ನಂಜನಗೂಡು : ನಂಜನಗೂಡು ನಗರಸಭೆಯ 20ನೇ ವಾರ್ಡ್‌ಗೆ ಬುಧವಾರ ನಡೆದ ಉಪಚುನಾವಣೆ ಅಂಗವಾಗಿ ನಗರದ ರಾಷ್ಟ್ರಪತಿ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತಗಟ್ಟೆಯಲ್ಲಿ ಮತದಾನ ನಡೆಯಿತು.
ಬೆಳಗ್ಗೆ 7ರಿಂದ ಸಂಜೆ 5ವರೆಗೆ ನಡೆದ ಮತದಾನ ನಡೆಯಿತು. ವಾರ್ಡಿನ ಹಿರಿಯ ನಾಗರಿಕರು, ಅಂಗವಿಕಲರೂ ಆಸಕ್ತಿಯಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಮತದಾನದ ವೇಳೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ ಬೆಂಬಲಿತ ಅಭ್ಯರ್ಥಿಗಳು ಅಂತಿಮ ಸುತ್ತಿನ ಕಸರತ್ತು ನಡೆಸಿ ಮತದಾರರನ್ನು ತಮ್ಮತ್ತ ಮನವೊಲಿಸುವ ಪ್ರಯತ್ನ ನಡೆಸಿದ್ದು ಗಮನ ಸೆಳೆಯಿತು. ಮೂರು ಪ್ರಮುಖ ಪಕ್ಷದ ನಾಯಕರು ಮತಗಟ್ಟೆ ಸಮೀಪದಲ್ಲಿ ಬೀಡುಬಿಟ್ಟು ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು. ಮತ ಎಣಿಕೆ ಡಿ.30ರಂದು ನಡೆಯಲಿದೆ.
ಶೇ.63.39 ಮತದಾನ
ಉಪಚುನಾವಣೆಯಲ್ಲಿ ಶೇ.63.39 ಮತದಾನವಾಗಿದೆ. ಬೆಳಗ್ಗೆ 7 ರಿಂದ ಸಂಜೆ 5ವರೆಗೆ ನಡೆದ ಮತದಾನದಲ್ಲಿ ಒಟ್ಟು 896 ಮತದಾರರ ಪೈಕಿ 568 ಮತಗಳು ಚಲಾವಣೆಯಾಗಿದೆ. ಇದರಲ್ಲಿ 275 ಪುರುಷರು ಹಾಗೂ 293 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ.