ಕೋಲಾರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂದ ಅಧ್ಯಕ್ಷ ಕೆ.ವಿ.ಶಂಕರಪ್ಪ ಮಾತನಾಡಿದರು. ವಿ.ಕೃಷ್ಣರೆಡ್ಡಿ, ಮುರಳಿಗೌಡ, ಬೀಸಪ್ಪ ಗೌಡ ಇದ್ದರು. 
ನ್ಯೂಸ್

ಜಾತಿ ಜನಗಣತಿಗೆ ಒಕ್ಕಲಿಗರ ಸಂಘ ವಿರೋಧ

ಕೋಲಾರ: ರಾಜ್ಯದಲ್ಲಿ ನಡೆದಿರುವ ಕಾಂತರಾಜ ಮತ್ತು ಜಯ ಪ್ರಕಾಶ್​ ಹೆಗಡೆ ಅವರ ಜಾತಿ ಸಮೀಕ್ಷೆ ವರದಿಯ ದತ್ತಾಂಶಗಳನ್ನು ಒಕ್ಕಲಿಗ ಸಮುದಾಯ ಒಪ್ಪುವುದಿಲ್ಲ. ಇದೊಂದು ಅವೈಜ್ಞಾನಿಕ ವರದಿಯಾಗಿದ್ದು, ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘ ಅಧ್ಯಕ್ಷ ಕೆ.ವಿ.ಶಂಕರಪ್ಪ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಮನೆಗಳಿಗೆ ಜಾತಿ ಜನಗಣತಿ ಸಿಬ್ಬಂದಿ ಬಂದು ಸಮೀೆ ಮಾಡಿಲ್ಲ, ಇದರಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ದೂರಿದರು.

ಜಾತಿ ಸಮೀಕ್ಷೆಯ ನೆಪದಲ್ಲಿ ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟುವ ಕುತಂತ್ರ ಸರ್ಕಾರ ಮಾಡುತ್ತಿದೆ. ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ, ಸಮಾಜದಲ್ಲಿ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಿದ್ದೆವೆ ಎಂದರು.

ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದವರು ಮತ್ತೊಂದು ಸಮುದಾಯವನ್ನು ತುಳಿಯುವ ಹುನ್ನಾರ ಮಾಡುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದು. ಕಾಂತರಾಜ ಅವರ ವರದಿ ಯಾವ ಆಧಾರದ ಮೇಲೆ ಸಮೀೆ ನೀಡಲಾಗಿದೆ ಎಂಬುವುದು ಗೊತ್ತಿಲ್ಲ. ಯಾವ ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನವು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಯಾವುದೇ ಸಮುದಾಯಕ್ಕೆ ಏಷ್ಟೇ ಸೌಲಭ್ಯ ಕೊಡಲಿ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.

ಸಂಘದ ರಾಜ್ಯ ನಿರ್ದೇಶಕ ಡಾ.ಡಿ.ಕೆ.ರಮೇಶ್​, ಸಂದ ಗೌರವಾಧ್ಯಕ್ಷ ಬಿಸಪ್ಪಗೌಡ, ಪದಾಧಿಕಾರಿಗಳಾದ ವಿ.ಕೃಷ್ಣರೆಡ್ಡಿ, ಸಿ.ಎಂ.ಆರ್​.ಶ್ರೀನಾಥ್​, ವಕ್ಕಲೇರಿ ರಾಮು, ಪವನ್​ ನಾರಾಯಣಸ್ವಾಮಿ, ರಾಮಚಂದ್ರಪ್ಪ, ಮುನೇಗೌಡ, ಮುರಳೀಗೌಡ, ಬಾಬು ಮೌನಿ ಇದ್ದರು.