ಆಂಧ್ರಪ್ರದೇಶ: ಟಾಲಿವುಡ್ನ ಪವರ್ ಸ್ಟಾರ್, ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ 'ಓಜಿ' ಚಿತ್ರದ ಬಗ್ಗೆ ಇದೀಗ ಕುತೂಹಲಕಾರಿ ಮಾಹಿತಿಗಳು ಹೊರಬೀಳುತ್ತಿವೆ. ಸದ್ಯ ಸೆಪ್ಟಂಬರ್ 02 ರಂದು ನಟನ ಹುಟ್ಟುಹಬ್ಬಕ್ಕೆ ಚಿತ್ರತಂಡ ಟೀಸರ್ ಅಥವಾ ಫಸ್ಟ್ ಲುಕ್ ಅನಾವರಣಗೊಳಿಸಲಿದೆ ಎಂದು ನಿರೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಈಗ ಚಿತ್ರ ತಯಾರಕರು ಶಾಕಿಂಗ್ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ.
ಪ್ರತಿಯೊಂದು ಸಿನಿಮಾ ತಯಾರಕರ ತಂಡ ಆಯಾ ಚಿತ್ರದ ಸ್ಟಾರ್ ನಟನ ಹುಟ್ಟುಹಬ್ಬಕ್ಕೆ ಅಥವಾ ವಿಶೇಷ ದಿನದಂದು ಟೀಸರ್ ಅಥವಾ ಫಸ್ಟ್ ಲುಕ್ ಬಿಡುಗಡೆಗೊಳಿಸುವ ಮುಖೇನ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ನೀಡುತ್ತಾರೆ. ಅದರಂತೆಯೇ ತಮ್ಮ ನೆಚ್ಚಿನ ಹೀರೋ ಪವನ್ ಕಲ್ಯಾಣ್ ಅವರ 'ಓಜಿ' ಚಿತ್ರದ ಕುರಿತು ಭಾರೀ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದ ಫ್ಯಾನ್ಸ್ಗೆ ಈ ಸುದ್ದಿ ಖುಷಿ ಮತ್ತು ಬೇಸರವನ್ನು ತಂದೊಡ್ಡಿದೆ.
'ಓಜಿ' ಚಿತ್ರದ ಫಸ್ಟ್ ಲುಕ್ ಅಥವಾ ಟೀಸರ್ ರಿಲೀಸ್ ಮಾಡುವ ಯಾವುದೇ ಯೋಜನೆ ನಮಗಿಲ್ಲ ಎಂದು ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಅಧಿಕೃತವಾಗಿ ಘೋಷಿಸಿದ್ದು, ಇದರ ಬದಲಿಗೆ ಅದ್ದೂರಿ ದೃಶ್ಯಗಳ ಜತೆ ಅದ್ಬುತ ಬಿಜಿಎಂ ಒಳಗೊಂಡ ಸ್ನೀಕ್ ಪೀಕ್ ಅನ್ನು ಸೆಪ್ಟಂಬರ್ 02 ರಂದು ಬಿಡುಗಡೆಗೊಳಿಸಲಿದ್ದೇವೆ ನಿರೀಕ್ಷಿಸಿ" ಎಂದು ತಿಳಿಸಿದೆ. ಸದ್ಯ ಈ ಸಂಗತಿ ಪವನ್ ಕಲ್ಯಾಣ್ ಅಭಿಮಾನಿಗಳ ಕಾತರವನ್ನು ಮತ್ತಷ್ಟು ಹೆಚ್ಚಿಸಿದೆ,(ಏಜೆನ್ಸೀಸ್).