಲು ಸಹಾಯವಾಗುತ್ತದೆ.

ಲಘು ಸ್ಟ್ರೆಚಿಂಗ್ ಮಾಡಿ

ಹಾಸಿಗೆಯಿಂದ ಎದ್ದ ಬಳಿಕ ಕೈ-ಕಾಲು ಹಾಗೂ ದೇಹವನ್ನು ನಿಧಾನವಾಗಿ ಸ್ಟ್ರೆಚ್ ಮಾಡಿ. ಕೆಲ ನಿಮಿಷಗಳ ಲಘು ವ್ಯಾಯಾಮ ಅಥವಾ ಸ್ಟ್ರೆಚಿಂಗ್ ಮಾಡುವುದರಿಂದ ದೇಹ ಚುರುಕಾಗಲು ಸಹಾಯವಾಗಬಹುದು.

ಈ ದಿನ ಏನು ಮಾಡಬೇಕು ಎನ್ನುವುದನ್ನು ಪಟ್ಟಿ ಮಾಡಿ

ಬೆಳಗಿನ ಸೂರ್ಯನ ಬೆಳಕು ಅಗತ್ಯ

ಎದ್ದ ಬಳಿಕ ಕಿಟಕಿ ಅಥವಾ ಬಾಗಿಲು ತೆರೆದು ಸ್ವಲ್ಪ ಹೊತ್ತು ನೈಸರ್ಗಿಕ ಬೆಳಕಿನಲ್ಲಿ ಇರಿ. ಬೆಳಗಿನ ಬೆಳಕು ದೇಹದ ನಿದ್ರೆ-ಎಚ್ಚರಿಕೆಯ ಸಹಜ ಚಕ್ರಕ್ಕೆ ಹೊಂದಿಕೊಳ್ಳಲು ನೆರವಾಗಬಹುದು.

ಎದ್ದ ತಕ್ಷಣ ಮೊಬೈಲ್ ನೋಡಬೇಡಿ

ಬೆಳಗ್ಗೆ ಎದ್ದ ಕೂಡಲೇ ಸೋಶಿಯಲ್ ಮೀಡಿಯಾ, ಮೆಸೇಜ್ ಅಥವಾ ಇಮೇಲ್‌ಗಳನ್ನು ನೋಡುವುದನ್ನು ತಪ್ಪಿಸಿ. ಕೆಲ ಸಮಯ ಫೋನ್‌ನಿಂದ ದೂರವಿದ್ದು ದಿನವನ್ನು ಶಾಂತವಾಗಿ ಆರಂಭಿಸುವುದು ಉತ್ತಮ.

5–10 ನಿಮಿಷ ಧ್ಯಾನ ಮಾಡಿ

ಬೆಳಗ್ಗೆ 5ರಿಂದ 10 ನಿಮಿಷ ಶಾಂತವಾಗಿ ಕುಳಿತು ಆಳವಾಗಿ ಉಸಿರಾಡಿ. ಧ್ಯಾನ ಅಥವಾ ಉಸಿರಾಟದ ಸರಳ ಅಭ್ಯಾಸ ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡಬಹುದು.

ಬೆಳಗ್ಗೆ ಶಾಂತವಾಗಿ ಕುಳಿತು ಆಳವಾಗಿ ಉಸಿರಾಡಿ

ಕೃತಜ್ಞತೆಯ ಭಾವನೆ ಬೆಳೆಸಿಕೊಳ್ಳಿ

ನಿಮ್ಮ ಜೀವನದಲ್ಲಿರುವ ಒಳ್ಳೆಯ ಸಂಗತಿಗಳ ಬಗ್ಗೆ ಕೆಲ ನಿಮಿಷ ಯೋಚಿಸಿ. ಈ ಅಭ್ಯಾಸ ದಿನವನ್ನು ಸಕಾರಾತ್ಮಕ ಮನೋಭಾವದಿಂದ ಆರಂಭಿಸಲು ನೆರವಾಗಬಹುದು.

ದಿನದ ಕೆಲಸಗಳನ್ನು ಪ್ಲಾನ್ ಮಾಡಿ

ಎದ್ದ ತಕ್ಷಣ ಹಾಸಿಗೆಯನ್ನು ನೀಟಾಗಿ ಜೋಡಿಸಿ. ಬಳಿಕ ಆ ದಿನ ಮಾಡಬೇಕಿರುವ 2–3 ಪ್ರಮುಖ ಕೆಲಸಗಳನ್ನು ಮೊದಲೇ ನಿರ್ಧರಿಸಿಕೊಳ್ಳಿ. ಇದರಿಂದ ದಿನದ ಕೆಲಸಗಳನ್ನು ಒಂದು ಕ್ರಮದಲ್ಲಿ ಆರಂಭಿಸಲು ಅನುಕೂಲವಾಗುತ್ತದೆ.

ಇದನ್ನೂ ಓದಿ: ಸುಲಭವಾಗಿ ಹಣ ಗಳಿಸುವ ಆಸೆಗೆ ಡ್ರಗ್ಸ್ ದಂಧೆ; ಪಾಕ್‌ನಿಂದ 4 ಕೆಜಿ ಹೆರಾಯಿನ್ ತರಿಸಿದ್ದ 3 ಫ್ರೆಂಡ್ಸ್ ಅರೆಸ್ಟ್! | Pakistan Drone Drugs

ಸಣ್ಣ-ಸಣ್ಣ ಬದಲಾವಣೆಗಳೇ ಉತ್ತಮ ದಿನಚರಿಗೆ ಅಡಿಪಾಯ. ಹಾಗಾಗಿ ಬೆಳಗಿನ ಈ ಸರಳ ಅಭ್ಯಾಸಗಳನ್ನು ಒಂದೊಂದಾಗಿ ನಿಮ್ಮ ದಿನಚರಿಯಲ್ಲಿ ರೂಢಿಸಿಕೊಳ್ಳಿ.