ನ್ಯೂಸ್

ಸಂತ್ರಸ್ತೆಯ ಪರವಾಗಿ ವಿಶ್ವ ಕರ್ಮ ಸಮಾಜ -  ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿಕೆ

Mangaluru - Nishantha Narayana

ಪುತ್ತೂರು: ವಾಸ್ತುತಜ್ಞನ ಪುತ್ರನಿಂದ ವಂಚನೆಗೊಳಗಾದ ಸಂತ್ರಸ್ತೆ ಮತ್ತು ಕುಟುಂಬಕ್ಕೆ ಬೆಂಬಲವಾಗಿ ವಿಶ್ವ ಕರ್ಮ ಸಮಾಜ ನಿಲ್ಲಬೇಕು. ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಹೆಣ್ಣು ಮಕ್ಕಳನ್ನು ಕೈಬಿಟ್ಟ ಉದಾಹರಣೆಯಿಲ್ಲ. ಹುಡುಗನಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ಧ್ಯೇಯವಲ್ಲ. ನಡೆದಿರುವ ಘಟನೆಗೆ ಇಬ್ಬರು ಕಾರಣರಾಗಿರುವುದರಿಂದ ಹುಟ್ಟಿದ ಮಗು ಬಲಿಯಾಗಬಾರದು ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.

ಬೊಳುವಾರು ಶ್ರೀ ವಿಶ್ವಕರ್ಮ ಸಭಾ ಭವನದಲ್ಲಿ ವಿಶ್ವಕರ್ಮ ಸಮಾಜವರನ್ನುದ್ದೇಶಿಸಿ ಮಾತನಾಡಿದರು.

ಹೆಣ್ಣು ಮಗುವಿಗೆ ಜೀವನ ಬೇಕಾಗಿದ್ದು, ಆಕೆಗೆ ಗಂಡನ ಅವಶ್ಯಕತೆಯಿದೆ. ಈಗಾಗಲೇ ಹುಟ್ಟಿದ ಗಂಡು ಮಗುವಿಗೆ ಅಪ್ಪ ಬೇಕು. ಹುಡುಗನ ತಂದೆ ತಾಯಿಗೆ ಮನವರಿಕೆ ಮಾಡಿಸುವ ಕೆಲಸ ಮಾಡಬೇಕು. ಜಾತಿ ಆಚಾರ ವಿಚಾರ ನೋಡದೆ, ಸಂಬಂಧ ಜೋಡಿಸುವ ಕೆಲಸ ನಾವು ಮಾಡಬೇಕು ಎಂದರು.

ವಿಶ್ವಕರ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಒಕ್ಕೂಟ ಅಧ್ಯಕ್ಷ ಮಧು ಆಚಾರ್ಯ, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಮೈಸೂರು ವಿಶ್ವಕರ್ಮ ಜಿಲ್ಲಾ ಸಂಘ ಅಧ್ಯಕ್ಷ ರಿಷಿ ಆಚಾರ್ಯ, ಪುತ್ತೂರು ಪುರಸಭೆ ಮಾಜಿ ಸದಸ್ಯ ಸುರೇಂದ್ರ ಆಚಾರ್ಯ, ಕರ್ನಾಟಕ ರಾಜ್ಯ ಸಂಘ ಅಧ್ಯಕ್ಷ ಮದ್ದೂರು ಬಸವರಾಜ್, ಮಂಡ್ಯದ ಸೇವಂತ್ ಆಚಾರ್ಯ, ದಕ್ಷಿಣ ಕನ್ನಡ ವಿಶ್ವಕರ್ಮ ಹಿತರಕ್ಷಣಾ ಸಂಘದ ಸುರೆಂದ್ರ ಆಚಾರ್ಯ, ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪಿ. ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ವಿಶ್ವಕರ್ಮ ಶ್ರೀಧರ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.