ರಾಣೆಬೆನ್ನೂರ: ಬಸವ ಜಯಂತಿ ನಿಮಿತ್ತ ತಾಲೂಕ ನಿವೃತ್ತ ಲಿಂಗವಂತ ಸಮಾಜ ನೌಕರರ ಸಂಘದ ವತಿಯಿಂದ ಮೇ 9ರಂದು ಬೆಳಗ್ಗೆ 10 ಗಂಟೆಗೆ ನಗರದ ಚನ್ನೇಶ್ವರ ಮಠದಲ್ಲಿ ವಚನ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಮೇ 7ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಸ್ಪರ್ಧಾಳುಗಳು ರಾಣೆಬೆನ್ನೂರ ತಾಲೂಕಿನ ನಿವಾಸಿಗಳಾಗಿರಬೇಕು. ಬಸವಣ್ಣನವರ ವಚನಗಳನ್ನು ರಾಗಬದ್ಧವಾಗಿ ಕಂಠಪಾಠವಾಗಿ, ಶುದ್ಧವಾಗಿ ಹೇಳಿದವರಿಗೆ ಆದ್ಯತೆ ನೀಡಲಾಗುವುದು. ಯಾವುದೇ ಪಕ್ಕವಾದ್ಯಗಳಿಗೆ ಅವಕಾಶವಿಲ್ಲ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗಗಳೆಂದು ಮೂರು ವಿಭಾಗಗಳನ್ನು ಮಾಡಲಾಗಿದೆ. ಪ್ರತಿಯೊಂದು ವಿಭಾಗದಲ್ಲಿ ಮೂರು ಬಹುಮಾನಗಳನ್ನು ಕೊಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಘದ ಗೌರವ ಕಾರ್ಯದರ್ಶಿ ವಿ.ವಿ. ಹರಪನಹಳ್ಳಿ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.