ನವದೆಹಲಿ: 2025ರ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ದೇಶದ ಅತ್ಯುನ್ನತ ಕಂಪನಿ ಎಂಬ ಹೆಗ್ಗಳಿಕೆಯನ್ನು ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಉಳಿಸಿಕೊಂಡಿದೆ. ಈ ಸಲದ ಪಟ್ಟಿಯಲ್ಲಿ ರಿಲಯನ್ಸ್ 88ನೇ ಸ್ಥಾನದಲ್ಲಿದೆ. 2024ರಲ್ಲಿ 86ನೇ ಸ್ಥಾನದಲ್ಲಿತ್ತು. ಅಮೆರಿಕದ ವಾಲ್ವಾರ್ಟ್ ವಿಶ್ವದ ಅಗ್ರಗಣ್ಯ ಕಂಪನಿಯಾಗಿ ಮುಂದುವರಿದಿದ್ದು, ಅಮೆಜಾನ್ 2ನೇ ಸ್ಥಾನದಲ್ಲಿದೆ. ಮೊದಲ 10 ಸ್ಥಾನಗಳಲ್ಲಿ 3 ಚೀನಾ ಕಂಪನಿಗಳಿವೆ. ಸೌದಿಯ ಅರಾಮ್ಕೊ 4ನೇ ಸ್ಥಾನದಲ್ಲಿದ್ದರೆ, ಆಪಲ್ 8ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿರುವ ಭಾರತದ 9 ಕಂಪನಿಗಳು ಮತ್ತು ಅವುಗಳ ಸ್ಥಾನ ಇಂತಿವೆ. ಎಲ್ಐಸಿ (95), ಐಒಸಿ (127), ಎಸ್ಬಿಐ (163), ಎಚ್ಡಿಎಫ್ಸಿ ಬ್ಯಾಂಕ್ (258), ಒಎನ್ಜಿಸಿ (181) ಟಾಟಾ ಮೋಟರ್ಸ್ (283), ಬಿಪಿಸಿಎಲ್ (285), ಐಸಿಐಸಿಐ ಬ್ಯಾಂಕ್ (464).