ನ್ಯೂಸ್

ನೀವು ವೈದ್ಯಕೀಯ ಶಿಕ್ಷಣ ಪಡೆದಿದ್ದೀರಾ? ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿದೆ ಮೆಡಿಕಲ್ ಜಾಬ್

ಹಾವೇರಿ: ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಈಗಾಗಲೇ ಸ್ಕೈಪ್ ಮೂಲಕ ನೇರ ಸಂದರ್ಶನ ನಡೆದಿದ್ದು ಜೂನ್ 2 ರ ವರೆಗೂ ಮುಂದುವರಿಯಲಿದೆ.

ರಿಸರ್ಚ್ ಸೈಂಟಿಸ್ಟ್ - ಮೆಡಿಕಲ್- 1, ನಾನ್ ಮೆಡಿಕಲ್-1, ರಿಸರ್ಚ್ ಅಸಿಸ್ಟೆಂಟ್ -1 ಹಾಗೂ ಲ್ಯಾಬ್ ಟೆಕ್ನೀಷಿಯನ್-2 ಹುದ್ದೆಗಳಿವೆ.

ಎಂಬಿಬಿಎಸ್, ಎಂಡಿ, ಎಂಎಸ್ಸಿ, ಪಿಎಚ್​ಡಿ, ಬಿಎಸ್​​ಸಿ, ಎಂಎಲ್​​ಟಿ/ ಪಿಯುಸಿ -ಡಿಎಂಎಲ್​​ಟಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ಕಡ್ಡಾಯವಾಗಿ ಮಾಲಿಕ್ಯೂಲಾರ್ ವೈರಾಲಜಿ ವಿಷಯದಲ್ಲಿ ಕಾರ್ಯಾನುಭವ ಹೊಂದಿರಬೇಕು.

ಹುದ್ದೆಗಳಿಗನುಗುಣವಾಗಿ 65 ಸಾವಿರ ರೂ, 60 ಸಾವಿರ ರೂ, 30 ಸಾವಿರ ರೂ ಹಾಗೂ 25 ಸಾವಿರ ರೂ. ಗೌರವ ಧನ ನೀಡಲಾಗುತ್ತದೆ.

ಸ್ಕೈಪ್ ಸಂದರ್ಶನಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 2 ರೊಳಗಾಗಿ deo.haveri@gmail.com ಗೆ ಆಸಕ್ತಿ ಹುದ್ದೆ ತಿಳಿಸಿ ವಿನಂತಿ ಪತ್ರ ಜತೆಗೆ ಭರ್ತಿ ಮಾಡಿದ ಅರ್ಜಿ, ಅಗತ್ಯ ದಾಖಲಾತಿಗಳನ್ನು ಮೇಲ್​​ಗೆ ಅಪ್​ಲೋಡ್ ಮಾಡಬೇಕು. ಅರ್ಜಿ ನಮೂನೆಯನ್ನು haveri.nic.in ಮೂಲಕ ಡೌನ್​​ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ https://haveri.nic.in