ನವದೆಹಲಿ: ಬಾಲಿವುಡ್ನ ಸಂಗೀತ ನಿರ್ದೇಶಕ, ಗಾಯಕ ದಿ. ವಾಜಿದ್ ಖಾನ್ ಅವರ ತಾಯಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಕಿಡ್ನಿ ಸೋಂಕು ಸೇರಿ ಇತರ ಸಮಸ್ಯೆಯಿಂದ ಬಳಲುತ್ತಿದ್ದ ವಾಜಿದ್ ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನನ್ನು ನೋಡಿಕೊಳ್ಳಲೆಂದು ತಾಯಿ ರಾಜಿನಾ ಖಾನ್ ಆಸ್ಪತ್ರೆಯಲ್ಲೇ ಇದ್ದರು. ಆ ವೇಳೆ ತಾಯಿಗೆ ಸೋಂಕು ತಗುಲಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿರಿ ಬಾಲಿವುಡ್ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ
ವಾಜೀದ್ಗೆ ಕಿಡ್ನಿ ಸಮಸ್ಯೆ ಇತ್ತು. ಜತೆಗೆ ಹೃದ್ರೋಗವೂ ಕಾಣಿಸಿಕೊಂಡು ಚಿಕಿತ್ಸೆ ಫಲಿಸದೆ ಸೋಮವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು ಎಂದು ಅವರ ಸಹೋದರ ಸಾಜಿದ್ ತಿಳಿಸಿದ್ದಾರೆ. ಅಂದು ಮಧ್ಯಾಹ್ನವೇ ವಾಜೀದ್ ಅಂತ್ಯಸಂಸ್ಕಾರ ನೆರವೇರಿಸಿದ್ದು, ಕುಟುಂಬಸ್ಥರು ಮತ್ತು ಆಪ್ತರು ಸೇರಿ 20 ಮಂದಿಯಷ್ಟೇ ಪಾಲ್ಗೊಂಡಿದ್ದರು ಎಂದು ವಿವರಿಸಿದ್ದಾರೆ.