ಮಂಗಳೂರು: ಅಪ್ರಾಪ್ತೆ ಪುತ್ರಿಯ ಮೇಲೆ ತಂದೆಯೇ ನಡೆಸಿದ್ದಾನೆ ಎನ್ನಲಾದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.
ವಿಟ್ಲ ಪೆರುವಾಯಿ ಗ್ರಾಮದ ಅಬ್ದುಲ್ ಅಜೀಜ್ (70) ಶಿಕ್ಷೆಗೊಳಗಾದ ಅಪರಾಧಿ. 2020 ಮಾರ್ಚ್ ತಿಂಗಳಿನಲ್ಲಿ ವಿಟ್ಲ ಪೊಲೀಸ ಠಾಣೆಯಲ್ಲಿ ಈತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಸಲ್ಲಿಕೆಯಾದ ಸಾಕ್ಷಾೃಧಾರಗಳು ಹಾಗೂ ಕೂಲಂಕಷ ತನಿಖೆಯನ್ನು ಆಧರಿಸಿ ನ್ಯಾಯಾಧೀಶ ಕೆ.ಎಂ. ರಾಧಕೃಷ್ಣರವರು ತೀರ್ಪು ಪ್ರಕಟಿಸಿದ್ದಾರೆ.