ಶಿವಮೊಗ್ಗದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ಅನಿಶಾ ಅನಂತ ಕಾತರಿಕಿ, ನವೀದ್, ಪೂರ್ಣಿಮಾ ಸುನಿಲ್, ವಂದನಾ ದಿನೇಶ್, ಕನ್ನಿಕಾ, ಯಶೋದಾ ಇದ್ದರು. 
ನ್ಯೂಸ್

ಮತದಾನ ಪ್ರತಿಯೊಬ್ಬರ ಹಕ್ಕು: ಅನಿಶಾ

ಶಿವಮೊಗ್ಗ: ಮತದಾನ ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಬೇಕು ಎಂದು ಜೇಸಿ ಶಿವಮೊಗ್ಗ ಭಾವನಾ ಅಧ್ಯಕ್ಷೆ ಅನಿಶಾ ಅನಂತ ಕಾತರಿಕಿ ಹೇಳಿದರು.

ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ಜೆಸಿಐ ಶಿವಮೊಗ್ಗ ಭಾವನಾದಿಂದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ಭಾರತೀಯರ ಜವಾಬ್ದಾರಿ ಇದ. ಉತ್ತಮ ನಾಯಕರನ್ನು ಆಯ್ಕೆ ಮಾಡುವ ಮೂಲಕ ಶಕ್ತಿಯುತ ಭಾರತ ನಿರ್ಮಾಣ ಮಾಡಬೇಕು ಎಂದರು.
ಸ್ವೀಪ್ ವಿಭಾಗದ ಸಂಪನ್ಮೂಲ ವ್ಯಕ್ತಿ ನವೀದ್ ಮಾತನಾಡಿ, ಮತದಾನವನ್ನು ಹಬ್ಬವನ್ನಾಗಿ ಆಚರಿಸೋಣ. ಎಲ್ಲ ವಿದ್ಯಾರ್ಥಿಗಳು ಮತದಾನ ಮಾಡಲು ಅರ್ಹರು. ಜತೆಗೆ ಪಾಲಕರಲ್ಲೂ ಜಾಗೃತಿ ಮೂಡಿಸಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿಯಿಂದ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮೊದಲ ಬಾರಿ ಮತದಾನ ಮಾಡುವ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಸ್ವೀಪ್ ವಿಭಾಗದಿಂದ ಮತದಾನದ ಮಹತ್ವದ ಬಗ್ಗೆ ವಿವರಿಸಲಾಯಿತು. ಜೆಸಿಐ ಶಿವಮೊಗ್ಗ ಭಾವನಾ ಐಪಿಪಿ ಪೂರ್ಣಿಮಾ ಸುನಿಲ್, ಕಾರ್ಯದರ್ಶಿ ವಂದನಾ ದಿನೇಶ್, ನಿರ್ದೇಶಕರಾದ ಕನ್ನಿಕಾ, ಯಶೋದಾ ಇತರರಿದ್ದರು.