ಚನ್ನಪಟ್ಟಣ : ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಗುತ್ತಿಗೆದಾರರ ಹಣಬಾಕತನದಿಂದಾಗಿ ಬಹು ನಿರೀಕ್ಷಿತ ಜಲಜೀವನ್ ಮಿಷನ್ ಕಾಮಗಾರಿ ತನ್ನ ವಿಷನ್ ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಹೌದು.., ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಯೋಜನೆಗೆ ನಕಲಿ ಪೈಪ್‌ಗಳನ್ನು ಆಳವಡಿಸುತ್ತಿರುವುದು ಗ್ರಾಮದ ಯುವಕರಿಂದ ಬಯಲಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ತಾಲೂಕಿನ ಕೆಲ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನವಾಗಿದ್ದು, ಅದರಂತೆ ಗ್ರಾಮದಲ್ಲಿಯೂ ಕಾಮಗಾರಿ ಭರದಿಂದ ಸಾಗಿದೆ.
ಗ್ರಾಮದಲ್ಲಿ ಶನಿವಾರ ಕೊಳವೆ ಸಂಪರ್ಕ ಕಲ್ಪಿಸುವ ಸಿಪಿವಿಸಿ ಪೈಪ್‌ಗಳನ್ನು ಅಳವಡಿಸಲಾಗುತಿತ್ತು. ಈ ಪೈಪ್‌ಗಳನ್ನು ಗ್ರಾಮದ ಯುವಕರು ಪರಿಶೀಲಿಸಿದ್ದು, ಕಳಪೆಯಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಸಂಬಂಧಪಟ್ಟವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಜಲಜೀವನ್ ಮಿಷನ್?: ಕೇಂದ್ರ ಸರ್ಕಾರ 2019ರ ಆಗಸ್ಟ್‌ನಲ್ಲಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯನ್ನು ೋಷಿಸಿತ್ತು. ಎಲ್ಲ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರು ಸರಬರಾಜು (ಹರ್ ರ್ ಜಲ್) ಒದಗಿಸುವ ನಿಟ್ಟಿನಲ್ಲಿ ನದಿಮೂಲದ ಸ್ವಚ್ಛ ನೀರನ್ನು ಪ್ರತಿ ಮನೆಗೆ ಪೂರೈಸಲು ಕೊಳಾಯಿ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ. 37.5, ಉಳಿದ ಶೇ.25ರಷ್ಟು ಅನುದಾನದಲ್ಲಿ ಶೇ.15ರಷ್ಟು ಅನುದಾನವನ್ನು ಗ್ರಾಪಂಗಳು 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಉಳಿದ ಶೇ 10ರಷ್ಟನ್ನು ಗ್ರಾಹಕರಿಂದ ವಂತಿಕೆ ರೂಪದಲ್ಲಿ ಸಂಗ್ರಹಿಸಬೇಕಾಗಿದೆ.
ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ಹಣ ಬಾಕತನ: ಇಂತಹ ಬಹುನಿರೀಕ್ಷಿತ ಯೋಜನೆಯು ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಣೆ ವಾಡಲು ಬೇಜವಾಬ್ದಾರಿತನ ತೋರುತ್ತಿರುವ ಅಧಿಕಾರಿಗಳು ಹಾಗೂ ಯೋಜನೆಯ ಲಾಭ ಪಡೆಯಲು ಹವಣಿಸುತ್ತಿರುವ ಗುತ್ತಿಗೆದಾರರ ಹಣ ಬಾಕತನಕ್ಕೆ ಬಲಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೆಲವೆಡೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಲು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದರ ಲಾಭ ಪಡೆಯುತ್ತಿರುವ ಗುತ್ತಿಗೆದಾರರು ಕಳಪೆ ಸಾಮಗ್ರಿ ಬಳಸಿಕೊಂಡು ಯಾವಾರಿಸುವ ಕೆಲಸ ವಾಡುತ್ತಿದ್ದಾರೆ. ತಾಲೂಕಿನ ಚಕ್ಕರೆ ಗ್ರಾಮದಲ್ಲಿ ಜೆಜೆಎಂ ಯೋಜನೆಯ ಪೈಪ್‌ಗಳು ಪುಡಿಪುಡಿಯಾಗಿರುವುದು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಜಿಪಂ ಸಿಇಒ ಚಾಟಿ ಬೀಸಬೇಕಿದೆ: ಯೋಜನೆಯ ಅನುಷ್ಠಾನಕ್ಕೆ ಜಿಪಂ ಸಿಇಒ ಇಕ್ರಂ ಪಣತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯೋಜನೆಗೆ ಸಂಬಂಧಪಟ್ಟಂತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ಕಾಮಗಾರಿಯ ಗುಣಮಟ್ಟವನ್ನು ನಿರಂತರವಾಗಿ ಪರಿಶೀಲಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪೈಪುಗಳನ್ನು ಮಣ್ಣಿನಲ್ಲಿ ಮುಚ್ಚುವ ಕಾರಣ, ಒಮ್ಮೆ ಮುಚ್ಚಿದರೆ ಸಾಕು ಅಮೇಲೆ ನೋಡಿಕೊಳ್ಳೋಣ ಎಂಬ ಬೇಜವಾಬ್ದಾರಿತನ ತೋರುವವರಿಗೆ ಜಿಪಂ ಸಿಒಒ ಬಿಸಿ ಮುಟ್ಟಿಸಬೇಕಿದೆ. ಒಟ್ಟಾರೆ ಜಲಜೀವನ್ ಮಿಷನ್, ತನ್ನ ವಿಷನ್ ಕಳೆದಕೊಳ್ಳದ ಹಾಗೇ ನೋಡಿಕೊಳ್ಳಬೇಕಿದೆ. ಅಧಿಕಾರಿಗಳಿಗೆ ಮಾಹಿತಿ : ಯೋಜನೆಯಡಿ ಗ್ರಾಮದಲ್ಲಿ ಕೊಳಾಯಿ ಸಂಪರ್ಕಕ್ಕಾಗಿ ಅಳವಡಿಸುತ್ತಿದ್ದ ಪೈಪ್‌ಗಳು ಕಳಪೆಯಾಗಿದ್ದು, ಕೈಯಲ್ಲಿ ಮುಟ್ಟಿದರೆ ಪುಡಿಯಾಗುತ್ತಿವೆ. ಪೈಪ್‌ನ ಗುಣಮಟ್ಟದ ಬಗ್ಗೆ ಅನುವಾನಗೊಂಡ ಗ್ರಾಮದ ಯುವಕರು ಕಾಮಗಾರಿಗೆ ತಂದಿದ್ದ ಪೈಪುಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ. ಕಬ್ಬಿನ ಜಲ್ಲೆ ಮುರಿಯುವಂತೆ ಪೈಪುಗಳು ಯುವಕರ ಕೈಯಲ್ಲಿ ಪುಡಿಯಾಗಿವೆ. ಅಷ್ಟೊತ್ತಿಗಾಗಲೇ ಕೆಲಭಾಗದಲ್ಲಿ ಪೈಪ್ ಅಳವಡಿಕೆ ಕಾರ್ಯ ಮುಗಿದಿದ್ದು, ಕಳಪೆ ಪೈಪುಗಳೆಂದು ಖಚಿತಗೊಂಡ ನಂತರ ಗ್ರಾಮದ ಯುವಕರು ಕಾಮಗಾರಿಯನ್ನು ನಿಲ್ಲಿಸಿ, ಸಂಬಂಧಪಟ್ಟ ಜಿಪಂ ಅಧಿಕಾರಿಗಳಿಗೆ ವಾಹಿತಿ ನೀಡಿದ್ದಾರೆ. ಕಳಪೆ ಕಾಮಗಾರಿಯನ್ನು ವಿರೋಧಿಸಿ, ನಕಲಿ ಪೈಪುಗಳನ್ನು ಧ್ವಂಸಗೊಳಿಸಿದ್ದಾರೆ.
ಗ್ರಾಮದಲ್ಲಿ ಜಲಜೀವನ್ ಯೋಜನೆಯಡಿ ಕೊಳಾಯಿಗೆ ಸಂಪರ್ಕ ಕಲ್ಪಿಸುವ ಪೈಪುಗಳು ಕಳಪೆಯಾಗಿವೆ ಎಂಬ ಗ್ರಾಮದ ಯುವಕರ ದೂರಿನ ಮೇರೆಗೆ ಅವುಗಳನ್ನು ಪರಿಶೀಲಿಸಿದ್ದಾಗ ಪೈಪ್‌ಗಳು ಕೈಯಿಂದ ಮುಟ್ಟಿದಾಗ ಪುಡಿಯಾದವು. ಇದರಿಂದ ಇಡಿ ಕಾಮಗಾರಿಯ ಬಗ್ಗೆ ಅನುವಾನ ಮೂಡಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದೇವೆ. ಸುಜಯ್‌ಕುವಾರ್ ಚಕ್ಕೆರೆ ಗ್ರಾಪಂ ಉಪಾಧ್ಯಕ್ಷ. ಚಕ್ಕೆರೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಕಳಪೆ ಪೈಪುಗಳನ್ನು ಅಳವಡಿಸಲಾಗುತ್ತಿದೆ ಎಂಬ ದೂರು ತಲುಪಿದೆ. ಈ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರಿಂದ ವಾಹಿತಿ ಕೇಳಿದ್ದೇವೆ. ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಲಾಗುವುದು. ಆರಂಭದಿಂದಲೂ ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತೇವೆ. ಮಧುಸೂಧನ್ ಎಇಇ, ಜಿಪಂ.