ನ್ಯೂಸ್

18 ರಂದು ನೇರ ಸಂದರ್ಶನ

ಬಾಬುರಾವ ಯಡ್ರಾಮಿ


ಕಲಬುರಗಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಜ.೧೭ರಂದು ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೨ರವರೆಗೆ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ. ಐಸಿಐಸಿಐ ಬ್ಯಾಂಕ್‌ದಲ್ಲಿ ರಿಲೇಷನ್‌ಶಿಪ್ ಮ್ಯಾನೇಜರ್ (ಗ್ರೇಡ್: ಸಿನಿಯರ್ ಆಫೀಸರ್) ಹುದ್ದೆಗೆ ಯಾವುದೇ ಪದವಿ (ಬಿ.ಇ./ಬಿ.ಟೆಕ್. ಆಂಡ್ ಎಂಬಿಎ ಪದವೀದವರನ್ನು ಹೊರತುಪಡಿಸಿ) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ ೧೮ ರಿಂದ ೨೫ ವರ್ಷದೊಳಗಿರಬೇಕು. ಆಸಕ್ತರು ಬಯೋಡೆಟಾ, ದಾಖಲೆಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬೇಕು. ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ೦೮೪೭೨-೨೭೪೮೪೬, ೮೦೦೩೩೪೩೯೪೪ ಸಂಪರ್ಕಿಸಿ.