ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಇಂಡಿಯನ್ ಮುಜಾಹಿದ್ದೀನ್(ಐಎಂ) ಉಗ್ರ ಸಂಘಟನೆ ಬಲಗೊಳಿಸಲು ಹೋಮಿಯೋಪಥಿ ವೈದ್ಯ ಡಾ. ಸೈಯದ್ ಇಸ್ಮಾಯಿಲ್ ಅಾಕ್, ಪತ್ನಿ ಮನೆಗೆ ಹೋಗುವ ನೆಪದಲ್ಲಿ ಪಾಕಿಸ್ತಾನಕ್ಕೆ ಹೋಗಿ ಉಗ್ರರನ್ನು ಭೇಟಿ ಮಾಡುತ್ತಿದ್ದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ದೇಶದಲ್ಲಿನ ಉಗ್ರ ಚಟುವಟಿಕೆಗಳಿಗೆ ಸ್ಫೋಟಕ ಪೂರೈಕೆ ಪ್ರಕರಣದ ಅಪರಾಧಿಗಳಾದ ಐಎಂ ಉಗ್ರ ಡಾ. ಸೈಯದ್ ಇಸ್ಮಾಯಿಲ್ ಅಾಕ್, ಸ್ವ-ಇಚ್ಛಾ ಹೇಳಿಕೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. 2005ರಲ್ಲಿ ಪಾಕ್‌ನ ಕರಾಚಿಯ ಯುವತಿ ಜತೆಗೆ ಮದುವೆ ಆಗಿದ್ದರೂ 4 ವರ್ಷ ಪತ್ನಿ ಮನೆಗೆ ಹೋಗಿರಲಿಲ್ಲ. 2009ರ ಮಾರ್ಚ್‌ನಲ್ಲಿ ಬಾಮೈದನ ಮದುವೆ ನೆಪದಲ್ಲಿ ಹೋಗಿ ಉಗ್ರರನ್ನು ಭೇಟಿ ಮಾಡಿ ಬಾಂಬ್ ತಯಾರಿಸುವ ಕುರಿತು ತರಬೇತಿ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾನೆ.
ಅಾಕ್ ಹೇಳಿಕೆ ಪ್ರಕಾರ 2002ರಿಂದ 2014ರ ವರೆಗೂ ಭಟ್ಕಳದಲ್ಲಿ ಪಾಪ್ಯುಲರ್ ್ರಂಡ್ ಆ್ ಇಂಡಿಯಾ (ಪಿಎ್ಐ) ಮತ್ತು ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ್ದ. ಐಎಂ ಸಂಸ್ಥಾಪಕರಾದ ರಿಯಾನ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಅಫೀಜ್ ಸುಲ್ತಾನ್ ಮನೆಯಲ್ಲಿ ಜಿಹಾದ್ ಬೋಧನೆ ಮಾಡುತ್ತಿದ್ದರು. ಮೊದಲು ಕುರಾನ್, ಇಸ್ಲಾಂ ಪುಸ್ತಕ ಬೋಧನೆ ಮಾಡಿ ಬಳಿಕ ಇಸ್ಲಾಂ ರಾಷ್ಟ್ರಗಳಲ್ಲಿನ ವಿದ್ಯಮಾನ ಮತ್ತು ಮುಸ್ಲಿಂಮರ ಮೇಲಿನ ದೌರ್ಜನ್ಯದ ಬಗ್ಗೆ ಹೇಳಿ ಜಿಹಾದ್‌ಗೆ ಪ್ರಚೋದನೆ ನೀಡುತ್ತಿದ್ದರು. ಜಿಹಾದ್ ಕಡೆಗೆ ಮನಸು ಇರುವ ಯುವಕರನ್ನು ಆಯ್ಕೆ ಮಾಡಿಕೊಂಡು ಐಎಂ ಸಂಘಟನೆಗೆ ಸದಸ್ಯರಾಗಿ ಮಾಡುತ್ತಿದ್ದರು.
ಪಾಕ್‌ನಲ್ಲಿ ಮುಸ್ಲಿಂ ಯುವತಿಯರ ಮದುವೆಗೆ ಯುವಕರು ಸಿಗದ ಕಾರಣ ಭಟ್ಕಳದ ಯುವಕರಿಗೆ ಅಲ್ಲಿನ ಯುವತಿಯರನ್ನು ಮದುವೆ ಮಾಡಿಸುತ್ತಿದ್ದರು. 2005ರಲ್ಲಿ ಕರಾಚಿ ಯುವತಿ ಜತೆ ಮದುವೆ ಆಗಿದ್ದರೂ ಪಾಕಿಸ್ತಾನಕ್ಕೆ ಅಾಕ್ ಹೋಗಿರಲಿಲ್ಲ. ಬಳಿಕ 2009ರ ಮಾರ್ಚ್‌ನಲ್ಲಿ ಉಗ್ರ ಚಟುವಟಿಕೆ ಉದ್ದೇಶಕ್ಕೆ ಪಾಕ್‌ಗೆ ಹೋಗಿ ಅಲ್ಲಿಂದ ದೆಹಲಿಗೆ ಬಂದು ಮತ್ತೆ ದುಬೈಗೆ ತೆರಳಿ ಉಗ್ರ ಸಂಘಟನೆ ಮುಖಂಡರನ್ನು ಭೇಟಿ ಮಾಡಿದ್ದ. ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆ್ ಇಂಡಿಯಾ(ಸಿಮಿ) ರಾಷ್ಟ್ರೀಯ ಅಧ್ಯಕ್ಷನ್ನು ಭೇಟಿ ಮಾಡಿ ವಾಪಸ್ ಭಾರತಕ್ಕೆ ಬಂದಿದ್ದ. ಸ್ವಲ್ಪ ದಿನಕ್ಕೆ ಮತ್ತೆ ದುಬೈಗೆ ಕರೆಸಿಕೊಂಡಿದ್ದರು. ಅಲ್ಲಿಂದ ಶಾರ್ಜಾಗೆ ಹೋಗಿ ್ಲ್ಯಾಟ್‌ಯೊಂದರಲ್ಲಿ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್‌ನನ್ನು ಭೇಟಿ ಮಾಡಿದ್ದ. ಈ ಇಬ್ಬರು ಸ್ಫೋಟಕ ವಸ್ತುಗಳ ಖರೀದಿ, ಸಂಗ್ರಹ ಮತ್ತು ಸ್ಫೋಟಕ ತಯಾರಿಕೆ ಮತ್ತು ಗೌಪ್ಯ ಮಾತುಕತೆ ಕುರಿತು ತರಬೇತಿ ನೀಡಿದ್ದರು ಎಂದು ಅಾಕ್ ತಿಳಿಸಿದ್ದಾನೆ.
ಸಂಭಾಷಣೆಗೆ ಕೋಡ್ ವರ್ಡ್
ದುಬೈನಲ್ಲಿದ್ದ ಉಗ್ರ ರಿಯಾಜ್ ಭಟ್ಕಳ್ ಜತೆ ಸಂಭಾಷಣೆ ನಡೆಸಲು ಕೋಡ್ ವರ್ಡ್ ಕೊಟ್ಟಿದ್ದರು. ಉಗ್ರ ಸಂಘಟನೆಗಳು ಹೆಚ್ಚಾಗಿ ಬಳಸುತ್ತಿದ್ದ ನಿಂಬೂಜ್ ಇಮೇಲ್‌ನಲ್ಲಿ ಚಾಟಿಂಗ್ ಮಾಡುವುದನ್ನು ಅಾಕ್‌ಗೆ ಹೇಳಿಕೊಟ್ಟಿದ್ದರು. ಪ್ರತಿಯೊಂದು ಬಾರಿಯೂ ಚಾಟಿಂಗ್ ಮಾಡಬೇಕಾದರೆ ಪಾಸ್ ವರ್ಡ್ ಬದಲಾಯಿಸುತ್ತಿದ್ದರು. ಮೊದಲ 4 ನಂಬರ್‌ಗೆ ಪ್ರತಿ ಬಾರಿ ಹೊಸದಾಗಿ 4 ನಂಬರ್ ಸೇರಿಸಿ ಚಾಟಿಂಗ್ ಮಾಡುತ್ತಿದ್ದರು. ಅಾಕ್ ಲ್ಯಾಪ್‌ಟಾಪ್‌ನಲ್ಲಿ ಈ ಬಗ್ಗೆ ಮಾಹಿತಿ ಪತ್ತೆಯಾಗಿದೆ. ಅಲ್ಲದೆ, ಜಿಲೆಟಿನ್ ಕಟ್ಟಿಗೆ ಮೈರೇ, ಡಿಟೋನೇಟರ್‌ಗೆ ಕೆಟ್, ಸರ್ಕ್ಯೂಟ್ ಬೋರ್ಡ್‌ಗೆ ಪೈಟಿಂಗ್ ಮತ್ತು ಅಮೋನಿಯಂ ನೈಟ್ರೆಡ್‌ಗೆ ಗುಲ್ಯೂ ಎಂದು ಕೋಡ್ ವರ್ಡ್ ಇಟ್ಟುಕೊಂಡಿದ್ದರು.
ಹವಾಲದಲ್ಲಿ ದೇಣಿಗೆ
ಭಟ್ಕಳದಲ್ಲಿ ಇರುವ ಡೆಸ್ಟಿನೇಷನ್ ಟ್ರಾವೆಲ್ಸ್ ಕಚೇರಿಗೆ ನಗದು ರೂಪದಲ್ಲಿ ಹಣ ಬರುತ್ತಿತ್ತು. ಅಲ್ಲಿಗೆ ಅಾಕ್ ಹೋಗಿ ಹಣ ಸ್ವೀಕರಿಸುತ್ತಿದ್ದ. ಆದರೆ, ಟ್ರಾವೆಲ್ಸ್‌ಗೆ ಹಣವನ್ನು ತಂದುಕೊಡುತ್ತಿದ್ದ ವ್ಯಕ್ತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದು ಹವಾಲ ಮೂಲಕವೇ ಬರುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.