ಬೀರೂರು ಪುರಸಭೆಯಲ್ಲಿ ಅಧ್ಯಕ್ಷೆ ವನಿತಾ ಮಧು ಬಾವಿಮನೆ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಎನ್.ಎಂ.ನಾಗರಾಜ್, ಜಿ.ಪ್ರಕಾಶ್, ಎಂ.ಪಿ.ಸುದರ್ಶನ್, ಬಿ.ಆರ್.ಮೋಹನ್‌ಕುಮಾರ್, ಮಾನಿಕ್ ಬಾಷಾ ಇತರರಿದ್ದರು. 
ನ್ಯೂಸ್

ದುಡಿಯುವ ವರ್ಗಕ್ಕೆ ಪ್ರೇರಣೆ

ಜಿ. ಗಜೇಂದ್ರ

ಬೀರೂರು: ವಿಶ್ವಕರ್ಮ ಎಂಬ ಪದ ಒಂದು ಸಮುದಾಯಕ್ಕೆ ಸೀಮಿತವಲ್ಲ, ವಿಶ್ವಕರ್ಮ ಜನಾಂಗದ ದೇವತೆಯೂ ಅಲ್ಲ. ಬದಲಾಗಿ ಜಗತ್ತಿನ ಸೃಷ್ಟಿಕರ್ತ ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.
ಪುರಸಭೆಯಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಇಂಜಿನಿಯರ್‌ಗಳು, ಕುಶಲಕರ್ಮಿಗಳು, ಕಾರ್ಮಿಕರು, ಶಿಲ್ಪಿಗಳು ಸೇರಿದಂತೆ ಸಮಸ್ತ ದುಡಿಯುವ ವರ್ಗಕ್ಕೆ ವಿಶ್ವಕರ್ಮರು ಪ್ರೇರಣೆಯಾಗಿದ್ದಾರೆ. ವಿಶ್ವಕರ್ಮ ಸಮಾಜ ಜಗತ್ತಿಗೆ ಅನನ್ಯ ಕೊಡುಗೆ ನೀಡಿದೆ. ರೈತರಿಗೆ ಕೃಷಿ ಸಾಮಗ್ರಿಗಳನ್ನು ಒದಗಿಸುವ ಮೂಲಕ ರೈತರ ಬೆನ್ನೆಲುಬು ಆಗಿದ್ದಾರೆ ಎಂದರು. ಸಮಾಜದ ಮುಖಂಡ ಮಲ್ಲಿಕಾರ್ಜುನ್ ಮಾತನಾಡಿ, ಸನಾತನ ಹಿಂದು ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಜಯಂತಿ ಮುಖ್ಯ ಪಾತ್ರ ವಹಿಸುತ್ತವೆ. ಜಾತಿಗಳನ್ನು ಮನೆಯಲ್ಲಿಟ್ಟು ಹಿಂದು ಧರ್ಮದ ಆರಾಧಕರಾಗಬೇಕು ಎಂದರು.
ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯರಾದ ಎಂ.ಪಿ.ಸುದರ್ಶನ್, ಬಿ.ಆರ್.ಮೋಹನ್ ಕುಮಾರ್, ಮಾನಿಕ್ ಬಾಷಾ, ಲಕ್ಷ್ಮಣ್, ಲೋಕೇಶಪ್ಪ, ಜ್ಯೋತಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ವಿಶ್ವೇಶ್ವರಾಚಾರ್, ಲತಾ, ರವಿಶಂಕರ್, ನಾಗರಾಜ್, ಕುಮಾರ್, ಚಂದನ್, ಧನಂಜಯ, ಮುಖಂಡರಾದ ಮಧು ಬಾವಿಮನೆ, ಬಿ.ಎಂ.ರುದ್ರಪ್ಪ, ಸಂತೋಷ್ ಮತ್ತು ಪುರಸಭೆ ಅಧಿಕಾರಿಗಳು ಮತ್ತು ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ಇದ್ದರು.