UP Governor: ಲಿವ್-ಇನ್ ಸಂಬಂಧಗಳ ಅಪಾಯಗಳ ಬಗ್ಗೆ ಮಹಿಳೆಯರಿಗೆ ಎಚ್ಚರಿಕೆ ನೀಡಿರುವ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಅದಕ್ಕೆ ಸಂಬಂಧಪಟ್ಟ ಫಲಿತಾಂಶಗಳನ್ನು ನೋಡಲು ಅನಾಥಾಶ್ರಮಕ್ಕೆ ಭೇಟಿ ನೀಡಿದರೆ ಸಾಕು ಎಂದರು.
ಯುಪಿಯ ಬಲ್ಲಿಯಾದಲ್ಲಿರುವ ಜನನಾಯಕ್ ಚಂದ್ರಶೇಖರ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಪಟೇಲ್, ಈ ಹೇಳಿಕೆಯನ್ನು ನೀಡಿದ್ದಾರೆ .
ಲಿವ್-ಇನ್ ಸಂಬಂಧಗಳ ಪರಿಣಾಮಗಳನ್ನು ಜನ ನೋಡಲು ಬಯಸಿದರೆ, ಅವರು ಅನಾಥಾಶ್ರಮಕ್ಕೆ ಭೇಟಿ ನೀಡುವುದು ಉತ್ತಮ, ಅಲ್ಲಿ ಹದಿನೈದರಿಂದ 20 ವರ್ಷ ವಯಸ್ಸಿನ ಹುಡುಗಿಯರು, ಒಂದು ವರ್ಷದ ಮಗುವನ್ನು ಹೊಂದಿದ್ದಾರೆ ಎಂದು ಹೇಳಿಕೊಂಡರು. ಈ ರೀತಿಯ ಸಂಬಂಧಗಳನ್ನು ಕಟು ಪದಗಳಲ್ಲಿ ಖಂಡಿಸಿದ ರಾಜ್ಯಪಾಲರು, ಈ ಪ್ರವೃತ್ತಿಗೆ ದುರಾಸೆ ಬಿಟ್ಟರೆ ಬೇರೆ, ಯಾವ ಭಾವನೆಗಳು ಇಲ್ಲ ಎಂದರು.
ಇದನ್ನೂ ಓದಿ:ಏನು ನಿರೀಕ್ಷಿಸಬೇಕೆಂದು ಗೊತ್ತಿದೆ… ಏಕದಿನ ನಾಯಕತ್ವ ಕಳೆದುಕೊಂಡ ಬಳಿಕ ರೋಹಿತ್ ಮೊದಲ ಪ್ರತಿಕ್ರಿಯೆ! Rohit Sharma
ಪುರುಷರು ಯುವತಿಯರನ್ನು ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ, ಅವರೊಂದಿಗೆ ಸಂಬಂಧ ಬೆಳೆಸಿದ ಬಳಿಕ, ಆಕೆ ಗರ್ಭಿಣಿಯಾಗುತಿದ್ದಂತೆ, ಆ ಹುಡುಗಿಯರನ್ನು ಬಿಟ್ಟು ಹೋಗುತ್ತಾರೆ. ಇವೆಲ್ಲಾ ನಮ್ಮ ಸಂಸ್ಕೃತಿ, ಸಂಪ್ರದಾಯವಲ್ಲ, ಆದರೂ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು. ನಮ್ಮ ಮಹಿಳೆಯರು ಇಂತಹ ಕೃತ್ಯಗಳಿಗೆ ಬಲಿಯಾಗುವ ಬದಲು ತಮ್ಮ ಜೀವನದ ಗುರಿಗಳಿಗೆ ಅವರ ಜೀವನವನ್ನು ಮುಡಿಪಾಗಿಡಬೇಕೆಂದು ಸಲಹೆ ನೀಡಿದರು.
ಹೆಣ್ಣುಮಕ್ಕಳನ್ನು ರಕ್ಷಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದ್ದು, ಆದರೂ ಇಂತಹ ತಪ್ಪುಗಳು ಮಹಿಳೆಯರ ವಿಷಯದಲ್ಲಿ ನಡೆಯುತ್ತಲೇ ಇವೆ, ಭಾರತವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಗೆ ತರಲು ಯುವಕರು ನಾವೀನ್ಯತೆ ಮತ್ತು ಸಂಶೋಧನೆಯನ್ನು ಅನುಸರಿಸಬೇಕು, ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಜ್ಯಪಾಲರು, ರಾಜ್ಯದ ಪ್ರತಿಯೊಬ್ಬ ಯುವಕನು ಮಾದಕ ದ್ರವ್ಯ ಸೇವನೆಯಿಂದ ಮುಕ್ತನಾದಾಗ ತಮಗೆ ಸಂತೋಷವಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಮನೆ ಮೇಲ್ಛಾವಣಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು, ಒಬ್ಬಳು ಸಾವು, ಇನ್ನೊಬ್ಬಳ ಸ್ಥಿತಿ ಗಂಭೀರ..walking
ವಿಶ್ವವಿದ್ಯಾನಿಲಯಗಳಲ್ಲಿ ಬೋಧನೆ ಮತ್ತು ಕಲಿಕೆಯ ಸಂಸ್ಕೃತಿಯಲ್ಲಿ ಸುಧಾರಣೆಗಳನ್ನು ಉಲ್ಲೇಖಿಸಿದ ರಾಜ್ಯಪಾಲೆ ಪಟೇಲ್, ವಿದ್ಯಾರ್ಥಿಗಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವಂತೆ ತಿಳಿಸುತ್ತಾ, ಬೋಧನೆಯ ಜೊತೆಗೆ ಸಂಶೋಧನೆಯ ಸಂಸ್ಕೃತಿಯನ್ನು ಬೆಳೆಸುವಂತೆ ಅಧ್ಯಾಪಕರನ್ನು ಒತ್ತಾಯಿಸಿದರು. ಈ ವರ್ಷ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಒಟ್ಟು 19,560 ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಯಿತು. 15,878 ಪದವಿಪೂರ್ವ ವಿದ್ಯಾರ್ಥಿಗಳಿಗೆ ಮತ್ತು 3,682 ಸ್ನಾತಕೋತ್ತರ ಪದವೀಧರರಿಗೆ ಪದವಿಗಳನ್ನು ನೀಡಲಾಯಿತು. ಈ ವರ್ಷ, ಘಟಿಕೋತ್ಸವದಲ್ಲಿ ಮಹಿಳಾ ವಿದ್ಯಾರ್ಥಿಗಳು ಪ್ರಾಬಲ್ಯ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)