ನ್ಯೂಸ್

ದಿನಕ್ಕೆ 8 ಗಂಟೆ ನಿದ್ರಿಸಿ 10 ಲಕ್ಷ ರೂ. ಸಂಪಾದಿಸಿ! ಇಲ್ಲಿದೆ ಭರ್ಜರಿ ಆಫರ್​, ಅರ್ಜಿ ಸಲ್ಲಿಸುವುದು ಹೇಗೆ?

ನಿದ್ದೆ ಮಾಡುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆರೋಗ್ಯಕರ ಜೀವನಕ್ಕೆ ನಿದ್ರೆ ತುಂಬಾ ಅವಶ್ಯಕ ಎಂಬುದು ಎಲ್ಲರಿಗೂ ಗೊತ್ತು. ಉತ್ತಮ ಆರೋಗ್ಯಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು ಎನ್ನುತ್ತಾರೆ ತಜ್ಞರು. ಆದರೆ, ಅದೇ 8 ಗಂಟೆಗಳ ಕಾಲ ನಿದ್ರೆ ಮಾಡಿದರೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು ಅಂದರೆ ನಂಬುತ್ತೀರಾ? ಖಂಡಿತ ನಂಬುವುದಿಲ್ಲ.

ಕೆಲಸದ ಸಮಯದಲ್ಲಿ ನಿದ್ರೆ ಮಾಡಿ ಕೆಲಸ ಕಳೆದುಕೊಂಡ ಉದಾಹರಣೆಗಳಿವೆ. ಆದರೆ, ನಿದ್ರೆ ಮಾಡಿ ಸಂಪಾದಿಸಬಹುದು ಅಂದರೆ ನಿಜಕ್ಕೂ ಸೋಜಿಗದ ಸಂಗತಿಯೇ ಸರಿ. ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಕಂಪನಿ "ವೇಕ್‌ಫಿಟ್" ಇಂಥದ್ದೊಂದು ಭರ್ಜರಿ ಆಫರ್​ ನೀಡಿದೆ.

ವೇಕ್​ಫಿಟ್​ ಒಂದು ಹಾಸಿಗೆ ಕಂಪನಿಯಾಗಿದ್ದು, ಇದು ಭಾರತದ ಪ್ರಮುಖ ಹೋಮ್​ ಅಂಡ್​ ಸ್ಲೀಪ್​ ಸಲ್ಯೂಷನ್​ ಬ್ರಾಂಡ್​ ಆಗಿದೆ. ವೇಕ್‌ಫಿಟ್‌ ಕಂಪನಿ ತಯಾರಿಸುವ ಹಾಸಿಗೆಯಲ್ಲಿ ಮಲಗಿ, ನಿದ್ರೆ ಹೇಗೆ ಬರುತ್ತದೆ ಎಂದು ಅಭಿಪ್ರಾಯ ಹಂಚಿಕೊಳ್ಳುವುದೇ ನೀವು ಮಾಡಬೇಕಾಗಿರುವ ಕೆಲಸ. ಈ ಕಂಪನಿ ಇಂಥದ್ದೊಂದು ಕೆಲಸದ ಆಫರ್​ ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ಜಾಬ್​ ಆಫರ್​ ನೀಡಿತ್ತು.

ವೇಕ್​ಫಿಟ್​ ಕಂಪನಿಯು ತನ್ನ ಸೋಶಿಯಲ್​ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ನಲ್ಲಿ ಉದ್ಯೋಗ ವಿವರಣೆಯನ್ನು ಹಂಚಿಕೊಂಡಿದ್ದು, ಈ ಕೆಳಕಂಡಂತಿದೆ.

* ಉದ್ಯೋಗ: ವೃತ್ತಿಪರ ಸ್ಲೀಪ್ ಇಂಟರ್ನ್

* ಸ್ಥಳ: ವರ್ಕ್​ ಫ್ರಮ್​ ಬೆಡ್​ (WFB)

* ಅವಧಿ: 2 ತಿಂಗಳು

* ಸ್ಟೈಫೆಂಡ್​: 1 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ

* ಆಯ್ದ ಸ್ಲೀಪ್‌ ಇಂಟರ್ನ್‌ಗಳಿಗೆ 1 ಲಕ್ಷ ರೂ. ಸಂಬಳ

* ವರ್ಷದ ಸ್ಲೀಪ್‌ ಚಾಂಪಿಯನ್‌ ಎಂದು ಗುರುತಿಸಲ್ಪಟ್ಟ ಇಂಟರ್ನ್‌ಗೆ 10 ಲಕ್ಷದ ವರೆಗೆ ಸಂಬಳ ಸಿಗುತ್ತದೆ.

ಇಂಟರ್ನ್‌ಶಿಪ್​ನಲ್ಲಿ ಏನು ಮಾಡಬೇಕು?

* ಪ್ರತಿ ರಾತ್ರಿ 8 ರಿಂದ 9 ಗಂಟೆಗಳ ಕಾಲ ವೇಕ್​ಫಿಟ್​ ಹಾಸಿಗೆಯಲ್ಲಿ ಶ್ರದ್ಧೆಯಿಂದ ನಿದ್ರಿಸುವುದು

* ಹಗಲಿನಲ್ಲಿ 20 ನಿಮಿಷಗಳ ಕಿರು ನಿದ್ರೆ (ಪವರ್ ನ್ಯಾಪ್) ಮಾಡುವುದು

* ಸಾಂದರ್ಭಿಕವಾಗಿ ವಾರಾಂತ್ಯದಲ್ಲಿ ಮಲಗುವ ಸಮಯ ವಿಸ್ತರಿಸಬೇಕಾಗಬಹುದು

* 'ಸ್ಲೀಪ್ ಚಾಂಪಿಯನ್' ಆಗಿ ಬಡ್ತಿ ಪಡೆಯಲು ಅನುಭವಿ 'ಸ್ಲೀಪ್ ಮೆಂಟರ್'ಗಳಿಂದ ನಡೆಯುವ ಕಾರ್ಯಾಗಾರಗಳಿಗೆ ತಪ್ಪದೇ ಹಾಜರಾಗುವುದು

ಆದರ್ಶ ಅಭ್ಯರ್ಥಿಗಳು ಹೇಗಿರಬೇಕು?

* ಪ್ರತಿ ರಾತ್ರಿ ಒಂದೇ ಸಮಯದಲ್ಲಿ ಹಾಸಿಗೆಯಲ್ಲಿ ಮಲಗಬೇಕು

* ನಿದ್ರೆ ಮತ್ತು ದೈನಂದಿನ ಜೀವನದ ಸಮತೋಲವನ್ನು ಕಾಯ್ದುಕೊಳ್ಳಬೇಕು

* ಆಫೀಸ್​ ಫೋನ್​ ಕರೆಗಳು ಹಾಗೂ ಸಾಮಾಜಿಕ ಯೋಜನೆಗಳನ್ನು ತಪ್ಪಿಸಲು ಅಚಲವಾದ ಶಿಸ್ತು ಪ್ರದರ್ಶನ ಮಾಡಬೇಕು

* ವೇಕ್‌ಫಿಟ್ ಅತ್ಯಾಧುನಿಕ ಹಾಸಿಗೆಗಳ ಮೇಲೆ ಮಲಗುವಾಗ ಎಲ್ಲ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕು

ಅಭ್ಯರ್ಥಿಯ ಅರ್ಹತೆ

* ಪ್ರತಿರಾತ್ರಿ ಒಂದೇ ಸಮಯಕ್ಕೆ ಮಲಗುವವರು ಅರ್ಜಿ ಸಲ್ಲಿಸಬಹುದು.

* 22 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.

* ನಿದ್ದೆ ಮಾಡುವುದನ್ನು ಇಷ್ಟಪಡುವವರಾಗಿಬೇಕು

* ಯಾವುದೇ ವಿಭಾದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪಡೆದಿರಬೇಕು.

ನಿದ್ರೆ ಮಾಡಿ ಸಂಪಾದಿಸುವ ಉದ್ಯೋಗದಲ್ಲಿ ನೀವು ಆಸಕ್ತಿಯನ್ನು ಹೊಂದಿದ್ದರೆ ವೇಕ್‌ಫಿಟ್‌ ಅವರ ಅಫೀಶಿಯಲ್‌ ಲಿಂಕ್ಡ್‌ಇನ್‌ ಪುಟದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. (ಏಜೆನ್ಸೀಸ್)