ಸಾಗರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಎಸಿ ಆರ್.ಯತೀಶ್ ಮಾತನಾಡಿದರು. ಚಂದ್ರಶೇಖರ್ ನಾಯ್ಕ, ಎನ್.ಸುಮಾ, ಮಂಜುನಾಥ ಆಚಾರ್, ಜಯಂತ್ ಇತರರಿದ್ದರು.  
ನ್ಯೂಸ್

ಕಲಾಪ್ರಪಂಚಕ್ಕೆ ವಿಶ್ವಕರ್ಮ ನೀಡಿದ ಕೊಡುಗೆ ದೊಡ್ಡದು

ಸಾಗರ: ಜಗತ್ತನ್ನು ಕಟ್ಟುವಲ್ಲಿ ವಿಶ್ವಕರ್ಮ ಅವರ ಪಾತ್ರ ಪ್ರಮುಖವಾಗಿದೆ. ಕಲೆಯಲ್ಲಿ ಸೃಜನಶೀಲತೆಯನ್ನು ಮೊದಲು ತೋರಿಸಿಕೊಟ್ಟವರು ವಿಶ್ವಕರ್ಮರು ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.

ಸಾಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮರ ಕಾರ್ಯ, ಸೃಜನಶೀಲತೆ, ವಿನ್ಯಾಸ ವಿಶೇಷವಾದುದು. ಅತ್ಯಂತ ಸುಂದರ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಕಲಾಸಿರಿವಂತಿಕೆ ನಾವು ನೋಡಬಹುದು. ವಿಶ್ವಕರ್ಮರು ಭೂಮಂಡಲದ ನಕ್ಷೆ ತಯಾರಿಕೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನುವುದು ಗಮನಾರ್ಹ ಸಂಗತಿ. ವಿಶ್ವಕರ್ಮ ಸಮುದಾಯ ಕಲಾಪ್ರಪಂಚಕ್ಕೆ ನೀಡಿದ ಕೊಡುಗೆ ದೊಡ್ಡದು ಎಂದರು.
ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ ಮಾತನಾಡಿ, ವಿಶ್ವಕರ್ಮ ಪರಂಪರೆಗೆ ಪ್ರಾಚೀನ ಇತಿಹಾಸವಿದೆ. ಶ್ರಮಜೀವಿ ವರ್ಗದಲ್ಲಿ ಗುರುತಿಸಿಕೊಂಡಿರುವ ಸಮುದಾಯ ತಮ್ಮ ಕಲೆಯ ಮೂಲಕ ಪ್ರಸಿದ್ಧಿಗೆ ಬಂದಿದ್ದಾರೆ ಎಂದು ತಿಳಿಸಿದರು.
ಶಿಕ್ಷಕಿ ಎನ್.ಸುಮಾ ಉಪನ್ಯಾಸ ನೀಡಿದರು. ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಂಜುನಾಥ ಆಚಾರ್, ಕಾರ್ಯದರ್ಶಿ ಜಯಂತ್ ಗಡೆಮನೆ, ಉಪಾಧ್ಯಕ್ಷ ಚಂದ್ರಾಚಾರ್, ಉಪ ತಹಸೀಲ್ದಾರ್ ಚಂದ್ರಶೇಖರ್, ಶಾರದಾ ಶಾಂತಮೂರ್ತಿ, ಮೋಹನ್, ವಿ.ಟಿ.ಸ್ವಾಮಿ ಇತರರಿದ್ದರು.