ಗುಳೇದಗುಡ್ಡದಲ್ಲಿ ಸೈಕಲ್ ಜಾಥಾ ಮೂಲಕ ಮತದಾರರಲ್ಲಿ ಅರಿವು ಮೂಡಿಸಲಾಯಿತು. ತಹಸೀಲ್ದಾರ್ ಮಂಗಳಾ ಎಂ., ತಾಪಂ ಮಲ್ಲಿಕಾರ್ಜುನ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೈ. ಕುಂದರಗಿ ಇತರರಿದ್ದರು. 
ನ್ಯೂಸ್

ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ

ದತ್ತಾತ್ರೇಯ ಪಿ ಕುಲಕರ್ಣಿ

ಗುಳೇದಗುಡ್ಡ: ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಮತದಾನ ಜಾಗೃತಿ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು.

ಬಾದಾಮಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದುರಗೇಶ ರುದ್ರಾಕ್ಷಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ಮತವೂ ಅಮೂಲ್ಯವಾಗಿದ್ದು, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದ ಅಭಿವೃದ್ಧಿಗೆ ನೀವು ನಿಮ್ಮ ಮತ ಚಲಾಯಿಸುವುದು ಅವಶ್ಯವಾಗಿದೆ. ಪ್ರತಿಯೊಬ್ಬ ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕೆಂದು ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಮತದಾನ ಸೈಕಲ್ ಜಾಥಾ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮತದಾನದ ಅರಿವು ಮೂಡಿಸಿದರು.

ತಹಸೀಲ್ದಾರ್ ಮಂಗಳಾ ಎಂ., ತಾಪಂ ಮಲ್ಲಿಕಾರ್ಜುನ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೈ. ಕುಂದರಗಿ, ಪುರಸಭೆ ಮುಖ್ಯಾಧಿಕಾರಿ ರಾಜೇಶ ಕೆ., ದೈಹಿಕ ಶಿಕ್ಷಣಾಧಿಕಾರಿ ಹಳಗೇರಿ, ಪಿ.ಸಿ. ಬೇಟಗೇರಿ, ಬುಳ್ಳಾ ರಾಜಶೇಖರ ಹುನಗುಂದ, ಎಂ.ಪಿ. ಮಾಗಿ, ರಾಜಶೇಖರ ಪಾಗಿ, ವೈ.ಜಿ. ತಳವಾರ, ಪುರಸಭೆ ಮ್ಯಾನೇಜರ್ ಎ.ಎಚ್. ಮುದ್ದೇಬಿಹಾಳ, ಎಸ್. ಎಸ್.ಪಟ್ಟಣಶೆಟ್ಟಿ, ರವಿ ನಿಲುಗಲ್, ಸಿ.ಎಂ. ಕುರುಬರ, ವಿವೇಕಾನಂದ ದೇವಾಂಗಮಠ, ವಿವೇಕಾನಂದ ಭಜಂತ್ರಿ ಇತರರಿದ್ದರು.